More

    ಸದನದಲ್ಲಿ ಸದ್ದು ಮಾಡುತ್ತಿದೆ ಸಿಡಿ- ಕೋರ್ಟ್‌ಗೆ ಹೋಗಿದ್ದಕ್ಕೆ ಕೊಡಲಾಗ್ತಿದೆ ಸಮರ್ಥನೆ

    ಬೆಂಗಳೂರು: ಮರುಕಳಿಸಿದ ಸಿಡಿ ಗದ್ದಲ, ಪ್ರತಿಪಕ್ಷ ಕಾಂಗ್ರೆಸ್‌ನಿಂದ ಸಭಾಪತಿ ಪೀಠದ ಮುಂದೆ ಧರಣಿ ಹಾಗೂ ಮಾತಿನ ಚಕಮಕಿಯಿಂದಾಗಿ ಕಲಾಪ ಕೆಲ ಕಾಲ ಮುಂದೂಡಿಕೆಯಾಗಿದೆ.
    ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ ನ ಪಿ.ಆರ್.ರಮೇಶ್ ಅವರು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನೀಡಿದ ಉತ್ತರ ಬಹಿಷ್ಕರಿಸುವುದಾಗಿ ಹೇಳಿದ್ದು, ಪರ-ವಿರೋಧಕ್ಕೆ ಕಾರಣವಾಯಿತು.

    ಅಯೋಮಯ ಸ್ಥಿತಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸದನವನ್ನು ಕೆಲ ನಿಮಿಷ ಮುಂದೂಡಿದರು.

    ಇದಕ್ಕೂ ಮುಂಚೆ ಪಿ.ಆರ್.ರಮೇಶ್ ಬಹಿಷ್ಕರಿಸಿದ ಪ್ರಶ್ನೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬೇರೆಯವರಿಗೆ ಕೇಳಲು ಅವಕಾಶ ಕೊಡಿ ಎಂದು ಸಭಾನಾಯಕ ಕೋಟ ಶ್ರೀನಿವಾಸ
    ಪೂಜಾರಿ ಒತ್ತಾಯಿಸಿದರೆ, ಬಿಜೆಪಿ ಸದಸ್ಯರು ಸಾಥ್ ನೀಡಿದರು.

    ಎಂ.ಕೆ.ಪ್ರಾಣೇಶ್ ಪ್ರತಿಕ್ರಿಯಿಸಿ ನಿಯಮಾನುಸಾರ ಪ್ರಶ್ನೆ ವಾಪಸ್ ಪಡೆಯುತ್ತಿರುವ ಬಗ್ಗೆ ಸಂಬಂಧಿಸಿದ ಸದಸ್ಯ ಲಿಖಿತವಾಗಿ ತಿಳಿಸಬೇಕು. ಉಪ ಪ್ರಶ್ನೆ ಬೇರೆಯವರಿಗೆ ಕೇಳಲು ಅವಕಾಶವಿದೆ ಎಂದು ರೂಲಿಂಗ್ ನೀಡಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿತು.

    ಮಾತು ಮುಂದುವರಿಸಿದ ಎಂ.ಕೆ.ಪ್ರಾಣೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲ ಅನಾಹುತಗಳಾಗುತ್ತಿವೆ. ಇದೇ ರೀತಿ ಸಿಡಿ ನಾಳೆ ನಿಮ್ಮದೂ ( ಕಾಂಗ್ರೆಸ್) ಬರಬಹುದು. ತೇಜೋವಧೆ ತಡೆಯಲೆಂದು ಸಚಿವರು ಕೋರ್ಟ್ ಗೆ ಹೋಗಿದ್ದಾರೆ‌ ಎಂದಾಗ ಕಾಂಗ್ರೆಸ್ ಆಕ್ಷೇಪಿಸಿತು.

    ಲವರ್​ ಜತೆ ಮದುವೆಗೆ ಸಿದ್ಧಳಾಗಿದ್ದ ಸಿಡಿ ಲೇಡಿ: ಉತ್ತರ ಕರ್ನಾಟಕದ ಇಂಜಿನಿಯರಿಂಗ್​ ಯುವತಿಯ ಸ್ಟೋರಿ ಇದು…

    ದೆಹಲಿಯ ಕ್ರಿಕೆಟ್‌ ಪಂದ್ಯದಲ್ಲಿ ಪ್ರಜ್ವಲ್‌ ರೇವಣ್ಣ ಮಿಂಚು- ಕನ್ನಡಿಗರ ಕರೆಗೆ ಓಗೊಟ್ಟು ರಾಜಧಾನಿಗೆ ಹೋದ ಸಂಸದ

    ಮದುವೆ ಮುಗೀತಿದ್ದಂಗೆ ಪೊಲೀಸ್ರು ಕೊಟ್ರು ಎಂಟ್ರಿ- ವರನ ಕಡೆಯವರಿಗೆ ಹಾಕಿದ್ರು 50 ಸಾವಿರ ರೂ. ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts