More

    ಹೊರಗೆ ಬಂದವರ ಮೇಲೆ ಬಲಪ್ರಯೋಗ ಬೇಡ- ಕಾನೂನುರೀತ್ಯಾ ಕ್ರಮ ಎಂದು ಪೊಲೀಸರಿಗೆ ಸೂಚನೆ

    ಬೆಂಗಳೂರು: ಕರೊನಾ ಸೋಂಕು ಸೋಂಕಿನ ಸಂಪರ್ಕ ಕಡಿತಗೊಳಿಸಲೆಂದು ಲಾಕ್ ಡೌನ್ ಜಾರಿಗೊಳಿಸಿದ 2ನೇ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‌ಸಚಿವ ಸಂಪುಟದ ಸಹೋದ್ಯೋಗಿಗಳು ಕ್ಷೇತ್ರ ಕಾರ್ಯಕ್ಕೆ ಇಳಿದು, ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ‌ ರೀತಿ ಪರಿಶೀಲಿಸಿದರು.

    ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿರುವ ರಾಜ್ಯ ವಾರ್ ರೂಮ್ ಗೆ ಸಿಎಂ ಬಿಎಸ್ ವೈ ಭೇಟಿ ನೀಡಿ, ಅಧಿಕಾರಿಗಳ ಜತೆಗೆ ಚರ್ಚಿಸಿ ಮಾಹಿತಿ ಪಡೆದು, ಜವಾಬ್ದಾರಿಯನ್ನು ದಕ್ಷ ಹಾಗೂ ಪಾರದರ್ಶಕವಾಗಿ ನಿರ್ವಹಿಸಲು ಸೂಚಿಸಿದರು.

    ಹೆಬ್ಬಾಳದ ಪಶುಬವೈದ್ಯಕೀಯ ಕಾಲೇಜಿನಲ್ಲಿ ಪ್ರಾರಂಭಿಸಿರುವ ಕರೊನಾ ಆರೈಕೆ ಕೇಂದ್ರಕ್ಕೆ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ‌, ಶಾಸಕ ಬೈರತಿ ಸುರೇಶ್ ಭೇಟಿ ನೀಡಿ ಪರಿಶೀಲಿಸಿದರೆ, ಜಿಕೆವಿಕೆ ಆವರಣದ ಕೃಷಿ‌ ವಿವಿ ವಿದ್ಯಾರ್ಥಿನಿ ಹಾಸ್ಟೆಲ್ ನ 380 ಹಾಸಿಗೆಗಳ ಸಾಮರ್ಥ್ಯದ ಕರೊನಾ ಆರೈಕೆ ಕೇಂದ್ರವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ವೀಕ್ಷಿಸಿ ಅಧಿಕಾರಿಗಳ ಜತೆ ಚರ್ಚಿಸಿದರು.

    ಬಲ ಪ್ರಯೋಗ ಬೇಡ
    ಸಚಿವ ಬಸವರಾಜ ಬೊಮ್ಮಾಯಿ‌ ಸುದ್ದಿಗಾರರ ಜತೆಗೆ ಮಾತನಾಡಿ ಜನರ ಮೇಲೆ ಬಲ ಪ್ರಯೋಗ ಮಾಡಬಾರದು ಎಂದು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಅನಗತ್ಯವಾಗಿ ಹೊರಗೆ ಬಂದವರ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಲು ತಿಳಿಸಲಾಗಿದೆ.

    ಜನರು ಸಹ ಪರಿಸ್ಥಿತಿ ಅರ್ಥ ಮಾಡಿಕೊಂಡು ಸ್ವಯಂ ನಿರ್ಬಂಧಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಜನರಿಗೆ ಹಿಂಸಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಲ್ಲ. ಕರೊನಾ ಸೋಂಕು ನಿಯಂತ್ರಣಕ್ಕಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಬೊಮ್ಮಾಯಿ‌ ಸಮಜಾಯಿಷಿ ನೀಡಿದರು.

    ಲಾಕ್ ಡೌನ್ ಪರಿಹಾರ ಪ್ಯಾಕೇಜ್ ಸಂಬಂಧಿಸಿದಂತೆ ಸಿಎಂ ಬಿಎಸ್ ವೈ ಜತೆಗೆ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದರು.

    ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

    ಲಾಕ್‌ಡೌನ್‌ ವಿಶೇಷ: ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರದಿಂದ ಫ್ರೀ ಉಪಾಹಾರ, ಊಟ

    ಹೆಚ್ಚಿಗೆ ದರ ಪಡೆಯುವ ಆಂಬುಲೆನ್ಸ್‌ ರಹದಾರಿ ಕ್ಯಾನ್ಸಲ್‌- ಹಣ ವಸೂಲಿಗೆ ಕಡಿವಾಣ ಹಾಕಲಿದೆ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts