More

    ಆದಾಯಕ್ಕೂ ಮೀರಿದ ಡಬಲ್​ ಆಸ್ತಿ! ಡಿಕೆಶಿಗೆ ಸಿಬಿಐನಿಂದ ಸಮನ್ಸ್​- ಹಾಜರಾಗಲು 2 ದಿನ ಗಡುವು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಇದೀಗ ತಮ್ಮ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚು ಆಸ್ತಿಯನ್ನು ಗಳಿಸಿರುವ ಆರೋಪ ಎದುರಿಸುತ್ತಿದ್ದು, ನಿನ್ನೆಯಷ್ಟೇ ಸಿಬಿಐ ದಾಳಿ ನಡೆಸಿತ್ತು.

    ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಕಾರಣ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಡಿಕೆಶಿಯವರಿಗೆ ಸೇರಿರುವ 14 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ವೇಳೆ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಬಯಸಿದ್ದಾರೆ. ದಾಳಿಯ ವೇಳೆ 57 ಲಕ್ಷ ಹಣ ಹಾಗೂ ಕೆಲವೊಂದು ಮಹತ್ವದ ದಾಖಲೆಗಳನ್ನು ಅಕಾರಿಗಳು ವಶಕ್ಕೆ ಪಡೆದಿದ್ದರು.

    ಇದನ್ನೂ ಓದಿ: ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕಾರಣವೇನು? ₹50 ಲಕ್ಷ ಸೀಜ್​, ಕೆಪಿಸಿಸಿ ಅಧ್ಯಕ್ಷ ಅರೆಸ್ಟ್​?

    ಕಳೆದ 5 ವರ್ಷದ ಅವಧಿಯಲ್ಲಿ ಡಿಕೆಶಿ ಅವರ ಆದಾಯ 33.92 ಕೋಟಿ ರೂಪಾಯಿಯಿಂದ 128.60 ಕೋಟಿ ರೂಪಾಯಿಯಷ್ಟು ಏರಿಕೆ ಆಗಿದೆ. ಅದಂರೆ ಈ ಅವಧಿಯಲ್ಲಿ ಆದಾಯಕ್ಕೂ ಮೀರಿ ಶೇಕಡ 44ರಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಆರೋಪವಿದ್ದು, ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

    ಇದರಿಂದ ಈ ಎಲ್ಲಾ ಆಸ್ತಿಗಳು ಅವರಿಗೆ ಹೇಗೆ ಬಂದವು, ಇದರ ಮೂಲ ಯಾವುದು ಇತ್ಯಾದಿಗಳ ಬಗ್ಗೆ ಡಿಕೆಶಿ ಸಿಐಬಿ ಮುಂದೆ ಹೇಳಬೇಕಿದೆ. ಒಂದು ವೇಳೆ ತಮ್ಮ ಆದಾಯದ ಕುರಿತು ಸೂಕ್ತ ದಾಖಲೆ ತೋರಿಸುವಲ್ಲಿ ವಿಫಲರಾದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧನವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!

    ಡಿಕೆಶಿಗೆ ಡಬಲ್​ ಶಾಕ್​! ಆದಾಯ ಮೀರಿ ಆಸ್ತಿ ಗಳಿಕೆ ಆರೋಪ- ದಾಖಲಾಯ್ತು ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts