More

    ಲಸಿಕೆ ಹಾಕಿಸಿಕೊಂಡ ಸರ್ಟಿಫಿಕೇಟ್‌ನಲ್ಲಿ ಡಿಟೇಲ್ಸ್‌ ತಪ್ಪಾಗಿದೆಯೆ? ಸರಿ ಮಾಡುವುದು ಬಲು ಸುಲಭ

    ನವದೆಹಲಿ: ಈಗ ಕರೊನಾ ಲಸಿಕೆಯನ್ನು ಕೆಲವು ಕಡೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಹಾಕಿಸಿಕೊಂಡರಷ್ಟೇ ಕೆಲವೊಂದು ಸೌಲಭ್ಯಗಳು ಸಿಗುತ್ತವೆ ಎಂದು ಕೆಲವೆಡೆಗಳಲ್ಲಿ ಘೋಷಣೆ ಮಾಡಿಯಾಗಿದೆ. ಅದೇ ಇನ್ನೊಂದೆಡೆ ಹೊರ ರಾಜ್ಯ, ಹೊರ ದೇಶಗಳಿಗೆ ಹೋಗುವುದಿದ್ದರೂ ಕೆಲವು ಜಿಲ್ಲಾಡಳಿತಗಳು, ರಾಜ್ಯಗಳು ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರವನ್ನು ಕೇಳುತ್ತವೆ.

    ಆದರೆ ಲಸಿಕೆ ಹಾಕಿಸಿಕೊಂಡವರಿಗೂ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ. ಅದೇನೆಂದರೆ ಆನ್‌ಲೈನ್‌ ಮೂಲಕ ನೀಡುವ ಪ್ರಮಾಣ ಪತ್ರದಲ್ಲಿ ಹೆಸರು, ವಿಳಾಸ, ಸರ್‌ನೇಮ್‌ ಇಲ್ಲವೇ ಇನ್ನಾವುದೋ ಸ್ಪೆಲ್ಲಿಂಗ್‌ ಮಿಸ್ಟೆಕ್‌ ಅಥವಾ ಮಾಹಿತಿಯೇ ತಪ್ಪು ಇವೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುವ ಸಾಧ್ಯತೆಗಳೂ ಇವೆ. ಅದರಲ್ಲಿಯೂ ಹೊರ ರಾಜ್ಯ ಇಲ್ಲವೇ ವಿದೇಶಗಳಿಗೆ ಹೋಗುವ ಸಂದರ್ಭ ಬಂದರೆ ಹೆಸರು, ಸರ್‌ನೇಮ್‌, ಲಿಂಗ ಎಲ್ಲವೂ ಸರಿಯಾಗಿ ನಮೂದಾಗಿರಬೇಕಾಗುತ್ತದೆ.

    ಒಂದು ವೇಳೆ ಯಾವುದೇ ದೋಷಗಳು ಉಂಟಾಗಿದ್ದರೆ ಇನ್ನುಮುಂದೆ ಅದನ್ನು ಸುಲಭದಲ್ಲಿ ಸರಿಪಡಿಸಲು ಕೇಂದ್ರ ಸರ್ಕಾರ ಸೌಲಭ್ಯ ನೀಡಿದೆ. ನೀವು ನೇರವಾಗಿ ಕೋವಿನ್ ವೆಬ್‍ಸೈಟ್‍ಗೆ ಹೋಗಿ ಎಡಿಟ್ ಮಾಡಬಹುದಾಗಿದೆ.

    ಲಸಿಕೆಯ ಪ್ರಮಾಣಪತ್ರದಲ್ಲಿರುವ ವರ್ಷ, ಲಿಂಗ, ಹೆಸರುಗಳು ಪಾಸ್‍ಪೋರ್ಟ್ ನಲ್ಲಿರುವ ವಿವರಗಳಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರಿಂದ ಇಂಥದ್ದೊಂದು ಸೌಲಭ್ಯ ಕಲ್ಪಿಸಲಾಗಿದೆ.

    ಡಿಟೇಲ್ಸ್‌ಗಳನ್ನು ಸರಿಪಡಿಸುವುದು ಹೀಗೆ:
    * www.cowin.gov.in ಕ್ಲಿಕ್ಕಿಸಿ. ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಬೇಕು.

    * ಹೀಗೆ ಮಾಡಿದ ತಕ್ಷಣ ಮೊಬೈಲ್ 6 ಸಂಖ್ಯೆಯ ಒಟಿಪಿ (OTP) ಬರುತ್ತದೆ.

    * ಓಟಿಪಿ ನಮೂದು ಮಾಡಿದ ನಂತರ ವೆರಿಫೈ ಆ್ಯಂಡ್‌ ಪ್ರೊಸೀಡ್‌ (Verify & Proceed) ಕ್ಲಿಕ್ಕಿಸಿ

    * ಅಲ್ಲಿಂದ ಅಕೌಂಟ್ ಡಿಟೇಲ್ಸ್ ಗೆ (account details) ಹೋಗಿ.

    * ಅಲ್ಲಿ ರೇಸ್‌ ಆ್ಯನ್‌ ಇಶ್ಯೂ (Raise an Issue) ಕ್ಲಿಕ್ ಮಾಡಿ.

    * ನಿಮ್ಮ ಸಮಸ್ಯೆ ಏನು (“What is the issue) ಎಂದು ಅಲ್ಲಿ ಕಾಣಿಸುತ್ತದೆ. ಆಗ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ( “Correction in certificate) ಕ್ಲಿಕ್ ಮಾಡಿ. ಅಲ್ಲಿ ಯಾವೆಲ್ಲಾ ಡಿಟೇಲ್ಸ್‌ಗಳು ತಪ್ಪಾಗಿವೆಯೋ ಅವುಗಳನ್ನು ತಿದ್ದಬಹುದು. ಎಲ್ಲಾ ಸರಿಯಾದ ಮೇಲೆ ಫಾರ್ಮ್‌ ಡೌನ್‍ಲೋಡ್ ಮಾಡಿಕೊಂಡು ಅದನ್ನು ಬೇಕಿದ್ದರೆ ಪ್ರಿಂಟ್‌ ತೆಗೆದಿಟ್ಟುಕೊಳ್ಳಬಹುದು ಇಲ್ಲವೇ ಒಂದು ಕಡೆ ಸೇವ್‌ ಮಾಡಿಟ್ಟುಕೊಳ್ಳಬಹುದು.

    ಅವಳ ಜತೆ ದೈಹಿಕ ಸಂಪರ್ಕವೇ ಆಗಿಲ್ಲ, ಮಗು ನನ್ನದ್ಹೇಗಾಗುತ್ತೆ ಎಂದ ಸಂಸದೆ ಪತಿ!

    ವಿವಿಧ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಹಣ ನೇರ ಬ್ಯಾಂಕ್‌ಗೆ, ಇಲ್ಲಿದೆ ನೋಡಿ ಡಿಟೇಲ್ಸ್‌

    ಫುಡ್‌ ಡೆಲಿವರಿ ಗರ್ಲ್‌: ಕೈಯಲ್ಲಿ ಕೆಲಸವೇ ಇಲ್ಲ ಎಂದು ಗೋಳೋ ಎನ್ನುವವರಿಗೆ ಈಕೆಯೇ ಸ್ಫೂರ್ತಿಯ ಚಿಲುಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts