More

    ವಿಚ್ಛೇದನ ಕೊಟ್ಟ ಮೇಲೆ ಮತ್ತೆ ಒಂದಾಗಲು ಮದ್ವೆಯಾಗಲೇಬೇಕಾ?

    ವಿಚ್ಛೇದನ ಕೊಟ್ಟ ಮೇಲೆ ಮತ್ತೆ ಒಂದಾಗಲು ಮದ್ವೆಯಾಗಲೇಬೇಕಾ?ಪ್ರಶ್ನೆ: ಕಳೆದ ವರ್ಷ ನನ್ನ ಮತ್ತು ಪತ್ನಿ ನಡುವೆ ಜಗಳವಾಗಿ ಡಿವೋರ್ಸ್​ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ಡಿವೋರ್ಸ್‌ ಆಗಿ ವರ್ಷವಾಗಿದೆ. ಇದೀಗ ಪತ್ನಿ ಮಕ್ಕಳಿಗೋಸ್ಕರ ಮತ್ತೆ ಮದುವೆಯಾಗೋಣ ಎನ್ನುತ್ತಿದ್ದಾಳೆ. ನನಗೂ ಸರಿ ಎನಿಸಿದೆ, ಈಗ ಏನು ಮಾಡಬೇಕು? ಮತ್ತೆ ಮದುವೆಯಾಗಬೇಕಾ?

    ಉತ್ತರ: ನೀವಿಬ್ಬರೂ ಮತ್ತೆ ಮರುಮದುವೆ ಆಗಬಹುದು. ಹಾಗೆ ಮರುಮದುವೆ ಆಗುವುದಕ್ಕೆ ಕಾನೂನಿನಲ್ಲಿ ಅಡಚಣೆ ಇಲ್ಲ. ಒಮ್ಮೆ ವಿಚ್ಛೇದನ ಮಾಡಿಕೊಂಡ ದಂಪತಿಗಳೇ ಮತ್ತೆ ಮರುಮದುವೆ ಆಗಬಹುದು. ಆ ವಿವಾಹವನ್ನು ನೋಂದಣಿ ಮಾಡಿಸಿ.
    ವಿವಾಹಕ್ಕೆ ಮುಂಚೆ ವಿವಾಹ ಪೂರ್ವ ಸಮಾಲೋಚನೆಗೆ ( ಪ್ರೀ ಮರಿಟಲ್ ಕೌನ್ಸೆಲಿಂಗ್) ಇಬ್ಬರೂ ಹೋಗಿ. ಯಾವ ಕಾರಣದಿಂದ ನೀವಿಬ್ಬರೂ ವಿಚ್ಛೇದನ ಪಡೆದಿದ್ದಿರೋ ಅದೇ ವಿಷಯಕ್ಕೆ ಮತ್ತೆ ಜಗಳ ಪ್ರಾರಂಭ ಆಗಬಾರದು . ಕೇವಲ ಮಗಳ ಮೇಲೆ ಇಷ್ಟ ಎಂದು ಮದುವೆ ಆಗುವುದಕ್ಕಿಂತ ನಿಮ್ಮಿಬ್ಬರಲ್ಲಿ ಸಾಮರಸ್ಯ ಇರಬಹುದೇ ಎನ್ನುವುದರ ಬಗ್ಗೆಯೂ ಆಲೋಚಿಸಿ. ದಿನ ನಿತ್ಯ ಮಕ್ಕಳ ಮುಂದೆ ಜಗಳ ಆಡಿ ಮಕ್ಕಳ ಮನಸ್ಸಿಗೂ ನೋವಾಗದಂತಹ ವ್ಯವಸ್ಥೆಯ ಆಯ್ಕೆ ಮಾಡಿಕೊಳ್ಳಿ.

    VIDEO: ‘ಮೇಡಂರಿ… ಮೊದ್ಲು 10 ಲಕ್ಷ ಕೊಟ್ಟು ಚುಚ್ಚಿ… ಹೆಚ್ಚೂಕಮ್ಮಿ ಆದ್ರೆ ನೀವೇ ಜವಾಬ್ದಾರರು ಎಂದು ಬರೆದ್ಕೊಡ್ತೀರಾ?

    ಭೂಕಂಪಕ್ಕೆ ಮೃತ್ಯಕೂಪವಾದ ಹೈಟಿ: ಬೀದಿಬೀದಿಗಳಲ್ಲಿ ಹೆಣಗಳ ರಾಶಿ- ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts