More

    ನಿಷೇಧದ ಕ್ರಮವನ್ನು ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಪಿಎಫ್​ಐಗೆ ಅನುಮತಿ: ಅಧ್ಯಕ್ಷರ ನೇಮಿಸಿದ ಕೇಂದ್ರ

    ನವದೆಹಲಿ: ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ನಿಷೇಧಕ್ಕೆ ಒಳಗಾಗಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಅದರ ಎಂಟು ಅಂಗಸಂಸ್ಥೆಗಳು ತಮ್ಮ ನಿಷೇಧದ ಕುರಿತು ಪ್ರಶ್ನೆ ಮಾಡುವ ಅಧಿಕಾರವನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (UAPA) ನ್ಯಾಯಮಂಡಳಿಯಲ್ಲಿ ಪ್ರಶ್ನಿಸಬಹುದಾಗಿದೆ.

    ಈ ಹಿನ್ನೆಲೆಯಲ್ಲಿ, ನ್ಯಾಯಮಂಡಳಿಯ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಈ ನ್ಯಾಯಮಂಡಳಿಯಲ್ಲಿ ಪಿಎಫ್​ಐ ಸರ್ಕಾರದ ನಿಷೇಧಿತ ನಿರ್ಧಾರವನ್ನು ಪ್ರಶ್ನೆ ಮಾಡಬಹುದಾಗಿದೆ. ವಿಚಾರಣೆ ಬಳಿಕ ನ್ಯಾಯ ಮಂಡಳಿ, ಸರ್ಕಾರದ ನಿಲುವಿನ ಬಗ್ಗೆ ತನ್ನ ತೀರ್ಪು ನೀಡಲಿದೆ.

    ಕೇಂದ್ರ ಸರ್ಕಾರ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್ 3 ರ ಅಡಿಯಲ್ಲಿ ಪಿಎಫ್‌ಐ ಕಾನೂನುಬಾಹಿರ ಎಂದು ಘೋಷಿಸಿತು. ಐದು ವರ್ಷಗಳ ಕಾಲ ಅದರ ಮೇಲೆ ನಿಷೇಧ ಹೇರಿದೆ. ಇದನ್ನು ಈಗ ಪಿಎಫ್​ಐ ಮತ್ತು ಅಂಗಸಂಸ್ಥೆಗಳು ಪ್ರಶ್ನೆ ಮಾಡಬಹುದಾಗಿದೆ.

    ಅಷ್ಟಕ್ಕೂ ಇಂಥದ್ದೊಂದು ನ್ಯಾಯಮಂಡಳಿ ರಚಿಸಿರಲು ಕಾರಣವೇನೆಂದರೆ ಈ ನಿಷೇಧವನ್ನು ಮಾಡಿರುವುದು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 4ರ ಅಡಿ. ಈ ಕಲಮಿನ ಅಡಿ ಮಾಡಿರುವ ನಿಷೇಧವನ್ನು ನ್ಯಾಯಮಂಡಳಿಯು ದೃಢೀಕರಿಸಬೇಕು. ಅದು ದೃಢೀಕರಿಸಿದ ನಂತರವಷ್ಟೇ ನಿಷೇಧ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನ್ಯಾಯಮಂಡಳಿಯನ್ನು ರಚಿಸಿದೆ. ಈ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ ಬಳಿಕ ಸರ್ಕಾರದ ನಿರ್ಧಾರದ ಬಗ್ಗೆ ತೀರ್ಪು ನೀಡಲಿದೆ. (ಏಜೆನ್ಸೀಸ್​)

    ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ರೇಪ್​ ಕೇಸ್​: ಫೇಸ್​ಬುಕ್​ನಲ್ಲಿ ಮಾಹಿತಿ ನೀಡಿ ಸಿಕ್ಕಿಬಿದ್ದ ಕ್ರಿಕೆಟಿಗ

    ಹಾಸ್ಯಲೋಕಕ್ಕೆ ಮತ್ತೊಂದು ಬರಸಿಡಿಲು: ರಾಜು ಶ್ರೀವಾಸ್ತವ್​ ಸಾವಿನ ಬೆನ್ನಲ್ಲೇ ಕಾಮಿಡಿಯನ್ ಪರಾಗ್ ನಿಧನ!

    ಸತ್ತವನನ್ನೇ ಮದ್ವೆಯಾದ ಖತರ್ನಾಕ್​ ಬಾರ್​ ಗರ್ಲ್​! ಪಾದ್ರಿ ನೀಡಿದ ಸಾಥ್​: 20 ಕೋಟಿ ರೂ. ಗುಳುಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts