More

    ಎರಡು ದಿನ ವೈದ್ಯರ ಭೇಟಿಗೆ, ಎರಡೂವರೆ ದಿನ ರಿಸಲ್ಟ್‌ಗೆ ಕಾದೆ ಎಂದ ಸಂಸದ ಶಶಿ ತರೂರ್‌ ಆಸ್ಪತ್ರೆಗೆ ದಾಖಲು

    ನವದೆಹಲಿ: ಹಿರಿಯ ಕಾಂಗ್ರೆಸ್‌ ಮುಖಂಡ, ಸಂಸದ ಶಶಿ ತರೂರ್‌ ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ಸೋಂಕಿನಿಂದ ಬಳಲುತ್ತಿರುವ ತರೂರ್‌ ಅವರು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

    65 ವರ್ಷದ ಶಶಿ ತರೂರ್ ಅವರಿಗೆ ಏಪ್ರಿಲ್ 21 ರಂದು ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅಪಾಯಿಂಟ್‌ಮೆಂಟ್‌ಗಾಗಿ ಎರಡು ದಿನ ಕಾದು, ನಂತರ ಅದರ ಫಲಿತಾಂಶಕ್ಕಾಗಿ ಎರಡೂವರೆ ದಿನ ಕಾದ ಬಳಿಕ ನನಗೆ ಪಾಸಿಟಿವ್‌ ಇರುವುದು ತಿಳಿಯಿತು ಎಂದು ಆಗ ತರೂರ್‌ ಟ್ವೀಟ್ ಮಾಡಿದ್ದರು.

    ಪಾಸಿಟಿವ್‌ ಎಂದು ತಿಳಿದುಬಂದ ನಂತರ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಆದರೆ ಇದೀಗ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಹಿನ್ನೆಲೆಯಲ್ಲಿ ದೆಹಲಿಯ ಸರಿತಾ ವಿಹಾರ್‌ನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಸಂಸದ ರಾಹುಲ್‌ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರ ನಂತರ ಕರೊನಾ ಸೋಂಕಿನಿಂದ ಬಳಲುತ್ತಿರುವ ಮೂರನೆಯ ಹಿರಿಯ ಮುಖಂಡ ಶಶಿ ತರೂರ್‌ ಆಗಿದ್ದಾರೆ.

    ನೀರಿನೊಳಗೆ ಹೊಕ್ಕು ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಜಗತ್ತಿನ ಏಕೈಕ ಅರ್ಚಕ ಹಂಪಿಯ ಕೃಷ್ಣ ಇನ್ನಿಲ್ಲ..

    ಮಾಸ್ಕ್‌ ಹಾಕಿಲ್ವಾ? ಹೊಡೀರಿ ಬಸ್ಕಿ! ನಡುರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಸುಸ್ತೋ ಸುಸ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts