More

    ಸಿಇಟಿ-2020: ರ್‍ಯಾಂಕ್‌ ವಿಜೇತರಿವರು – ಆದರೆ ಇದೇ ಅಂತಿಮವಲ್ಲ

    ಬೆಂಗಳೂರು: ಜುಲೈ 30 ರಿಂದ ಆಗಸ್ಟ್‌ 1ರ ವರೆಗೆ ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್‌ಗೆ 1,94, 419 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಅವರ ಪೈಕಿ ಪರೀಕ್ಷೆ ಬರೆದವರು 1, 75,349. ಇದರಲ್ಲಿ 1,53,470 ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಕೋರ್ಸ್‌ಗೆ ರ್‍ಯಾಂಕ್‌ ನೀಡಲಾಗಿದೆ. ಕೃಷಿ ಕೋರ್ಸ್‌ಗೆ 1,27,627 ವಿದ್ಯಾರ್ಥಿಗಳಿಗೆ, ವೆಟರ್ನರಿ ಕೋರ್ಸ್‌ಗೆ 1, 29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಹಾಗೂ ಬಿ-ಫಾರ್ಮಾ- ಡಿ-ಫಾರ್ಮಾಕ್ಕೆ 1,55,552 ಮಂದಿಗೆ ರ್‍ಯಾಂಕ್‌ ನೀಡಲಾಗಿದೆ.

    ಈ ಕುರಿತು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ವಿವಿಧ ವಿಷಯಗಳಲ್ಲಿ ರ್‍ಯಾಂಕ್‌ ಪಡೆದಿರುವವರ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದ್ದಾರೆ.

    ಆದರೆ, ಈ ರ್‍ಯಾಂಕ್‌ ಪಟ್ಟಿಯಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಗಳು ಇರುವ ಬಗ್ಗೆಯೂ ಉಪಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ, ಹಲವಾರು ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಂಕಗಳನ್ನು ನಿರೀಕ್ಷಿಸಿರುತ್ತಾರೆ. ಅವರು ತಮಗೆ ಕಡಿಮೆ ಅಂಕ ಬಂದಲ್ಲಿ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಸಾಧ್ಯತೆ ಇದೆ.

    ಈ ಹಿನ್ನೆಲೆಯಲ್ಲಿ, ಒಂದು ವೇಳೆ ರ್‍ಯಾಂಕ್‌ ಪಡೆಯದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಬಂದು, ಅವರು ಇದಾಗಲೇ ಘೋಷಣೆ ಮಾಡಿರುವ ರ್‍ಯಾಂಕ್‌ ವಿಜೇತರಿಗಿಂತ ಹೆಚ್ಚಿಗೆ ಅಂಕ ಪಡೆದರೆ, ಆಗ ಪುನಃ ರ್‍ಯಾಂಕ್‌ನಲ್ಲಿ ವ್ಯತ್ಯಾಸ ಆಗುವುದು ಎಂದು ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ: ವಿವರಣೆ ನೀಡಿದ ಡಿಸಿಎಂ

    ಸಿಇಟಿ ಬರೆದಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಿದ ನಂತರ ಏನಾದರೂ ಸಮಸ್ಯೆಗಳು ಇದ್ದರೆ ಅದನ್ನು [email protected] ಮೂಲಕ ಗಮನಕ್ಕೆ ತರಬೇಕು, ರ್‍ಯಾಂಕ್‌ ನೀಡಿದ ಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆ ನಂತರ ಅರ್ಹತೆ ಪರಿಗಣಿಸಲಾಗವುದು, ಯಾವುದಾದರೂ ಅರ್ಹ ವಿದ್ಯಾರ್ಥಿಗೆ ರ್‍ಯಾಂಕ್‌ ನೀಡದೇ ಇದ್ದಲ್ಲಿ ದ್ವಿತೀಯ ಪಿಯುಸಿಯ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್‌ಗೆ ಕಳುಹಿಸಿ ಪಡೆದಕೊಳ್ಳಬಹುದು ಎಂದು ಅವರು ಸೂಚಿಸಿದ್ದಾರೆ.

    ಸಿಇಟಿ-2020: ರ್‍ಯಾಂಕ್‌ ವಿಜೇತರಿವರು - ಆದರೆ ಇದೇ ಅಂತಿಮವಲ್ಲ

    ಸದ್ಯ ಬಿಡುಗಡೆ ಮಾಡಿರುವ ರ್‍ಯಾಂಕ್ ವಿಜೇತರ ಪಟ್ಟಿ ಇಲ್ಲಿದೆ:
    ಇಂಜಿನಿಯರಿಂಗ್:
    1. ಎಂ. ರಕ್ಷಿತಾ, ಆರ್.ವಿ. ಪಿಯು ಕಾಲೇಜು, ಬೆಂಗಳೂರು,
    2. ಆರ್. ಶುಭನ್‌–ಶ್ರೀ ಚೈತನ್ಯ ಇ–ಟೆಕ್ನೊ ಸ್ಕೂಲ್‌, ಬೆಂಗಳೂರು,
    3. ಎಂ. ಶಶಾಂಕ್‌ ಬಾಲಾಜಿ, ಬೇಸ್‌ ಪಿಯು ಕಾಲೇಜು, ಬೆಂಗಳೂರು

    ಬಿಎಸ್‌ಸಿ, ಕೃಷಿ:
    1.ಎ.ಬಿ. ವರುಣ್‌ಗೌಡ, ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
    2. ಕೆ. ಸಂಜನಾ– ಬೇಸ್‌ ಪಿಯು ಕಾಲೇಜು, ಮೈಸೂರು,
    3. ಲೋಕೇಶ್‌ ಬಿ. ಜೋಗಿ– ಶ್ರೀರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

    ಪಶುವೈದ್ಯಕೀಯ:
    1. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್‌, ಬೆಂಗಳೂರು,
    2. ಆರ್ಯನ್‌ ಮಹಾಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್‌ ಸೆಕೆಂಡರಿ ಸ್ಕೂಲ್, ಕೋಟ
    3. ಕೆ. ಸಂಜನಾ– ಬೇಸ್‌ ಪಿಯು ಕಾಲೇಜು, ಮೈಸೂರು

    ಬಿ. ಫಾರ್ಮಾ, ಡಿ.ಫಾರ್ಮಾ: 1. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್‌, ಬೆಂಗಳೂರು, 2. ಸಂದೀಪನ್‌ ನಾಸ್ಕರ್– ಹೊರರಾಜ್ಯದ ವಿದ್ಯಾರ್ಥಿ, 3. ಪವನ್ ಎಸ್. ಗೌಡ–ನಾರಾಯಣ ಪಿಯು ಕಾಲೇಜು, ಬೆಂಗಳೂರು.

    ಯೋಗವಿಜ್ಞಾನ ಮತ್ತು ನ್ಯಾಚುರೋಪಥಿ:
    1. ಪಿ.ಪಿ. ಆರ್ನವ್‌ ಅಯ್ಯಪ್ಪ– ಆಳ್ವಾಸ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ.
    2. ಕೆ. ಸಂಜನಾ– ಬೇಸ್‌ ಪಿಯು ಕಾಲೇಜು, ಮೈಸೂರು,
    3. ಪಿ. ಸಾಯಿ ವಿವೇಕ್– ನಾರಾಯಣ ಇ–ಟೆಕ್ನೊ ಸ್ಕೂಲ್‌, ಬೆಂಗಳೂರು.

    http://kea.kar.nic.in, http://cet.kar.nic.in ಮತ್ತು http://karresult.nic.in ಜಾಲಾತಾಣದಲ್ಲಿ ಫಲಿತಾಂಶ ಲಭ್ಯವಾಗಲಿದೆ.

    ಗಂಡ ಹೆಚ್ಚು ಪ್ರೀತಿಸ್ತಾನೆ- ಲೈಫ್‌ ಬೋರ್‌ ಆಗಿದೆ, ವಿಚ್ಛೇದನ ಬೇಕು: ಜಡ್ಜ್‌ ಕಕ್ಕಾಬಿಕ್ಕಿ!

    ಕರೊನಾಕ್ಕೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆಂದ ವೈದ್ಯನಿಗೆ ‘ಸುಪ್ರೀಂ’ನಿಂದ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts