More

    ಚಾಮರಾಜನಗರದ ಅಂಧರ ಬಾಳಲ್ಲಿ ಬೆಳಕಾಗಲಿದೆ ಅಪ್ಪು ಆದರ್ಶ: ‘ಪುನೀತ್‌’ ಕಣ್ಣಿನ ಆಸ್ಪತ್ರೆ- 46 ಸಾವಿರ ಮಂದಿಯ ನೇತ್ರದಾನ

    ಚಾಮರಾಜನಗರ: ನಟ ಪುನೀತ್ ರಾಜ್‍ಕುಮಾರ್ ಅವರು ನೇತ್ರದಾನ ಮಾಡಿರುವುದು ಇದೀಗ ಬಹಳಷ್ಟು ಅಭಿಮಾನಿಗಳಿಗೆ ಉತ್ಸಾಹ ಮೂಡಿಸಿದೆ. ಹಲವಾರು ಮಂದಿ ಇದಾಗಲೇ ನೇತ್ರದಾನಕ್ಕೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಪುನೀತ್‌ ಅವರು ಸಾಂಸ್ಕೃತಿಕ ರಾಯಭಾರಿಯಾಗಿದ್ದ ಚಾಮರಾಜನಗರದ ಜಿಲ್ಲಾಡಳಿತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯನ್ನು ತೆರೆದು ಅದಕ್ಕೆ ಪುನೀತ್‌ ಅವರ ಹೆಸರನ್ನೇ ಇಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಕುರಿತು ಈಗಾಗಲೇ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಾಗ ಲಭ್ಯವಿಲ್ಲದಿದ್ದರೆ ಸರ್ಕಾರದಿಂದಲೇ ಸ್ಥಳ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಿರುವ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನಿಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದ್ದಾರೆ.

    ಇದರ ಅಂಗವಾಗಿ ಇದಾಗಲೇ ಬೃಹತ್‌ ಪ್ರಮಾಣದಲ್ಲಿ ನೇತ್ರದಾನ ನೋಂದಣಿ ಆರಂಭಿಸಲಾಗಿದೆ. ಅಪ್ಪು 46ನೇ ವಯಸ್ಸಿನಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ 46 ಸಾವಿರ ಮಂದಿಯಿಂದ ನೇತ್ರದಾನ ನೋಂದಣಿ ಮಾಡಿಸುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದೆ. ನವೆಂಬರ್ ಅಂತ್ಯದೊಳಗೆ 10 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಕಾರ್ಯ ಮಾಡಲಾಗುವುದು, ನಂತರ ಇದರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಡಾ.ರವಿ ಹೇಳಿದ್ದಾರೆ.

    ಇದಾಗಲೇ ನೇತ್ರದಾನ ಮಾಡುವಂತೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗಿದೆ. ರೆಡ್‍ಕ್ರಾಸ್ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಎಲ್ಲೆಡೆ ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಯಾವುದೇ ವ್ಯಕ್ತಿ ಮರಣ ಹೊಂದಿದ ನಂತರ ಕಣ್ಣುಗಳು ಮಣ್ಣಾಗಬಾರದು. ಆ ಕಣ್ಣುಗಳು ಜೀವಂತವಿದ್ದು ಇತರೆ ಅಂಧರಿಗೆ ದಾರಿದೀಪವಾಗಬೇಕು. ಪುನೀತ್ ರಾಜ್‍ಕುಮಾರ್ ಅವರ ನೇತ್ರದಾನ ಆದರ್ಶ ಎಲ್ಲರಲ್ಲಿಯೂ ಬರಬೇಕು. ಇದಕ್ಕಾಗಿ ಪುನೀತ್‌ ಅವರನ್ನು ಆದರ್ಶವಾಗಿಟ್ಟುಕೊಂಡು ಈ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದಾರೆ.

    ಸದ್ಯದ ವರದಿಯ ಪ್ರಕಾರ ಚಾಮರಾಜನಗರದಲ್ಲಿ 3500 ಅಂಧರಿದ್ದಾರೆ. ಇದರ ಸ್ಪಷ್ಟ ಚಿತ್ರಣ ದೊರೆಯಬೇಕಿದೆ. ಅದರ ಆಧಾರದ ಮೇಲೆ ಇನ್ನಷ್ಟು ಕಾರ್ಯ ನಡೆಯುವ ಚಿಂತನೆಯಲ್ಲಿ ಜಿಲ್ಲಾಡಳಿತ ಇದೆ.

    ‘ಬದುಕು ಸಿನಿಮಾ ಅನ್ನೋದು ಎಷ್ಟು ನಿಜವಾಗೋಯ್ತು! ಪುನೀತ್‌ ನನ್ನ ಜೀವನದಲ್ಲಿ ಮೂರು ಪಾತ್ರ ವಹಿಸಿದ್ದಾರೆ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts