More

    ಸೈಕಲ್​ ಕವಿ ಎಂದೇ ಪ್ರಸಿದ್ಧರಾದ ಆಶುಕವಿ ಐರಸಂಗ ಇನ್ನಿಲ್ಲ

    ಧಾರವಾಡ: ಕಾವ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರೂ ಜೀವನದುದ್ದಕ್ಕೂ ಬಡತನದಲ್ಲಿಯೇ ಬೆಂಡು ಬಳಲಿದ ಪ್ರಸಿದ್ಧ ಆಶುಕವಿ ಡಾ. ವಿ.ಸಿ. ಐರಸಂಗ ಅವರು ನಿಧನರಾಗಿದ್ದಾರೆ. 91 ವರ್ಷ ವಯಸ್ಸಾಗಿದ್ದ ಐರಸಂಗ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

    ಇವರು ಪ್ರಸಿದ್ಧಿ ಪಡೆದದ್ದು ಸೈಕಲ್​ ಕವಿ ಎಂದು. ಏಕೆಂದರೆ ಜೀವನದುದ್ದಕ್ಕೂ ಇವರು ಸೈಕಲ್ ಮೇಲೆಯೇ ಸುತ್ತಾಡುತ್ತಿದ್ದರು. ನೂರಾರು ಆಶುಕವಿತೆಗಳನ್ನು ಬರೆದಿರುವ ಅವರು, ಅವುಗಳನ್ನು ಪಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರುತ್ತಿದ್ದರು.

    ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆಯೇ ಬಂದಿದ್ದರು. ಆದ್ದರಿಂದಲೇ ಇವರು ಸೈಕಲ್​ ಕವಿ ಎಂದೇ ಚಿರಪರಿಚಿತ.

    ಇದನ್ನೂ ಓದಿ: ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನಿಲ್ಲ

    ಅನಾರೋಗ್ಯದ ಹಿನ್ನೆಲೆಯಲ್ಲಿ ಐರಸಂಗ ಅವರನ್ನು ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದ ಅವರ ಸಾಹಿತ್ಯ ಕೊಡುಗೆ ನೋಡಿ ಧಾರವಾಡದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

    ಮೃತರು ವಿಸಿ ಐರಸಂಗ ಅವರು ಮಗ, ಮಗಳು, ಮೊಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

    ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಸುಳಿಯಲ್ಲಿ ಶಾಸಕರ ಪತ್ನಿ!

    ಚುನಾವಣೆ ಬೆನ್ನಲ್ಲೇ ದೀದಿಗೆ ಬಿಗ್​ ಶಾಕ್​… ಐವರು ಸಚಿವರು ದಿಢೀರ್​ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts