More

    ಭಯೋತ್ಪಾದನಾ ಸಂಘಟನೆಗೆ ಅಕ್ರಮ ಹಣ ವರ್ಗ: ಲಷ್ಕರ್​ ಮುಖ್ಯಸ್ಥನ ವಿರುದ್ಧ ಚಾರ್ಜ್​ಷೀಟ್​

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್‌ ಎ ತಯಬಾದ ಮುಖ್ಯಸ್ಥ ಮೊಹಮ್ಮದ್​ ಹಫೀಜ್‌ ಸಯಿದ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಚಾರ್ಜ್‌ಶೀಟ್‌ ಸಲ್ಲಿಸಿದೆ.

    ಫಲಾ-ಎ-ಇನ್ಸಾನಿಯತ್‌ (ಎಫ್‌ಐಎಫ್‌) ಫೌಂಡೇಶಷ್​ ಎಂಬ ಭಯೋತ್ಪಾದನಾ ಸಂಘಟನೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಇದಾಗಿದ್ದು, ಈತನ ವಿರುದ್ಧ ಇಡಿ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈತನ ಜತೆಗೆ, ಸಹಚರ ಶಹೀದ್‌ ಮಹಮದ್‌, ದುಬೈನ ಫಂಡ್‌ ಮ್ಯಾನೇಜರ್‌ ಮೊಹಮ್ಮದ್‌ ಸಲ್ಮಾನ್​ ಮತ್ತು ದೆಹಲಿಯ ಹವಾಲಾ ಆಪರೇಟರ್‌ ಮೊಹಮ್ಮದ್​ ಸಲೀಮ್‌ ವಿರುದ್ಧವೂ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

    ಹವಾಲಾ ಚಾನೆಲ್‌ಗಳ ಮೂಲಕ ಎಫ್‌ಐಎಫ್‌ ಫಂಡ್‌ಗಳನ್ನು ಕಾನೂನುಬಾಹಿರವಾಗಿ ಸ್ವೀಕರಿಸಿದ ಪ್ರಕರಣದಲ್ಲಿ ಸಲ್ಮಾನ್‌ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಫ್‌ಐಎಫ್‌ ಪಾಕಿಸ್ತಾನ ಮೂಲದ ಸಂಸ್ಥೆಯಾಗಿದ್ದು, ಜಮಾತ್‌-ಉದ್‌-ದಾವಾದಿಂದ ಸ್ಥಾಪಿಸಲಾಗಿದೆ. ಜೆಯುಡಿ ಸಂಸ್ಥೆ ಎಲ್‌ಇಟಿಯ ಅಂಗ ಸಂಸ್ಥೆಯಾಗಿದೆ.

    ಇದನ್ನೂ ಓದಿ: ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

    2018ರಲ್ಲಿ ಮೊಹಮ್ಮದ್​ ಸಲ್ಮಾನ್‌ ಮತ್ತು ಮೊಹಮ್ಮದ್​ ಸಲೀಂ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿ ತನಿಖೆ ನಡೆಸಿದ ನಂತರ, ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.

    2012ರ ಮಾರ್ಚ್​ನಲ್ಲಿ ವಿಶ್ವಸಂಸ್ಥೆ ಎಫ್‌ಐಎಫ್‌ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಯೆಂದು ಗುರುತಿಸಿದೆ. ಭಾರತವೂ ಎಫ್‌ಐಎಫ್‌ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) 2016ರಲ್ಲಿ ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಎಫ್‌ಐಎಫ್‌ ಸಂಘಟನೆಯನ್ನು ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಲು ಎಲ್‌ಇಡಿ ಬಳಸಿಕೊಳ್ಳುತ್ತಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

    ಸೊಳ್ಳೆಗಳಿಗೆ ದಿನವೂ ರಕ್ತ ಕುಡಿಸುತ್ತಾರೆ ಈ ವಿಜ್ಞಾನಿ- ಕಾರಣ ಏನು ಗೊತ್ತಾ?

    ‘ಬೇಟಿ ಬಚಾವೋ’ ಯೋಜನೆ ಅಡಿ ಎರಡು ಲಕ್ಷ ರೂಪಾಯಿ ಸಿಗತ್ತಾ?

    ವಿಚ್ಛೇದನ ಪಡೆಯಲು ಸರ್ಕಾರಿ ನೌಕರರು ಇಲಾಖೆಯ ಒಪ್ಪಿಗೆ ಪಡೆಯಬೇಕಾಗುತ್ತದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts