More

    ಮದುವೆಯ ಸಂಭ್ರಮದಲ್ಲಿದ್ದ ಜೋಡಿಯ ಜೀವ ಕಸಿದ ಜವರಾಯ: ಅಕ್ಕ-ಪಕ್ಕದಲ್ಲೇ ಚಿತೆಯೇರಿದ ಭಾವಿ ದಂಪತಿ!

    ಲಖನೌ: ಉತ್ತರ ಪ್ರದೇಶದ ಬಿಧುನಾ ಕೊತ್ವಾಲಿಯ ಸಚಿನ್‌ ಮತ್ತು ಸೋನಿ ಇನ್ನೇನು ತಿಂಗಳೊಳಗೆ ಹಸೆಮಣೆ ಏರುವವರಿದ್ದರು. ಎರಡು ವರ್ಷಗಳ ಇವರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ಸೂಚಿಸಿ ಬರುವ ಡಿಸೆಂಬರ್‌ 9ರಂದು ಮದುವೆಯಾಗಲಿದ್ದರು.

    ಆದರೆ ವಿಧಿಯಾಟವೇ ಬೇರೆಯಾಗಿ ಹೋಯಿತು. ಮದುವೆಯಾಗಿ ಜೀವನಪೂರ್ತಿ ಒಟ್ಟಿಗೇ ಬಾಳುವ ಕನಸು ಕಂಡಿದ್ದ ಈ ಜೋಡಿ ಮದುವೆಗೂ ಮುನ್ನವೇ ಜೋಡಿಯಾಗಿಯೇ ಮೃತಪಟ್ಟರು. ಔರೈಯಾ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಈ ಜೋಡಿ ಪ್ರಾಣ ಕಳೆದುಕೊಂಡಿದೆ!

    ಮದುವೆ ಶಾಪಿಂಗ್​ಗೋಸ್ಕರ ಇವರಿಬ್ಬರೂ ಕಾನ್ಪುರ​ಕ್ಕೆ ಹೋಗಿದ್ದರು. ಶಾಪಿಂಗ್‌ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಇವರ ಕಾರಿಗೆ ಡಿಕ್ಕಿ ಹೊಡೆಯಿತು. ಆ ಡಿಕ್ಕಿಯ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಇಬ್ಬರೂ ಕೊನೆಯುಸಿರೆಳೆದರು.

    ಒಟ್ಟಿಗೇ ಬಾಳಿಬದುಕಬೇಕಾದ ಭಾವಿ ದಂಪತಿಯ ಅಂತ್ಯಕ್ರಿಯೆಯನ್ನು ಒಂದೇ ಕಡೆ ಎರಡೂ ಕುಟುಂಬದವರು ನೆರವೇರಿಸಿದ್ದಾರೆ.

    ಮಸೀದಿಗಳಿಂದ ಶಬ್ದ ಮಾಲಿನ್ಯ- ವಕ್ಫ್‌ ಬೋರ್ಡ್‌ಗೆ ಅಧಿಕಾರವೇ ಇಲ್ಲ ಎಂದ ಹೈಕೋರ್ಟ್‌: ಆದೇಶ ಪಾಲನೆಯಾಗದ್ದಕ್ಕೆ ಅಸಮಾಧಾನ

    ವಿಶ್ವದ ಮೊದಲ ಪೈಲಟ್‌ ರಾವಣ: ಇತಿಹಾಸ ಕೆದಕಿ, ಅಪೂರ್ವ ಸಂಶೋಧನೆಗೆ ಮುಂದಾದ ಶ್ರೀಲಂಕಾ- ಭಾರತಕ್ಕೂ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts