

ತುಮಕೂರು: ಲವ್ ಮಾಡು ಅಂತಾ ದಿನಾ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯೊಬ್ಬ ಹುಡುಗಿಗೆ ಬಲವಂತವಾಗಿ ತಾಳಿ ಕಟ್ಟೋಕೆ ಪ್ರಯತ್ನಿಸಿದಾಗ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಕುಡುಗೋಲಿನಿಂದ ಕೊಲೆಗೈದಿರುವ ಘಟನೆ ಜಿಲ್ಲೆಯ ಶಿರಾ ತಾಲ್ಲೂಕಿನ ದೊಡ್ಡಗುಳ್ಳ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ.
ಕೊಲೆಯಾದ ವಿದ್ಯಾರ್ಥಿನಿ ದೊಡ್ಡಗುಳ್ಳ ಗ್ರಾಮದ ಕಾವ್ಯ (17). ಪ್ರಥಮ ಪಿಯುಸಿ ಓದುತ್ತಿದ್ದಳು.
ಆರೋಪಿ ಈರಣ್ಣ ಅದೇ ಗ್ರಾಮದವನು. ಕೆಲವು ದಿನಗಳಿಂದ ಬಾಲಕಿ ಕಾವ್ಯಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಎಂದಿನಂತೆ ಸೋಮವಾರ ಸ್ನೇಹಿತರ ಜತೆ ಹೋಗುತ್ತಿದ್ದ ಕಾವ್ಯಳನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ತಾನು ತಂದಿದ್ದ ತಾಳಿಯನ್ನು ಬಲವಂತವಾಗಿ ಕಟ್ಟಲು ಮುಂದಾಗಿದ್ದಾನೆ. ಈ ವೇಳೆ ಕಾವ್ಯ ಒಪ್ಪದಿದ್ದಾಗ ಹರಿತವಾದ ಕುಡುಗೋಲಿನಿಂದ ಕತ್ತು ಕುಯ್ದ ಕೊಂದೇ ಬಿಟ್ಟಿದ್ದಾನೆ.
ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಿಡಿಗೇಡಿ ಈರಣ್ಣ ಸ್ಥಳದಿಂದ ಪರಾರಿಯಾಗಿದ್ದಾನೆ. ಈತ ಕುರಿ ಕಾಯೋ ಕೆಲಸ ಮಾಡ್ತಿದ್ದ. ಈ ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪರಾರಿಯಾಗಿದ್ದ ಈರಣ್ಣನನ್ನ ಪೊಲೀಸರು ಬಂಧಿಸಿದ್ದಾರೆ.