More

    ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

    ದುಬೈ: ಒಂದೆಡೆ ತುತ್ತು ಅನ್ನಕ್ಕೂ ಹೋರಾಟ ನಡೆಸುವ ಮಂದಿ ಕೋಟಿ ಕೋಟಿಯಷ್ಟು ಇದ್ದರೆ, ಇನ್ನು ಕೆಲವರಿಗೆ ಕೋಟಿ ಕೋಟಿ ರೂಪಾಯಿ ಎಂದರೆ ಕಸಕ್ಕೆ ಸಮ. ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ತಿಳಿಯದೇ, ಯಾವುದ್ಯಾವುದಕ್ಕೋ ಖರ್ಚು ಮಾಡುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

    ಈ ಎರಡನೆಯ ಸಾಲಿಗೆ ಸೇರಿರುವವರಲ್ಲಿ ದುಬೈನ ಆಗರ್ಭ ಶ್ರೀಮಂತ ಯುವಕನೂ ಒಬ್ಬ. ಹೆಸರು ಬಲ್‌ವೀಂದರ್‌ ಸಹಾನಿ. ಅವನು ಮಾಡಿರುವುದು ಏನು ಗೊತ್ತಾ? ತನ್ನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂಪಾಯಿ ನೀಡಿದ್ದಾನೆ! ತಮಗೆ ಇಷ್ಟವಾದ, ತಮ್ಮ ಜಾತಕಕ್ಕೆ ಸರಿಹೊಂದುವ ಅಥವಾ ತುಂಬಾ ಕುತೂಹಲ ಎನಿಸುವ ನಂಬರ್‌ಗಳನ್ನು ತಮ್ಮ ವಾಹನಕ್ಕೆ ಪಡೆಯುವುದಾದರೆ ಲಕ್ಷಾಂತರ ರೂಪಾಯಿ ನೀಡಿರುವವರ ಬಗ್ಗೆ ನೀವೆಲ್ಲಾ ಕೇಳಿರಬಹುದು. ಆದರೆ ಈಗ ಒಂದಲ್ಲಾ… ಎರಡಲ್ಲಾ… 52 ಕೋಟಿ ರೂಪಾಯಿಗಳನ್ನು ನೀಡಿದ್ದಾನೆ.

    ನಂಬರ್‌ಗೇ ಇಷ್ಟೊಂದು ದುಡ್ಡು ಕೊಟ್ಟಿದ್ದಾನೆ ಎಂದ ಮೇಲೆ ಆ ಕಾರಿನ ಬೆಲೆ ಎಷ್ಟು ಇರಬಹುದಪ್ಪಾ ಎಂದು ನೀವು ಅಂದುಕೊಂಡಿರಲಿಕ್ಕೆ ಸಾಕು. ಆದರೆ ನೀವು ಹಾಗೆಂದುಕೊಂಡರೆ ಅದು ತಪ್ಪು. ಏಕೆಂದರೆ ಈತ ತನ್ನ ಕಾರಿಗೆ ನೀಡಿರುವುದು 25 ಕೋಟಿ ರೂಪಾಯಿಗಳು. ಅಂದರೆ ತನ್ನ ಕಾರಿನ ದುಪ್ಪಟ್ಟು ಹಣವನ್ನು ನಂಬರ್‌ ಪ್ಲೇಟ್‌ಗೆ ನೀಡಿದ್ದಾರೆ.

    ಅಂದಹಾಗೆ ಈ ಅದೃಷ್ಟವಂತ ಕಾರು, ‌ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾದ ಬುಗಾಟಿ ಚಿರೋನ್​. ಆಗರ್ಭ ಸಿರಿವಂತರು ಮಾತ್ರ ಖರೀದಿಸಬಹುದಾದ ಈ ಕಾರು ಇರುವುದು ಕೆಲವರಲ್ಲಿ ಮಾತ್ರ. ಆದರೂ 25 ಕೋಟಿ ರೂ ಕಾರಿಗೆ 52 ಕೋಟಿ ಕೊಟ್ಟು ನಂಬರ್‌ ಪ್ಲೇಟ್‌ ಖರೀದಿ ಮಾಡಿರುವುದು ಮಾತ್ರ ಹಲವರ ಹುಬ್ಬೇರಿಸುವಂಥದ್ದೇ.

    ಅಷ್ಟಕ್ಕೂ ಆ ನಂಬರ್‌ ಯಾವುದು ಎಂದರೆ 9. ಈತನಿಗೆ ನಂ. 9 ಅದೃಷ್ಟ ತಂದಿದೆಯಂತೆ. ಈ ಸಂಖ್ಯೆಯಿಂದಲೇ ಈತ ಅತ್ಯಂತ ಶ್ರೀಮಂತನಾಗಿರುವುದಂತೆ. ಆದಕ್ಕಾಗಿಯೇ ತನ್ನ ಕಾರಿಗೆ ಇದೇ ಸಂಖ್ಯೆ ಬರಬೇಕು ಎಂದು ಆತ ಖರೀದಿ ಮಾಡಿದ್ದಾನೆ.

    ಬೆಳ್ಳಂಬೆಳಕ್ಕೆ ಮಾಸ್ಕ್‌ ಘಟಕದಲ್ಲಿ ಅಗ್ನಿ ಸ್ಫೋಟ: ಒಬ್ಬನ ಸಜೀವ ದಹನ

    ಸಾಕಪ್ಪಾ ಸಾಕು ವಿದೇಶ ಸಹವಾಸ: ಸೀದಾಸಾದಾ ಮಹಿಳೆ ಟ್ರೇನ್​ನಿಂದ ಇಳಿಯುತ್ತಿದ್ದಂತೆಯೇ ‘ಅರೆಸ್ಟ್​’

    ಭಾರತದ ವಿಮಾನವನ್ನೇ ಹೈಜಾಕ್​ ಮಾಡಿಸಿದ್ದ ಮೋಸ್ಟ್​ ವಾಂಟೆಡ್​ ಉಗ್ರನನ್ನು ಬಿಡುಗಡೆ ಮಾಡಿದ ಪಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts