More

    ಲೇಡಿ ಆಪರೇಟರ್‌ ವಿರುದ್ಧ ತನಿಖೆ ನಡೀತಿರುವಾಗಲೇ ಕಚೇರಿಗೆ ಬೆಂಕಿ- ದಾಖಲೆ ನಾಶ

    ದೇವನಹಳ್ಳಿ: ದೇವನಹಳ್ಳಿಯ ಗ್ರಾಮ ಪಂಚಾಯ್ತಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ಹಲವು ಮಹತ್ವದ ದಾಖಲೆಗಳನ್ನು ನಾಶ ಪಡಿಸಿರುವ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಂಚಾಯ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಕನ್ನಮಂಗಲ ಪಂಚಾಯ್ತಿ ಏರ್‌ಪೋರ್ಟ್‌ ಭಾಗದ ಶ್ರೀಮಂತ ಪಂಚಾಯ್ತಿ ಎಂದೇ ಹೆಸರು ಪಡೆದಿದೆ.

    ಈ ಘಟನೆಗೆ ಇದೀಗ ಕುತೂಹಲದ ತಿರುವು ಪಡೆದುಕೊಂಡಿದ್ದು, ಕಂಪ್ಯೂಟರ್ ಆಪರೇಟರ್ ಅನುರಾಧಾ ಎನ್ನುವವರ ಹೆಸರು ಥಳಕು ಹಾಕಿಕೊಂಡಿದೆ. ಇದಕ್ಕೆ ಕಾರಣ, ಕಳೆದ‌ 15 ದಿನಗಳಿಂದ ಪಂಚಾಯ್ತಿಯ ಆಪರೇಟರ್‌ ಆಗಿರುವ ಅನುರಾಧ ಅವರ ಮೇಲೆ ತನಿಖೆ ನಡೆಯುತ್ತಿತ್ತು.

    ಪಂಚಾಯ್ತಿ ವ್ಯಾಪ್ತಿಗೆ ಬರುವ ದೊಡ್ಡ ದೊಡ್ಡ ಬಿಲ್ಡಿಂಗ್ಸ್, ರೆಸಾರ್ಟ್ ಗಳು ಕಟ್ಟಿದ್ದ ಲಕ್ಷ ಲಕ್ಷ ಕಂದಾಯ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಇವರ ಹೆಸರು ಕೇಳಿಬಂದಿದೆ. ಜಿಲ್ಲಾ ಪಂಚಾಯ್ತಿ ಸಿಓ ತಂಡದಿಂದ ತನಿಖೆ ನಡೆಯುತ್ತಿದೆ. ಇವರು ಕಂಪ್ಯೂಟರ್ ಆಪರೇಟರ್ ಲಕ್ಷ ಲಕ್ಷ ಕಂದಾಯ ಪಡೆದು, ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿರುವ ಆರೋಪ ಎದುರಿಸುತ್ತಿದ್ದಾರೆ.

    ನಿನ್ನೆಯಷ್ಟೇ ಹಲವು ದಾಖಲೆಗಳನ್ನು ಜಿಲ್ಲಾ ಪಂಚಾಯ್ತಿ ತನಿಖೆ ತಂಡ ಪರಿಶೀಲಿಸಿದ್ದು, ಇದರ ಬೆನ್ನಲ್ಲೇ ಬೆಂಕಿ ಹಚ್ಚಿ ದಾಖಲೆಗಳ ನಾಶ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆಯೇ ಅನುರಾಧಾ ಅವರ ಮೇಲೆ ಆರೋಪ ಬಂದಿದ್ದು, ಸ್ಥಳಕ್ಕೆ ತಾಲೂಕು ಪಂಚಾಯ್ತಿ ಇಓ ವಸಂತ್ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

    ಇತ್ತಿಚೆಗೆ ಪಂಚಾಯಿತಿಯಲ್ಲಿ 1.5 ಕೋಟಿ ರೂ.ಹಗರಣ ನಡೆದುರುವ ಬಗ್ಗೆ ತನಿಖೆ ನಡೆಯುತ್ತಿತ್ತು. ತನಿಖೆ ದಿಕ್ಕು ತಪ್ಪಿಸಲು ಈ ಕೃತ್ಯ ಎಸಗಲಾಗಿದೆ. ಹಗರಣ ಮುಚ್ಚಿ ಹಾಕಲು ದಾಖಲೆಗಳನ್ನು ನಾಶ ಮಾಡುವ ಉದ್ದೇಶದಿಂದ ನಡೆದ ಪೂರ್ವಯೋಜಿತ ಕೃತ್ಯ ಇದಾಗಿದೆ. ಇತ್ತಿಚೆಗೆ ಡಾಟಾ ಎಂಟ್ರಿ ಮಾಡುತ್ತಿದ್ದ ಅನುರಾಧಾ ಅವರನ್ನು ಭ್ರಷ್ಟಾಚಾರದ ಸಂಬಂಧ ಅಮಾನತು ಮಾಡಲಾಗಿತ್ತು. ಅಧಿಕಾರಿಗಳು ಮತ್ತು ಪಂಚಾಯಿತಿ ಆಡಳಿತ ಮಂಡಳಿ ಎಲ್ಲರೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅನುರಾಧಾ ಆರೋಪಿಸಿದ್ದರು. ಈ ಎಲ್ಲಾ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

    ಈ ನಾಣ್ಯಗಳು ನಿಮ್ಮಲ್ಲಿದ್ದರೆ 10 ಲಕ್ಷ ರೂ. ಗೆಲ್ಲಬಹುದು- ಅದೃಷ್ಟ ಪರೀಕ್ಷಿಸಿಕೊಳ್ಳುವ ಸಮಯವಿದು…

    ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts