More

    ಕರುವನ್ನು ದತ್ತುಪಡೆದು ಮುಂಡನ ಕಾರ್ಯ ಈಡೇರಿಸಿ ನಾಮಕರಣ ಮಾಡಿದ ದಂಪತಿ!

    ಲಖನೌ: ಗೋಹತ್ಯೆ ಮಾಡುವ ಕಟುಕರ ವಿರುದ್ಧ ಕಾನೂನು ಜಾರಿಗೆ ತರಲು ಒಂದೆಡೆ ಚಾಲನೆ ಸಿಕ್ಕರೆ, ಅದೇ ಇನ್ನೊಂದೆಡೆ, ಮಕ್ಕಳಿಲ್ಲದ ದಂಪತಿಯೊಬ್ಬರು ಕರುವನ್ನು ದತ್ತಕಕ್ಕೆ ಪಡೆದು ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ.

    ಉತ್ತರ ಪ್ರದೇಶದ ಶಹನಹಾನ್ಪುರದ ರೈತ ದಂಪತಿ ವಿಜಯಪಾಲ್ ಮತ್ತು ರಾಜೇಶ್ವರಿ ಕರುವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಕರುವನ್ನು ಪಡೆಯುವುದು, ಸಾಕುವುದು, ಅದನ್ನು ಮಕ್ಕಳಂತೆ ನೋಡಿಕೊಳ್ಳುವುದು ರೈತಾಪಿ ವರ್ಗಕ್ಕೆ ಹೊಸತೇನಲ್ಲ. ಆದರೆ ಈ ಮಕ್ಕಳಿಲ್ಲದೇ ಕೊರಗುತ್ತಿರುವ ದಂಪತಿ ಮಗುವನ್ನು ದತ್ತು ಪಡೆದುಕೊಳ್ಳಲು ಏನೇನು ಶಾಸ್ತ್ರಗಳು ಇರುತ್ತವೆಯೋ, ಅದೇ ರೀತಿಯ ಶಾಸ್ತ್ರಗಳನ್ನು ಈ ಕರು ಪಡೆಯುವುದಾಗಲೂ ನಡೆಸಿರುವ ಕಾರಣ, ಮೆಚ್ಚುಗೆ ಗಳಿಸಿದ್ದಾರೆ.

    ಸುಮಾರು 500 ಜನರ ಸಮ್ಮುಖದಲ್ಲಿ ಈ ದತ್ತು ಶಾಸ್ತ್ರವನ್ನು ನೆರವೇರಿಸಿರುವ ದಂಪತಿ ಈ ಮೂಲಕ ತಮಗೆ ಮಕ್ಕಳಿಲ್ಲ ಎನ್ನುವ ಕೊರಗನ್ನು ದಂಪತಿ ಕರುವಿನ ಮೂಲಕ ಈಡೇರಿಸಿಕೊಂಡಿದ್ದಾರೆ. ಮಗುವನ್ನು ದತ್ತು ಪಡೆಯಬೇಕಾದರೆ ಮುಂಡನ ಶಾಸ್ತ್ರ ಅಂದರೆ ತಲೆಕೂದಲು ತೆಗೆಯುವ ಶಾಸ್ತ್ರ ಮಾಡಲಾಗುತ್ತದೆ. ಅದರಂತೆ ಈ ದಂಪತಿ ಗೋಮತಿ ನದಿ ತಟದಲ್ಲಿರುವ ಲಾಲ್ಟುಘಾಟ್‌ಗೆ ಕರುವನ್ನು ಕರೆದೊಯ್ದ ದಂಪತಿ ಅಲ್ಲಿ ತಲೆಕೂದಲು ತೆಗೆಯುವ ಶಾಸ್ತ್ರ ಮುಗಿಸಿ ಈ ‘ಮಗ’ನಿಗೆ ಲಾಲ್ಟು ಬಾಬಾ ಎಂದು ನಾಮಕರಣ ಮಾಡಿದ್ದಾರೆ.

    ಕರುವನ್ನು ದತ್ತುಪಡೆದು ಮುಂಡನ ಕಾರ್ಯ ಈಡೇರಿಸಿ ನಾಮಕರಣ ಮಾಡಿದ ದಂಪತಿ!ಮದುವೆಯಾಗಿ ಹದಿನೈದು ವರ್ಷವಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗುವ ಸಂಬಂಧ ತಿರುಗಾಡದ ಆಸ್ಪತ್ರೆಯಿಲ್ಲ, ದೇವಾಲಯಗಳಿಲ್ಲ, ಆದರೆ ತಮ್ಮ ಆಸೆ ಈಡೇರಲಿಲ್ಲ ಎಂದು ರೈತಾಪಿ ವರ್ಗದ ಮಕ್ಕಳಂತೆ ಇರುವ ಕರುವನ್ನು ದತ್ತುಪಡೆಯಲು ಚಿಂತಿಸಿ ಈ ಕಾರ್ಯ ಮಾಡಿದ್ದಾರೆ. ಗ್ರಾಮದ ಬಹುತೇಕರು ಉಡುಗೊರೆಯೊಂದಿಗೆ ಮುಂಡನ ಸಮಾರಂಭಕ್ಕೆ ಬಂದಿದ್ದು ಗಮನಾರ್ಯವಾಗಿತ್ತು.

    `ನಾನು ಲಾಲ್ಟುವನ್ನು ಯಾವಾಗಲೂ ನನ್ನ ಮಗನಂತೆ ನೋಡಿಕೊಳ್ಳುತ್ತಿದ್ದೇನೆ. ಹುಟ್ಟಿದಾಗಿನಿಂದ ಈ ಕರು ನಮ್ಮೊಂದಿಗಿದೆ. ಲಾಲ್ಟುವಿನದ್ದು ನಿಜವಾದ ಪ್ರೀತಿ’ ಎಂದಿದ್ದಾರೆ ವಿಜಯಪಾಲ್. ವಿಜಯಪಾಲ್ ಅವರ ತಂದೆ ಲಾಲ್ಟುವಿನ ತಾಯಿಯನ್ನು ಮನೆಗೆ ತಂದಿದ್ದರು. ಆದರೆ, ಕರುವಿನ ಜನನ ನೀಡಿದ ಬಳಿಕ ಈ ಹಸು ಕೊನೆಯುಸಿರೆಳೆದಿತ್ತು. ಇದಾದ ಬಳಿಕ ಏಕಾಂಗಿಯಾಗಿದ್ದ ಕರುವಿಗೆ ಈ ದಂಪತಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಂತರ ಮಗನಂತೆ ದತ್ತು ಪಡೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಮದುವೆಯಾಗಿ 2 ತಿಂಗಳಲ್ಲೇ ಹೊಟ್ಟೆಹಿಡಿದುಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ನೇಹಾ

    ಸಲಾಡ್​ಗೆ ಈರುಳ್ಳಿ ಕೊಡು ಎಂದರೆ ಕರುಳು ಹೊರ ಬರುವಂತೆ ಚಾಕುವಿನಿಂದ ಇರಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts