More

    ಅವಮಾನ ಆಯ್ತೆಂದು ಕೋರ್ಟ್‌ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!

    ನ್ಯೂಯಾರ್ಕ್​: ಕೋರ್ಟ್​ನಲ್ಲಿ ವಿಡಿಯೋ ಮಾಡಲು ಅಡ್ಡಿಉಂಟು ಮಾಡಿದ್ದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕೋರ್ಟ್​ ಆವರಣ ಹಾಗೂ ನ್ಯಾಯಮೂರ್ತಿಗಳ ಕೊಠಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಬಿಟ್ಟು ಎಲ್ಲರನ್ನೂ ಸುಸ್ತು ಮಾಡಿದ್ದಾನೆ.

    ಈ ಘಟನೆ ನಡೆದಿರುವುದು ಅಮೆರಿಕದ ನ್ಯೂಯಾರ್ಕ್​ನಲ್ಲಿ. ಮೊನ್ನೆ ಕೋರ್ಟ್​ ಕಲಾಪವನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. ಕೋರ್ಟ್​ಗೆ ರಜೆ ಘೋಷಿಸಲಾಯಿತು. ಇದ್ದಕ್ಕಿದ್ದಂತೆಯೇ ಈ ಕೋರ್ಟ್​ನಲ್ಲಿ ಏಕೆ ಇಂಥ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಎಲ್ಲರಿಗೂ ಅಚ್ಚರಿ ಉಂಟಾಯಿತು. ಯಾರೋ ಮೃತಪಟ್ಟಿರಬಹುದು ಎಂದೂ ಊಹಿಸಲಾಯಿತು. ಆದರೆ ಕಾರಣವನ್ನು ಮಾತ್ರ ಬಹಿರಂಗಗೊಳಿಸಿರಲಿಲ್ಲ.

    ಕೊನೆಗೆ ತಿಳಿದದ್ದು ಏನೆಂದರೆ, ಕೋರ್ಟ್​ನ ತುಂಬೆಲ್ಲಾ ಜಿರಳೆಗಳು ಬಂದು ಎಲ್ಲರಿಗೂ ಕಾಟ ಕೊಡುತ್ತಿದೆ ಎಂದು! ಏಕಾಏಕಿ ಇಷ್ಟು ಜಿರಳೆಗಳು ಹೇಗೆ ಬಂದವು ಎಂದು ತನಿಖೆ ಮಾಡಿದಾಗ ಈ ಭೂಪ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿ ಪರಿಶೀಲನೆ ಮಾಡಿದಾಗ ಈತ ಕೋರ್ಟ್​ ಆವರಣದೊಳಗೆ ಬ್ಯಾಗ್​ ಒಂದರಿಂದ ಜಿರಳೆಗಳನ್ನು ಬಿಟ್ಟಿರುವುದು ಕಂಡುಬಂದಿದೆ.

    ಆಗಿದ್ದೇನು?
    ಭೂ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಇದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಶುರು ಮಾಡಿದ. ವಿಚಾರಣೆಗೆ ಒಳಗಾದವರು ಇವನ ವಿರೋಧಿಗಳಾಗಿದ್ದರಿಂದ ಅವರ ಮರ್ಯಾದೆ ತೆಗೆಯುವ ಉದ್ದೇಶದಿಂದ ವಿಡಿಯೋ ಮಾಡಲು ಶುರು ಮಾಡಿದ.

    ಆದರೆ ಕೋರ್ಟ್​ ಆವರಣದಲ್ಲಿ ಇದಕ್ಕೆ ಅವಕಾಶ ಇರದ ಹಿನ್ನೆಲೆಯಲ್ಲಿ ಆತನನ್ನು ಹೊರಕ್ಕೆ ಕಳಿಸಲಾಯಿತು. ಇದೇ ಸಿಟ್ಟಿನಿಂದ ಈತ ಈ ಕೃತ್ಯ ಎಸಗಿದ್ದ. ನಂತರ ಕೀಟನಾಶಕದವರನ್ನು ಕರೆಯಿಸಿ ಕೋರ್ಟ್​ ತುಂಬೆಲ್ಲಾ ಕೀಟನಾಶಕ ಸಿಂಪಡಣೆ ಮಾಡಿಸಿ ಜಿರಲೆಗಳನ್ನು ಸಾಯಿಸಲಾಯಿತು ಎಂದು ವರದಿಯಾಗಿದೆ.

    ಲವರ್‌ಗಾಗಿ ಜೀವ ಬೇಕಾದ್ರೂ ಕೊಡೋಕೆ ರೆಡಿ ಇದ್ದೀರಾ? ನಿಮಗೂ ಹೀಗೆಯೇ ಆಗ್ಬೋದು ಹುಷಾರ್‌..!

    ನಿಲ್ಲುತ್ತಿಲ್ಲ ಆಸ್ಪತ್ರೆಗಳ ಹಣದ ದಾಹ: ಮಗನ ಶವ ಪಡೆಯಲು ಲಂಚ- ಭಿಕ್ಷೆ ಬೇಡ್ತಿದ್ದಾರೆ ಈ ದಂಪತಿ: ಕಣ್ಣೀರು ತರಿಸುವ ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts