More

    ತಮ್ಮ ನಾಯಿಗೆ ಕಚ್ಚಿತೆಂದು ಪಕ್ಕದ ಮನೆಯ ನಾಯಿಯ ಮೇಲೆ ಇದೆಂಥ ಹೀನ ಕೃತ್ಯ! ಸಾವು ಬದುಕಿನ ನಡುವೆ ಶ್ವಾನ

    ಕೆ.ಆರ್​.ಪುರ (ಬೆಂಗಳೂರು): ಬೆಂಗಳೂರಿನ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿ ಕೆಲವು ವ್ಯಕ್ತಿಗಳು ಅಮಾನುಷವಾಗಿ ನಡೆದುಕೊಂಡು ನಾಯಿಯನ್ನು ಮನಸೋ ಇಚ್ಚೇ ಥಳಿಸಿ ವಿಕೃತಿ ಮೆರೆದಿದ್ದಾರೆ.

    ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥಲೇಔಟ್​ನ ಗದ್ದಿಗೆಪ್ಪ ಅವರಿಗೆ ಸೇರಿದ ನಾಯಿ ತೀವ್ರ ದಾಳಿಗೆ ಒಳಗಾಗಿದೆ. ಪಕ್ಕದ ಮನೆ ನಾಗರಾಜ್ ಅವರ ಮೂರು ಜನ ಮಕ್ಕಳಾದ ರಾಹುಲ್, ಲೋಹಿತ್ ಮತ್ತು ರಂಜಿತ್ ನಾಯಿನ ಮನಬಂದಂತೆ ಥಳಿಸಿರುವ ಕಿಡಿಗೇಡಿಗಳು.

    ಗದ್ದಿಗೆಪ್ಪರವರು ವಾಸವಿದ್ದ ಮನೆಯ ಪಕ್ಕದ ರಸ್ತೆಯವರಾದ ಈ ಮೂವರು ದೊಣ್ಣೆಗಳಿಂದ ನಾಯಿ ಮೇಲೆ ಎರಗಿ ಮನಸೋ ಇಚ್ಚೆ ಥಳಿಸಿದ್ದಾರೆ. ನಾಗರಾಜ್ ಅವರ ನಾಯಿಯನ್ನು ಗದ್ದಿಗೆಪ್ಪರವರ ನಾಯಿ ಕಚ್ಚಿದೆ ಎಂದು ಕಾರಣ ನೀಡಿ ಈ ರೀತಿ ಚಿತ್ರಹಿಂಸೆ ನೀಡಲಾಗಿದೆ.

    ದಾಳಿತ ತೀವ್ರತೆಗೆ ಗದ್ದಿಗೆಪ್ಪರವರ ನಾಯಿಯ ತಲೆಗೆ ತೀವ್ರ ಗಾಯಗಳಾಗಿವೆ. ಕಣ್ಣುಗುಡ್ಡೆಯಿಂದ ಮಾಂಸ ಹೊರಬಂದಿದ್ದು, ನಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಬದುಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

    ರಾಹುಲ್, ರಜತ್ ಮತ್ತು ರಂಜಿತ್ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಗದಿಗೆಪ್ಪನವರು ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO: ನಾಡಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆಯುಧ ಪೂಜೆ ಮಾಡಿದ ಶಾಸಕ!

    ಟೈಲರ್​ ಕನ್ಹಯ್ಯಾಲಾಲ್​ ಕೊಲೆ ಕಣ್ಣಾರೆ ಕಂಡ ಸಾಕ್ಷಿದಾರನಿಗೆ ಬ್ರೈನ್​ ಹ್ಯಾಮರೇಜ್​: ಶಸ್ತ್ರಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts