More

    ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶ

    ಬೆಂಗಳೂರು: ಈಗಾಗಲೇ ಹಲವಾರು ಶಾಲೆಗಳಲ್ಲಿ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಮನೆಯಿಂದಲೇ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಲವು ಶಾಲೆಗಳ ಶಿಕ್ಷಕರು ಇದೀಗ ಶಾಲೆಗೆ ಬಂದು ಕಾರ್ಯ ಆರಂಭಿಸಿದ್ದಾರೆ.

    ಈ ನಡುವೆಯೇ .ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ ಕಾಲೇಜು ಭೋದಕರಿಗೆ ಇಂದಿನಿಂದ ಅಂದರೆ ನವೆಂಬರ್‌ 4ರಿಂದ ನವೆಂಬರ್‌ 11ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ತಿಳಿಸಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.

    ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶಆದೇಶದಲ್ಲಿ ಏನಿದೆ? : 2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಆಗತ್ಯವಿರುವ ಪೂರ್ವ ಸಿದ್ಧತೆಗಳಾಗಿ ಡಿಜಿಟಲ್‌ ಲರ್ನಿಂಗ್‌, ಆನ್‌ಲೈನ್‌/ ಆಫ್‌ಲೈನ್‌ ಟೀಚಿಂಗ್‌, ಸ್ಟಡಿ ಮೆಟಿರಿಯಲ್‌ ಪ್ರಿಪರೇಷನ್‌, ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ/ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ ದಿನಾಂಕ 4.11.2020 ರಿಂದ ದಿನಾಂಕ 11.11.2020ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಿದೆ.

    ಇನ್ನು ಪ್ರಾಂಶುಪಾಲರು ಸೂಚಿಸಿದ ಬೋಧಕರು ಕಾಲೇಜಗಳಲ್ಲಿನ ತುರ್ತು ಕೆಲಸಗಳನ್ನು ನಿರ್ವಹಿಸಲು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆಯೂ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಜೂಜಾಟಕ್ಕೆ ಪ್ರೇರಣೆ: ಹೈಕೋರ್ಟ್‌ ನೋಟಿಸ್‌ ಕುಣಿಕೆಯಲ್ಲಿ ಸಿನಿ, ಕ್ರಿಕೆಟ್‌ ತಾರೆಯರು

    ಕೆಫೆ ಕಾಫಿ ಡೇ ಕೇಸ್‌: ಬಂಧನದ ಭೀತಿಯಲ್ಲಿ ಮಾಜಿ ಸಿಎಂ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts