More

    ನನಗೆ ಮರುಮದುವೆಯಾಗಿದೆ, ಮೊದಲ ಪತ್ನಿ ಜೀವನಾಂಶಕ್ಕೆ ಅರ್ಜಿ ಹಾಕಿದ್ರೆ ಅವಳಿಗೂ ಕೊಡಲೇಬೇಕಾ?

    ನನಗೆ ಮರುಮದುವೆಯಾಗಿದೆ, ಮೊದಲ ಪತ್ನಿ ಜೀವನಾಂಶಕ್ಕೆ ಅರ್ಜಿ ಹಾಕಿದ್ರೆ ಅವಳಿಗೂ ಕೊಡಲೇಬೇಕಾ?ಪ್ರಶ್ನೆ: ನನಗೆ ಮತ್ತು ನನ್ನ ಪತ್ನಿಗೆ ವಿಚ್ಛೇದನ ಆಗಿ ಮೂರು ವರ್ಷ ಆಗಿದೆ. ನಾನು ಮರುಮದುವೆ ಆಗಿ ನನಗೆ ಮಗಳು ಇದ್ದಾಳೆ. ಈಗ ನನ್ನ ಮೊದಲ ಹೆಂಡತಿ ಅವಳಿಗೆ ಜೀವನಾಂಶ ಕೊಡು ಎಂದು ಕೇಳುತ್ತಿದ್ದಾಳೆ. ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ವಿಚ್ಛೇದನದ ಆದೇಶವನ್ನು ಅವಳು ಚಾಲೆಂಜ್ ಸಹ ಮಾಡಿಲ್ಲ. ನಾನೇಕೆ ಅವಳಿಗೆ ಜೀವನಾಂಶ ಕೊಡಬೇಕು?

    ಉತ್ತರ: ವಿಚ್ಛೇದಿತ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಶಕ್ತಿ ಇಲ್ಲದೇ ಹೋದರೆ, ಆಕೆ ಮರು ಮದುವೆ ಆಗಿರದೇ ಇದ್ದರೆ, ಆಕೆಯ ವಿಚ್ಛೇದಿತ ಪತಿ ಆಕೆಗೆ ಜೀವನಾಂಶ ಕೊಡಲೇಬೇಕಾಗುತ್ತದೆ. ವಿಚ್ಛೇದನ ಜೀವನಾಂಶದ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ನಿಮ್ಮ ಪೂರ್ವ ಪತ್ನಿಗೆ ಕೆಲಸ ಸಿಗುವವರೆಗೆ ಅಥವಾ ಆಕೆ ಮರು ಮದುವೆ ಆಗುವವರೆಗೆ ನೀವು ಆಕೆಗೆ ಜೀವನಾಂಶ ಕೊಡಲೇ ಬೇಕಾಗುತ್ತದೆ.

    ವಿಚ್ಛೇದನದ ಆದೇಶವನ್ನು ನಿಮ್ಮ ಪೂರ್ವ ಪತ್ನಿ ಚಾಲೆಂಜ್ ಮಾಡಿರದೇ ಹೋದರೂ ಆಕೆಗೆ ಜೀವನಾಂಶದ ಹಕ್ಕು ಇರುತ್ತದೆ.

    ಭಾವಿ ಅಳಿಯನಿಗೆ ಷರತ್ತು ವಿಧಿಸಿ ಮಗಳನ್ನು ಕಳೆದುಕೊಂಡ ಅಪ್ಪ- ಮನನೊಂದು ಆತ್ಮಹತ್ಯೆ ಮಾಡಿಕೊಂಡ ಜೋಡಿ!

    ಲ್ಯಾಪ್‌ಟಾಪ್‌, ಫೋನ್‌ಗಳನ್ನೂ ಸೋಪ್‌ ಹಾಕಿ ತೊಳೀತಾಳೆ, ಆರು ಸಲ ಸ್ನಾನ ಮಾಡ್ತಾಳೆ… ಬೆಂಗಳೂರಿನ ಟೆಕ್ಕಿಯಿಂದ ಕೇಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts