More

    ಮದ್ವೆ, ಫಂಕ್ಷನ್​ಗಳಲ್ಲಿ ಅಪರಿಚಿತ ಮಕ್ಕಳು ಓಡಾಡ್ತಿದ್ರೆ ಇರಲಿ ಎಚ್ಚರ- ಹತ್ತಾರು ಲಕ್ಷ ರೂ. ಬಿಜಿನೆಸ್​ ಇದು!

    ನವದೆಹಲಿ: ಮದುವೆ ಮನೆಗೆ ಹೋದಾಗ ನಿಮ್ಮ ಅರಿವಿಗೆ ಬಾರದೇ ಪರ್ಸ್​, ಒಡವೆ ಯಾರೋ ಕದ್ದುಕೊಂಡು ಹೋಗಿರಲಿಕ್ಕೆ ಸಾಕು, ಇಲ್ಲವೇ ಇಂಥ ಘಟನೆಗಳು ನಿಮ್ಮ ಪರಿಚಯಸ್ಥರಿಗೆ ಆಗಿರಲಿಕ್ಕೆ ಸಾಕು. ಆದರೆ ನಿಮಗೆ ಗೊತ್ತಾ? ಇಂಥ ಕಳ್ಳರಲ್ಲಿ ಹೆಚ್ಚಿಗೆ ಇರುವವರು ಮಕ್ಕಳೇ. ಇವರಿಗಾಗಿಯೆ ವಿಶೇಷ ತರಗತಿಗಳೂ ನಡೆಯುತ್ತವೆ!

    ಮದುವೆ ಮನೆಗಳಲ್ಲಿ ಪರಿಚಯವೇ ಇಲ್ಲದ ಮಕ್ಕಳು ಓಡಾಡುತ್ತಿದ್ದರೆ ಅವರ ಬಗ್ಗೆ ಸ್ವಲ್ಪ ಗಮನವಿರಲಿ ಎಂದಿದ್ದಾರೆ ದೆಹಲಿ ಪೊಲೀಸರು. ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಇಂಥ ಕೈಚಳಕ ತೋರಿಸುವುದು ಇದ್ದರೂ, ಮಕ್ಕಳೇ ಹೆಚ್ಚು ಎನ್ನುವುದು ಅವರ ಅನಿಸಿಕೆ.
    ಇಂಥ ಕಳ್ಳತನ ಎಲ್ಲೆಡೆ ಇದ್ದರೂ ಸದ್ಯ ತೀರಾ ತಲೆನೋವಾಗಿದ್ದ ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ಏಳು ಮಂದಿಯನ್ನು ಅರೆಸ್ಟ್​ ಮಾಡಿದ್ದಾರೆ. ಅವರಲ್ಲಿ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.

    .ಮದುವೆಗಳಲ್ಲಿ ಕಳ್ಳತನ ಆಗುತ್ತಿವೆ ಎಂದು ಹಲವಾರು ದಿನಗಳಿಂದ ಕ್ರೈಂ ಬ್ರ್ಯಾಂಚ್‍ಗೆ ಸಾಕಷ್ಟು ದೂರುಗಳು ಬರುತ್ತಿದ್ದವು. ಪೊಲೀಸ್ ಠಾಣೆಗೆ ಬಂದಿರುವ ದೂರುಗಳ ಆಧಾರದ ಮೇಲೆ ಅಪರಾಧ ವಿಭಾಗವು ತನಿಖೆಯನ್ನು ಪ್ರಾರಂಭಿಸಿತ್ತು. ಆಗ ಮಧ್ಯಪ್ರದೇಶದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

    ಇದನ್ನೂ ಓದಿ: ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದ ವರನ ಮೇಲೆ ಮಾರ್ಗಮಧ್ಯೆಯೇ ವಧುವಿನ ಸಂಬಂಧಿಕರಿಂದ ಹಲ್ಲೆ

    ಈ ಗ್ಯಾಂಗ್‍ನಲ್ಲಿರುವವರು ಪೋಷಕರಿಂದ ಮಕ್ಕಳನ್ನು ಕಳ್ಳತನದ ಕಸುಬು ಮಾಡಲೆಂದೇ ಕರೆದುಕೊಂಡು ಬರುತ್ತಾರೆ. ನಂತರ ಮಕ್ಕಳಿಗೆ ಕಳ್ಳತನದ ತಂತ್ರಗಳನ್ನು ಕಲಿಸಿಕೊಡುತ್ತಾರೆ. ಮದುವೆಗಳಿಗೆ ಹೇಗೆ ಹೋಗುವುದು, ಹೇಗೆ ಉಡುಗೆ ತೊಡುಗೆ ತೊಡಬೇಕು ಮತ್ತು ಯಾರೊಂದಿಗೆ ಮಾತನಾಡುವುದು, ಹೇಗೆ ಕಳ್ಳತನ ಮಾಡಬೇಕು ಎಂದು ಈ ಎಲ್ಲ ವಿಷಯಗಳಿಗೆ ತರಬೇತಿ ನೀಡುತ್ತಾರೆ. ಕಳ್ಳತನದಲ್ಲಿ ಭಾಗಿಯಾಗುವ ಮಕ್ಕಳ ಪಾಲಕರಿಗೆ 10 ರಿಂದ 12 ಲಕ್ಷ ರೂಪಾಯಿಗಳನ್ನು ನೀಡುತ್ತಾರೆ, ಮಕ್ಕಳನ್ನು ಕಾಯಂ ಇಟ್ಟುಕೊಂಡು ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ಅಪರಾಧ ಪ್ರಕರಣಗಳಲ್ಲಿ ಪಳಗಿಸುತ್ತಾರೆ ಎಂಬ ಅಂಶ ಬೆಳಕಿದೆ ಬಂದಿದೆ.

    ದೆಹಲಿ ಸೇರಿದಂತೆ ಲುಧಿಯಾನ, ಜಿರಾಕ್‍ಪುರ ಮತ್ತು ಚಂಡೀಗಢದಲ್ಲಿ ನಡೆದ ಅನೇಕ ವಿವಾಹ ಸಮಾರಂಭಗಳಲ್ಲಿ ಇದೇ ಮಕ್ಕಳು ಕೈಚಳಕ ತೋರುತ್ತಿದ್ದರು. ಇವರಿಷ್ಟೇ ಸದ್ಯ ಸಿಕ್ಕಿದ್ದು, 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
    ಇಂಥ ಮಕ್ಕಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ದೊಡ್ಡ ಜಾಲವೇ ಇದೆ. ಆದ್ದರಿಂದ ಎಚ್ಚರಿಕೆಯಿಂದ ಇರಿ ಎಂದಿದ್ದಾರೆ ಪೊಲೀಸರು.

    ಯಾರು ಬೇಕಾದ್ರೂ ಪಕ್ಷ ಬಿಟ್ಟು ತೊಲಗಿ- ಹೋಗುವಾಗ ನನ್ನ ಸಾವಿಗೆ ಪ್ರಾರ್ಥಿಸಿ ಎಂದ ಮಮತಾ!

    ಅಪಾಯಕಾರಿ ಪಟ್ಟಿಯಿಂದ ಗಾಂಜಾ ಹೊರಕ್ಕೆ- ವಿಶ್ವಸಂಸ್ಥೆ ನಿರ್ಣಯಕ್ಕೆ ಒಪ್ಪಿದ ಭಾರತ: ಇಲ್ಲಿದೆ ಕಾರಣ…

    ಮಾಜಿ ಸಚಿವ ರೋಷನ್​ ಬೇಗ್​ಗೆ ಕೊನೆಗೂ ಸಿಕ್ತು ಜಾಮೀನು​- ಷರತ್ತು ವಿಧಿಸಿರುವ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts