More

    ಕರೊನಾದಿಂದ ಅನುದಾನ ಕುಸಿತ- ಜಾತಿಗೆಂದು ಸ್ಥಾಪನೆಗೊಂಡ ನಿಗಮಗಳಿಗೆ ಗ್ರಹಣ!

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆವಾಗುತ್ತಿರುವ ಅನುದಾನದಲ್ಲಿ ಕುಸಿತವಾಗಿದೆ. ಸರ್ಕಾರವು ಇಲಾಖೆಗೆ 2018-19ರಲ್ಲಿ 5,246 ಕೋಟಿ ರೂ, 2019-20ರಲ್ಲಿ 4,264 ಕೋಟಿ ರೂ ಮತ್ತು 2020-21ರಲ್ಲಿ 3,349 ಕೋಟಿ ರೂ, 2021-22 ನವೆಂಬರ್ ಅಂತ್ಯಕ್ಕೆ 3,704 ಕೋಟಿ ರೂ. ಹಂಚಿಕೆ ಮಾಡಿದೆ. ಅನುದಾನ ಕೊರತೆ, ಇಲಾಖೆ ಹಾಗೂ ನಿಗಮಗಳಲ್ಲಿ ನಿರಂತವಾಗಿ ನಡೆಯುತ್ತಿರುವ ಭ್ರಷ್ಟಚಾರದಿಂದ ಫಲಾನುಭವಿಗಳಿಗೆ ಸಮರ್ಪಕವಾಗಿ ಯೋಜನೆಗಳು ತಲುಪುತ್ತಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಜಾತಿಗೆಂದು ಸ್ಥಾಪನೆಗೊಂಡಿರುವ ನಿಗಮಗಳು ನಾಮ್‌ಕೇವಾಸ್ತೆ ಎಂಬಂತಾಗಿದೆ.

    2018-19ರಿಂದ 2021-22ರ ನವೆಂಬರ್ ಅಂತ್ಯದ ವೇಳೆಗೆ ಸಮಾಜ ಕಲ್ಯಾಣ ಇಲಾಖೆಗೆ ಒಟ್ಟಾರೆ 16,530 ಕೋಟಿ ರೂ.ನಿಗದಿಪಡಿಸಿದ್ದು, ಇದರಲ್ಲಿ 14,510 ಕೋಟಿ ರೂ.ವೆಚ್ಚ ಮಾಡಲಾಗಿದೆ. 2018-19ರಲ್ಲಿ 5,246 ಕೋಟಿ ರೂ.ಹಂಚಿಕೆ ಮಾಡಿದ ಪೈಕಿ 5,160 ಕೋಟಿ ರೂ.ಖರ್ಚಾಗಿದೆ. 2019-20ರಲ್ಲಿ 4,264 ಕೋಟಿ ರೂ.ಪೈಕಿ 4,139 ಕೋಟಿ ರೂ.ಖರ್ಚಾದರೆ, 2020-21ರಲ್ಲಿ 3,349 ಕೋಟಿ ರೂ. ಪೈಕಿ 3,200 ಕೋಟಿ ರೂ.ಖರ್ಚಾಗಿದೆ.

    ಅದೇರೀತಿ, 2021-22 ನವೆಂಬರ್ ಅಂತ್ಯಕ್ಕೆ 3,704 ಕೋಟಿ ರೂ.ಪೈಕಿ 2,011 ಕೋಟಿ ರೂ.ವೆಚ್ಚವಾಗಿದೆ. ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್, ಆದಿ ಜಾಂಭವ, ಭೋವಿ, ತಾಂಡಾ, ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಗಳಿವೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಪರಿಶಿಷ್ಟ ಜಾತಿ ನಿಗಮಗಳಿಗೆ 2019-20ರಲ್ಲಿ 592 ಕೋಟಿ ರೂ, 2020-21ರಲ್ಲಿ 342 ಕೋಟಿ ರೂ. ಸೇರಿ ಒಟ್ಟು 934 ಕೋಟಿ ರೂ.ಅನುದಾನ ನೀಡಲಾಗಿದೆ. ಪರಿಶಿಷ್ಟ ಪಂಗಡದ ನಿಗಮಗಳಿಗೆ 2019-20ರಲ್ಲಿ 206 ಕೋಟಿ ರೂ, 2020-21ರಲ್ಲಿ 196 ಕೋಟಿ ರೂ.ಸೇರಿ ಒಟ್ಟು 402 ಕೋಟಿ ರೂ.ಅನುದಾನ ನೀಡಲಾಗಿದೆ.

    ಅನುದಾನ ವಿವರ: 2020-21ರಿಂದ 2021-22ರವರೆಗೆ ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ 140 ಕೋಟಿ ರೂ, ಅಲೆಮಾರಿ/ಅರೆ ಅಲೆಮಾರಿ ಅ.ನಿ.ಕ್ಕೆ 30 ಕೋಟಿ ರೂ, ಸವಿತಾ ಸಮಾಜ ಅ.ನಿ.ಕ್ಕೆ 7 ಕೋಟಿ ರೂ, ಮಡಿವಾಳ ಮಾಚಿದೇವ ಅ.ನಿ.ಕ್ಕೆ 30 ಕೋಟಿ ರೂ, ನಿಜಶರಣ ಅಂಬಿಗರ ಚೌಡಯ್ಯ ಅ.ನಿ.25 ಕೋಟಿ ರೂ. ಅನುದಾನ ನೀಡಲಾಗಿದೆ. ಅದೇರೀತಿ, ಕರ್ನಾಟಕ ಆರ್ಯುವೈಶ್ಯ ಸಮುದಾಯ ಅ.ನಿ.ಕ್ಕೆ 10 ಕೋಟಿ ರೂ, ಉಪ್ಪಾರ ಅ.ನಿ.ಕ್ಕೆ 10.29 ಕೋಟಿ ರೂ, ವಿಶ್ವಕರ್ಮ ಸಮುದಾಯ ಅ.ನಿ.ಕ್ಕೆ 20 ಕೋಟಿ ರೂ ಅನುದಾನ ನೀಡಿದರೆ, 2020-21ರಲ್ಲಿ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ.ಅನುದಾನ ನೀಡಲಾಗಿದೆ. ಆದರೆ, ಸರ್ಕಾರ ಹಂಚಿಕೆ ಮಾಡುವ ಅನುದಾನವನ್ನು ಕಡ್ಡಾಯವಾಗಿ ಆಯಾ ವರ್ಷದಲ್ಲಿ ಯೋಜನೆಗಳಿಗೆ ವಿನಯೋಗಿಸಬೇಕೆಂಬ ನಿಯಮವಿದ್ದರೂ ಕೆಲ ನಿಗಮಗಳು ಕೋಟ್ಯಂತರ ರೂಪಾಯಿ ಅನುದಾನವನ್ನೇ ಖರ್ಚು ಮಾಡಿಲ್ಲ.

    ಆತ್ಮಹತ್ಯೆಗೆ ಯತ್ನಿಸಿದ ರೈತನ ಬದುಕು ಬದಲಾಯಿಸಿದ ಸಮಗ್ರ ಕೃಷಿ ಪದ್ಧತಿ- ಸಚಿವರಿಂದ ಶ್ಲಾಘನೆ

    ವಜಾಗೊಂಡ ಸಾರಿಗೆ ನೌಕರರ ಮರು ನೇಮಕಕ್ಕೆ ಚಾಲನೆ- 700 ಸಿಬ್ಬಂದಿ ಮೊಗದಲ್ಲಿ ನಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts