More

    VIDEO: ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್‌ ಬಾವುಟ, ಕ್ಯಾಚ್‌ ಹಿಡಿದ ಸೋನಿಯಾಗಾಂಧಿ! ವಿಡಿಯೋ ವೈರಲ್‌

    ನವದೆಹಲಿ: ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾರಿ ಎಡವಟ್ಟು ನಡೆದುಹೋಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಷದ ಬಾವುಟವನ್ನು ಏರಿಸುತ್ತಿದ್ದಂತೆಯೇ ಅದು ಹರಿದು ಹೋಗಿ ಕೆಳಕ್ಕೆ ಬೀಳುವ ಹಂತದಲ್ಲಿತ್ತು. ಕೂಡಲೇ ಸೋನಿಯಾ ಗಾಂಧಿ ಅದನ್ನು ಹಿಡಿದುಕೊಂಡರು. ದಾರ ಕಟ್ಟಾಗಿದ್ದರಿಂದ ಈ ಎಡವಟ್ಟು ನಡೆದಿದೆ.

    ಪ್ರತಿವರ್ಷ ಡಿ.28ರಂದು ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಅದರ 137ನೇ ಸಂಸ್ಥಾಪನಾ ದಿನಾಚರಣೆ ಇದ್ದು, ಇದರ ಅಂಗವಾಗಿ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡಲು ಮುಂದಾದರು. ಆಗ ಕಾರ್ಯಕರ್ತರೊಬ್ಬರು ಧ್ವಜಕ್ಕೆ ಕಟ್ಟಿದ್ದ ದಾರವನ್ನು ಜಗ್ಗಿದ ಸಂದರ್ಭದಲ್ಲಿ ಅದು ಬಿದ್ದು ಹೋಗಿದೆ. ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.

    ಆ ಕ್ಷಣದಲ್ಲಿ ಮಡಚಿಕೊಂಡಿದ್ದ ಧ್ವಜವನ್ನು ಸೋನಿಯಾ ಗಾಂಧಿ ಅವರು ಬಿಡಿಸಿ ಸಾಂಕೇತಿಕವಾಗಿ ಪ್ರದರ್ಶನ ಮಾಡಿದರು. ಬಳಿಕ ಪಕ್ಷದ ಕಾರ್ಯಕರ್ತರು ಅದನ್ನು ಸರಿಯಾಗಿ ಕಟ್ಟಿ, ಮತ್ತೆ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್​ ಜಿಂದಾಬಾದ್ ಎಂಬ ಘೋಷಣೆಯನ್ನೂ ಕೂಗಲಾಯಿತು. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್​ ಇತರರು ಇದ್ದರು. ನಂತರ ಸೇವಾದಳದ ಕಾರ್ಯಕರ್ತರು ರಾಷ್ಟ್ರ ಗೀತೆ ಗಾಯನ ಮಾಡಿ ಕಾರ್ಯಕ್ರಮ ಮುಂದುವರೆಸಿದ್ದಾರೆ.

    ವಿಡಿಯೋ ಇಲ್ಲಿದೆ ನೋಡಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts