More

    ಚಂದ್ರನ ಮಾದರಿ ಸಂಗ್ರಹಿಸಲು ಚೀನಾ ಕಳಿಸಿದ ಚಾಂಗ್​-5 ಸಕ್ಸಸ್​

    ಚೀನಾ: ಚಂದ್ರನತ್ತ ದೃಷ್ಟಿ ನೆಟ್ಟಿರುವ ಅನೇಕ ರಾಷ್ಟ್ರಗಳಂತೆ ಚಂದ್ರನ ಅಧ್ಯಯನದಲ್ಲಿ ತೊಡಗಿರುವ ಚೀನಾಕ್ಕೆ ಇದೀಗ ಇನ್ನೊಂದು ಯಶಸ್ಸು ಸಿಕ್ಕಿದೆ. ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಪಡೆಯುವ ಸಲುವಾಗಿ ಚಾಂಗ್ -5 ಎಂಬ ಹೆಸರಿನ ಚಂದ್ರಯಾನವನ್ನು ಚೀನಾ ನಡೆಸಿತ್ತು, ಇದೀಗ ಯಶಸ್ವಿಯಾಗಿದೆ.

    ಚಾಂಗ್​ಯಾನ್​ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಜತೆಗೆ ಚೀನಾದ ಬಾಹ್ಯಾಕಾಶ ಸಂಸ್ಥೆಯು 5 ಚಂದ್ರನ ಮೇಲ್ಮೈಗೆ ಇಳಿಯುವಾಗ ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿವೆ.

    ಚಂದ್ರಯಾನದ ಪ್ರಕ್ರಿಯೆಯನ್ನು ನವೆಂಬರ್ 24ರಂದು ಆರಂಭಿಸಲಾಗಿತ್ತು. ಓಷಿಯನಸ್ ಪ್ರೊಸೆಲ್ಲಾರಮ್ ಅಥವಾ ‘ಓಷನ್ ಆಫ್ ಸ್ಟಾರ್ಮ್ಸ್’ ಎಂದು ಕರೆಯಲ್ಪಡುವ ಬೃಹತ್ ಲಾವಾ ಬಯಲಿನಲ್ಲಿ ಈ ಹಿಂದೆ ಭೇಟಿ ನೀಡದ ಪ್ರದೇಶದಲ್ಲಿ ಚಂದ್ರನ ಮಾದರಿಗಳನ್ನು ಸಂಗ್ರಹಿಸಲು ಈ ಮಿಷನ್​ ಪ್ರಯತ್ನಿಸುತ್ತಿರುವುದಾಗಿ ಚೀನಾ ಹೇಳಿದೆ.

    ಎಲ್ಲವೂ ಅಂದುಕೊಂಡರೆ ಸಕ್ಸಸ್​ ಆದರೆ, ಅಮೆರಿಕ ಮತ್ತು ಸೋವಿಯತ್​ ಒಕ್ಕೂಟದ ನಂತರ ಚಂದ್ರನ ಮಾದರಿಗಳನ್ನು ಪಡೆಯುವ ಮೂರನೇ ರಾಷ್ಟ್ರವಾಗಿ ಚೀನಾ ಹೊರಹೊಮ್ಮಲಿದೆ. |

    ಚೀನಾ ತನ್ನ ಮೊದಲ ಚಂದ್ರಯಾನವನ್ನು 2013 ರಲ್ಲಿ ಮಾಡಿದೆ. 2019ರ ಜನವರಿಯಲ್ಲಿ, ಚಾಂಗ್ -4 ಚಂದ್ರನ ದೂರದ ಭಾಗದಲ್ಲಿ ಮುಟ್ಟಿತು.

    ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

    ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

    ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts