More

    ಇಂಗ್ಲಿಷ್‌ ಭಾಷೆ ತಂದ ಎಡವಟ್ಟು: ಕಡಿಮೆ ದರಕ್ಕೆ ‘ಕೇಕ್’‌ ಸಿಕ್ಕಿತೆಂದು ಸೆಗಣಿ ತಿಂದ ಭೂಪ!

    ಬೆಂಗಳೂರು: ಎಷ್ಟೋ ಬಾರಿ ಪ್ರಾದೇಶಿಕ ಶಬ್ದಗಳಿಗೆ ಇಂಗ್ಲಿಷ್‌ನಲ್ಲಿ ಇರುವ ಶಬ್ದಗಳು ಗೊಂದಲಮಯ ಇರುವ ಕಾರಣ, ಜನರಿಗೆ ಅರ್ಥವಾಗದೇ ಗಲಿಬಿಲಿಯಾಗುವುದು ಇದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯೂ ಗೊಂದಲ ಮಾಡಿಕೊಂಡಿದ್ದು ಕಳೆದೆರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾನೆ.

    ಆತ ಬರೀ ಗೊಂದಲ ಮಾಡಿಕೊಂಡಿದ್ದರೆ ಪರವಾಗಿರಲಿಲ್ಲ, ಅಥವಾ ಈ ಪರಿ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಸೆಗಣಿಯನ್ನು ಕೇಕ್‌ ಎಂದು ತಿಂದಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಈತನ ವಿಷಯ ಬಲು ಚರ್ಚೆಗೆ ಗ್ರಾಸವಾಗಿದೆ.

    ಅಷ್ಟಕ್ಕೂ ಆಗಿದ್ದೇನೆಂದರೆ ಒಬ್ಬ ವ್ಯಕ್ತಿ ಆನ್‌ಲೈನ್‌ನಿಂದ ಕೇಕ್‌ ತರಿಸಿಕೊಳ್ಳಲು ಇಷ್ಟಪಟ್ಟಿದ್ದ. ಅದಕ್ಕಾಗಿ ಅವನು ಸರ್ಚ್‌ ಮಾಡಿದ್ದಾನೆ. ಆಗ ಅವನಿಗೆ ಕೌಡಂಗ್‌ ಕೇಕ್‌ (ಸೆಗಣಿಯಿಂದ ಮಾಡಿದ ಭರಣಿ) ಸಿಕ್ಕಿದೆ. ಕೌಡಂಗ್‌ ಎಂದರೇನು ಎಂದು ತಿಳಿಯದ ಈ ಪುಣ್ಯಾತ್ಮ ಕೇಕ್‌ ಶಬ್ದ ಅಷ್ಟೇ ನೋಡಿ ಇದ್ಯಾವುದೋ ಹೊಸ ಕೇಕ್‌ ಎಂದುಕೊಂಡಿದ್ದಾನೆ.

    https://twitter.com/chiefsanjay/status/1352123167867883522

    ಅದೂ ಏನಂತೀರಾ 12 ಕೇಕ್‌ ಇರುವ ಪ್ಯಾಕ್‌ಗೆ ಬರೀ 199 ರೂಪಾಯಿ, ಅದೂ ಫ್ರೀ ಡೆಲಿವರಿ! ಯಾರಿಗುಂಟು ಯಾರಿಗಿಲ್ಲ ಎಂದುಕೊಂಡಿರುವ ಈ ಪುಣ್ಯಾತ್ಮ ಅದನ್ನು ತರಿಸಿದ್ದಾನೆ. ಅದರಲ್ಲಿ ಬೇರೆ ಭಾರತದ ಹಸುವಿನ ಸೆಗಣಿಯಿಂದ ತಯಾರು ಮಾಡಿರುವ ಪರಿಶುದ್ಧ ಕೇಕ್‌ ಎಂದು ಬರೆಯಲಾಗಿದೆ. ಇದನ್ನೆಲ್ಲಾ ನೋಡಿದ ಈತ ಪರಿಶುದ್ಧ ಕೇಕ್‌ ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡು ತರಿಸಿ ತಿಂದಿದ್ದಾನೆ ಕೂಡ. ಕೊನೆಗೂ ಆತನಿಗೆ ತಾನು ತಿಂದದ್ದು ಏನು ಎಂದು ತಿಳಿದಿಲ್ಲ.

    ಇಂಗ್ಲಿಷ್‌ ಭಾಷೆ ತಂದ ಎಡವಟ್ಟು: ಕಡಿಮೆ ದರಕ್ಕೆ ‘ಕೇಕ್’‌ ಸಿಕ್ಕಿತೆಂದು ಸೆಗಣಿ ತಿಂದ ಭೂಪ!
    ಈ ಕೇಕ್‌ ತೀರಾ ಕೆಟ್ಟದ್ದಾಗಿದ್ದುದಕ್ಕೆ ಸಿಟ್ಟುಬಂದ ಆತ ಅದನ್ನು ಅಮೆಜಾನ್‌ ಕಮೆಂಟ್‌ನಲ್ಲಿ ಬರೆದು ಬೈದಿದ್ದಾನೆ. ಕೆಸರಿನಂತೆ ಟೇಸ್ಟ್‌ ಇದೆ, ತೀರಾ ಕೆಟ್ಟದ್ದಾಗಿದೆ. ಇದನ್ನು ತಯಾರು ಮಾಡುವ ಸ್ಥಳದಲ್ಲಿ ಸ್ವಲ್ಪ ಹೈಜೀನಿಕರ್‌ ಮೆಂಟೇನ್‌ ಮಾಡಿ ಎಂದು ಬರೆದಿದ್ದಾನೆ,
    ಇದನ್ನು ಡಾ. ಸಂಜಯ್ ಅರೋರಾ ಎಂಬ ಟ್ವಿಟ್ಟರ್ ಬಳಕೆದಾರರು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದರು. ಇದೀಗ ಭಾರಿ ವೈರಲ್‌ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts