More

    ಬೈಡೆನ್‌ ಸರ್ಕಾರದಲ್ಲಿ ಮಂಡ್ಯದ ವೈದ್ಯನಿಗೆ ಪ್ರಮುಖ ಸ್ಥಾನ?

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರು, ಕರೊನಾವೈರಸ್ ಸೋಂಕು ತಡೆಗಾಗಿ ಕಾರ್ಯಪಡೆಯನ್ನು ರಚಿಸಲಿದ್ದಾರೆ. ಇದರಿಂದ ಭಾರತೀಯ ಮೂಲಕ ಅಮೆರಿಕನ್‌ ಆಗಿರುವ ಡಾ.ವಿವೇಕ್ ಮೂರ್ತಿ ಅವರಿಗೆ ಪ್ರಮುಖ ಸ್ಥಾನ ಸಿಗಲಿದೆ ಎನ್ನಲಾಗಿದೆ.

    ಬೈಡೆನ್‌ ಅವರು ಕೂಡ ಅಧ್ಯಕ್ಷರಾಗಿ ಚುನಾಯಿತರಾದ ಮೇಲೆ ತಮ್ಮ ಮೊದಲ ಭಾಷಣದಲ್ಲೇ ಕರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಕೋವಿಡ್ ತಡೆ ಯೋಜನೆಯ ನೀಲನಕ್ಷೆ ರೂಪಿಸಲು ಪ್ರಮುಖ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನೊಳಗೊಂಡ ತಂಡವೊಂದನ್ನು ಸೋಮವಾರ ಘೋಷಿಸಲಿದ್ದೇನೆ. 2021ರ ಜನವರಿ 20ರಿಂದ ಯೋಜನೆ ಅನುಷ್ಠಾನಕ್ಕೆ ಬರಲಿದೆ. ವಿಜ್ಞಾನದ ತಳಹದಿಯಲ್ಲೇ ಯೋಜನೆ ರೂಪಿಸಲಾಗುತ್ತದೆ” ಎಂದಿದ್ದಾರೆ.

    ಇದರ ಬೆನ್ನಲ್ಲೇ ಇದೀಗ ಡಾ.ವಿವೇಕ್‌ ಅವರ ಹೆಸರು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ವಿಶೇಷವೆಂದರೆ ಡಾ.ವಿವೇಕ್‌ ಅವರು ಕರ್ನಾಟಕದವರು. ಅಂದರೆ ಇವರು ಮಂಡ್ಯದ ಹಲ್ಲೆಗೆರೆ ಗ್ರಾಮದವರು. ಇದಕ್ಕೂ ಮೊದಲು ಅಂದರೆ ಬರಾಕ್‌ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಅಂದರೆ 37ನೇ ವಯಸ್ಸಿನಲ್ಲಿಯೇ ಈ ಹುದ್ದೆ ಏರಿದ್ದರು.

    ಇದನ್ನೂ ಓದಿ: ಪೊಲೀಸ್‌ಗೆ ‘ಪುಲಿಷ್’ ಎಂದು ಬರೆದು ಸಿಕ್ಕಿಬಿದ್ದ ಕೊಲೆಗಾರ!

    ಒಬಾಮಾ ಅವರ ಪರವಾಗಿ 2008 ಹಾಗೂ 2012ರಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ವಿವೇಕ್‌ ಅವರು, ಜೋ ಬೈಡೆನ್‌ ಅವರ ಚುನಾವಣಾ ಕಾರ್ಯತಂತ್ರಕ್ಕೂ ಸಾಕಷ್ಟು ನೆರವಾಗಿದ್ದರು ಎನ್ನಲಾಗಿದೆ.

    ಡಾ.ವಿವೇಕ್ ಮೂರ್ತಿ ಅವರ ಅಜ್ಜ ಎಚ್. ನಾರಾಯಣಶೆಟ್ಟಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತರಾಗಿದ್ದರು. ತಂದೆ ಲಕ್ಷ್ಮೀನರಸಿಂಹ ಮೂರ್ತಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಹಾಗೂ ಎಂಬಿಎ ಪದವಿ ಪಡೆದು ಬಳಿಕ ಯೇಲ್ಸ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ, ‘ಡಾ ಆಫ್ ಅಮೆರಿಕ ಸಂಸ್ಥೆ’ಯನ್ನು ಗೆಳೆಯರ ಜತೆ ಸೇರಿ ಸ್ಥಾಪಿಸಿದರು.

    ಬೈಡೆನ್‌ ಆಯ್ಕೆ ಸಂತಸ ತಂದಿದೆ… ಲೂಟಿಕೋರರಿಗೆ ಅಭಿನಂದನೆ- ಎಡವಟ್ಟಾಗೋಯ್ತು ಇಮ್ರಾನ್‌ ಶುಭಾಶಯ..!

    ತಮಿಳುನಾಡಿನ ತುಳಸೇಂದ್ರಪುರದಲ್ಲಿ ವಾರದ ಮೊದಲೇ ದೀಪಾವಳಿ: ಇದಕ್ಕೆ ಕಾರಣ ಅಮೆರಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts