More

    ಮನೆಯಲ್ಲಿ ಮಗನ ಶವ ಬಿಟ್ಟು ರೋಗಿಗಾಗಿ ಧಾವಿಸಿದ ಡ್ರೈವರ್‌- ಮೈಸೂರು ಚಾಲಕನಿಗೆ ಜನರ ಸಲಾಂ

    ಮೈಸೂರು: ಮನೆಯಲ್ಲಿ ಮಗ ಮೃತಪಟ್ಟಿದ್ದರೂ ಆತನ ಶವವನ್ನು ಮನೆಯಲ್ಲಿಯೇ ಬಿಟ್ಟು ಆ್ಯಂಬುಲೆನ್ಸ್‌ ಚಾಲಕ ಒಬ್ಬರು ಕರ್ತವ್ಯ ಕರೆಗೆ ಓಗೊಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಸಹಾಯವಾಣಿ ಕೇಂದ್ರದ ಆ್ಯಂಬುಲೆನ್ಸ್‌ ಡ್ರೈವರ್‌ ಆಗಿರುವ ಮುಬಾರಕ್ ಅವರಿಗೆ ಎಲ್ಲೆಡೆಯಿಂದ ಜನರು ಕೊಂಡಾಡುತ್ತಿದ್ದಾರೆ. ಮೈಮೇಲೆ ಬಿಸಿನೀರು ಬಿದ್ದ ಕಾರಣ ಇವರ ಮಗುವು ಮೃತಪಟ್ಟಿತ್ತು. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕಂಗೆಟ್ಟು ಹೋಗಿದ್ದ ನಡುವೆಯೇ ಸಹಾಯವಾಣಿಯಿಂದ ರೋಗಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವಂತೆ ಕರೆ ಬಂದಿದೆ.

    ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯನ್ನು ಸಾಗಿಸಬೇಕಿತ್ತು. ಆದರೆ ತಡ ಮಾಡದ ಮುಬಾರಕ್‌ ಅವರು ಶವವನ್ನು ಮನೆಯಲ್ಲಿಯೇ ಬಿಟ್ಟು ಅದೇ ದುಃಖದೊಂದಿಗೆ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಇವರ ಕರ್ತವ್ಯ ಪ್ರಜ್ಞೆಗೆ ಆಸ್ಪತ್ರೆಯ ಸಿಬ್ಬಂದಿ ಮೂಕ ವಿಸ್ಮಿತರಾಗಿದ್ದಾರೆ.

    ಮೈಸೂರಿನ ಸಿದ್ದಿಕ್ ನಗರದ ನಿವಾಸಿಯಾಗಿರುವ ಮುಬಾರಕ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

    ರಾಬರ್ಟ್‌ ನಿರ್ಮಾಪಕನ ಕೊಲೆ ಸ್ಕೆಚ್‌ ಹಾಕಿ ನೇಪಾಳದಲ್ಲಿ ಕುಳಿತ ‘ಕರಿ ಬಾಸ್‌’ ಸಿಕ್ಕಿಬಿದ್ದದ್ದೇ ರೋಚಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts