More

    ಹೆಚ್ಚಿಗೆ ದರ ಪಡೆಯುವ ಆಂಬುಲೆನ್ಸ್‌ ರಹದಾರಿ ಕ್ಯಾನ್ಸಲ್‌- ಹಣ ವಸೂಲಿಗೆ ಕಡಿವಾಣ ಹಾಕಲಿದೆ ಸರ್ಕಾರ

    ಬೆಂಗಳೂರು: ಖಾಸಗಿ ಆಂಬುಲೆನ್ಸ್‌ಗಳಿಂದ ಹೆಚ್ಚು ದರ ವಸೂಲಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

    ಈ ಸಂಬಂಧ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಿವಾಸದಲ್ಲಿ ಸಭೆ ನಡೆಯಿತು. ಆರೋಗ್ಯ ಸಚಿವ ಡಾ.ಸುಧಾಕರ್ ಭಾಗವಹಿಸಿದ್ದರು. ಸರ್ಕಾರದಿಂದ ಸಂಜೆ ವೇಳೆಗೆ ಅಧಿಕೃತ ದರ ನಿಗದಿ ಮಾಡುವ ಸಾಧ್ಯತೆಗಳಿವೆ. ಖಾಸಗಿ ಆಂಬುಲೆನ್ಸ್ ಗಳು ಸರ್ಕಾರ ನಿಗದಿಪಡಿಸಿದ ದರವನ್ನೇ ಪಡೆಯಬೇಕು. ಒಂದು ವೇಳೆ ಪಡೆಯದಿದ್ದರೆ ರಹದಾರಿ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಹೇಳಿದರು.

    ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಖಾಸಗಿ ಆ್ಯಂಬುಲೆನ್ಸ್‌ಗಳ ದರ ನಿಗದಿ ಸಭೆ ಮಾಡಿದ್ದೇವೆ. ಆಂಬುಲೆನ್ಸ್ ಮಾಲೀಕರ ಜತೆಗೂ ಸಭೆ ಮಾಡುತ್ತೇವೆ. ಇಂದು ಸಂಜೆಯೊಳಗೆ ಸಭೆ ನಡೆಸುತ್ತೇವೆ. ಬಡವರಿಗೆ ತೊಂದರೆ ಆಗುತ್ತಿದ್ದು ಅದನ್ನು ಬಗೆಹರಿಸಬೇಕಿದೆ. ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ. ಹೆಚ್ಚು ದರ ತೆಗೆದುಕೊಂಡರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಲಸಿಕೆ ಲಭ್ಯತೆ ಕುರಿತು ಅವರು ಮಾತನಾಡಿದರು. ಲಸಿಕೆಗೆ ಕೊರತೆಯಿಲ್ಲ. ಐದು ಲಕ್ಷ ಲಸಿಕೆ ರಾಜ್ಯಕ್ಕೆ ಬಂದಿದೆ. ರಾಜ್ಯದಲ್ಲಿ ೧೮ ರಿಂದ ೪೫ ಮೇಲ್ಪಟ್ಟವರಿಗೆ ಲಸಿಕೆ ಕೊಡಲು ಸಮಸ್ಯೆ ಇಲ್ಲ. ಆದರೆ, ಲಾಕ್ ಡೌನ್ ನಿಂದ ಅನೇಕ ನಿರ್ಬಂಧಗಳಿವೆ. ಆಸ್ಪತ್ರೆಗೆ ಬರಲು ಯುವಕರಿಗೆ ಸಮಸ್ಯೆ ಆಗುತ್ತಿದೆ.ಹಾಗಾಗಿ ೧೪ ದಿನ ಮುಂದೆ ಹಾಕುವ ಚರ್ಚೆಯಾಗಿದೆ. ಇಂದು ಮಧ್ಯಾಹ್ನದ ಒಳಗೆ ನಿರ್ಧಾರ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

    ಈ ಬಗ್ಗೆ ಗೃಹ ಸಚಿವರ ಜತೆ ಚರ್ಚೆ ಆಗಿದೆ. ಕರೊನಾ ನಿಯಂತ್ರಣ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ. ಸರ್ಕಾರ ನಿಯಂತ್ರಣ ಕೆಲಸ ಮಾಡುತ್ತಿದೆ‌. ನಾವು ಜನರ ಜೀವನ ಉಳಿಸಲು ಕ್ರಮ ಕೈಗೊಂಡಿದ್ದೇವೆ. ಸರ್ಕಾರಕ್ಕೆ ಎಲ್ಲ ರೀತಿಯ ಆದಾಯ ಖೋತಾ ಆಗುತ್ತದೆ. ಆದಾಗ್ಯೂ ಸರ್ಕಾರ ಕರೊನಾ ನಿಯಂತ್ರಿಸಲು ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಸುಧಾಕರ್ ತಿಳಿಸಿದರು.

    ಕರೊನಾದಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್‌ ಫಂಗಸ್‌- ದೃಷ್ಟಿ ಕಳೆದುಕೊಂಡ ಕೆಲ ಸೋಂಕಿತರು

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?

    ಎಣ್ಣೆಪ್ರಿಯರಿಗಿಲ್ಲಿ ಭರ್ಜರಿ ಗುಡ್‌ ನ್ಯೂಸ್‌- ಕುಳಿತಲ್ಲೇ ಬರಲಿದೆ ಇಷ್ಟದ ಬಾಟಲಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts