More

    ಒಮ್ಮೊಮ್ಮೆ ಇಂಥ ವಿಚಿತ್ರವೂ ಆಗುತ್ತೆ! ಎಮ್ಮೆಯೇ ಬಂದು ಜಗಳ ಬಗೆಹರಿಸಿತು…

    ಲಖನೌ: ಒಮ್ಮೊಮ್ಮೆ ಚಿತ್ರ-ವಿಚಿತ್ರ ಘಟನೆಗಳು ಸಂಭವಿಸುತ್ತವೆ, ಮನುಷ್ಯನ ಊಹೆಗೂ ನಿಲುಕದ ವಿಷಯಗಳು ಜರುಗುತ್ತವೆ. ಅದರಲ್ಲಿಯೂ ಪ್ರಾಣಿ ಮತ್ತು ಮನುಷ್ಯನ ಸಂಬಂಧದಲ್ಲಿಯೂ ಕುತೂಹಲ ಘಟನೆಗಳು ನಡೆಯುವುದುಂಟು.

    ಅಂಥ ಒಂದು ಆದರೆ ಅಪರೂಪ ಎನಿಸುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಎಮ್ಮೆಯೇ ಖುದ್ದಾಗಿ ಇಬ್ಬರ ನಡುವಿನ ಜಗಳ ಪರಿಹರಿಸಿದ ಘಟನೆ ಇದು. ಇದಕ್ಕೆ ಕಾರಣ, ಉತ್ತರಪ್ರದೇಶದ ಪೊಲೀಸರ ಸೂಪರ್​ ತಲೆ ಎನ್ನುವುದೂ ಅಷ್ಟೇ ಪ್ರಶಂಸಾರ್ಹ.

    ಅಷ್ಟಕ್ಕೂ ಆಗಿದ್ದೇನೆಂದರೆ ಈ ಘಟನೆಯ ಹೀರೋ ಒಂದು ಎಮ್ಮೆ. ಉತ್ತರಪ್ರದೇಶದ ಕನ್ನೌಜ್ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಎಮ್ಮೆಗಾಗಿ ಜಗಳವಾಡುತ್ತಿದ್ದರು. ಇರುವ ಒಂದು ಎಮ್ಮೆ ತಮ್ಮದೇ ಎಂದು ಇಬ್ಬರೂ ಕಿತ್ತಾಡುತ್ತಿದ್ದರು.

    ನಂತರ ಈ ವಿಷಯ ಪೊಲೀಸ್ ಠಾಣೆಗೆ ಹೋಯಿತು. ಇಬ್ಬರಿಂದಲೂ ವಿಷಯ ಕೇಳಿತಿಳಿದ ಎಸ್‍ಎಸ್‍ಐ ವಿಜಯಕಾಂತ್ ಮಿಶ್ರಾ ಅವರಿಗೆ ಎಮ್ಮೆ ಇಬ್ಬರಲ್ಲಿ ಯಾರದ್ದು ಎಂದು ತಿಳಿಯುವುದು ಕಷ್ಟವೇ ಆಗಿಹೋಯ್ತು. ನಂತರ ಕೂಡಲೇ ಅವರ ಪೊಲೀಸ್​ ತಲೆಗೆ ಒಂದು ಐಡಿಯಾ ಸಿಕ್ಕೇ ಬಿಟ್ಟಿತು.

    ಅವರ ಐಡಿಯಾ ಏನು ಎನ್ನುವುದಕ್ಕೂ ಮೊದಲು ಈ ಎಮ್ಮೆಯ ಜಗಳದ ವಿಷಯ ಏನು ಎಂದು ಹೇಳುವುದಾದರೆ, ವೀರೇಂದ್ರ ಹಾಗೂ ಧರ್ಮೆಂದ್ರ ಅಕ್ಕ-ಪಕ್ಕದ ಗ್ರಾಮದವರು. ವೀರೇಂದ್ರ ಆಲಿ ನಗರದ ನಿವಾಸಿ ಹಾಗೂ ಧರ್ಮೇಂದ್ರ ಮಾಧವ್ ನಗರದವರು.

    ಇದನ್ನೂ ಓದಿ: ಹುಟ್ಟಿದ ವಾರವೇ ನಿಮಗೆ ಶುಭ- ಜ್ಯೋತಿಷಿ ಸಲಹೆ ಮೇರೆಗೆ ಕುಸುಮಾ ನಾಮಪತ್ರ ಸಲ್ಲಿಕೆ

    ವೀರೇಂದ್ರ ಪೊಲೀಸರಿಗೆ ದೂರು ನೀಡಿ, ತಮ್ಮ ಎಮ್ಮೆಯನ್ನು ಧರ್ಮೇಂದ್ರ ಕದ್ದು ಮುಸ್ಲಿಂ ಎಂಬ ವ್ಯಕ್ತಿಗೆ ಮಾರಿದ್ದಾನೆ ಎಂದಿದ್ದ. ತಮ್ಮ ಎಮ್ಮೆಯನ್ನು ಮಾರಾಟ ಮಾಡಲೆಂದು ಭಾನುವಾರ ಜಾನುವಾರು ಮೇಳಕ್ಕೆ ಆತ ಎಮ್ಮೆ ಒಯ್ದಿದ್ದಾನೆ ಎಂದು ಆರೋಪಿಸಿದರೆ, ವೀರೇಂದ್ರ, ಈ ಎಮ್ಮೆ ತನಗೆ ಸೇರಿದ್ದು ಎಂದು ಜೋರು ಮಾಡಿದ್ದಾನೆ. ಇದರ ನಡುವೆ ಎಂಟ್ರಿ ಕೊಟ್ಟಿರುವ ಮುಸ್ಲಿಂ ವ್ಯಕ್ತಿ ತನಗೆ ಧರ್ಮೇಂದ್ರ ಈ ಎಮ್ಮೆಯನ್ನು ಮಾರಾಟ ಮಾಡಿದ್ದಾನೆ ಎಂದು ಹೇಳಿಬಿಟ್ಟಿದ್ದಾನೆ. ಆಗ ವೀರೇಂದ್ರ ಅದು ನನ್ನದೇ ಎಮ್ಮೆ, ಅದಕ್ಕೆ ಮಾರಿದ್ದೇನೆ ಎಂದಿದ್ದಾನೆ.

    ಆದರೆ ಎಮ್ಮೆ ತನ್ನದು ಎಂದು ವೀರೇಂದ್ರ ತಿರ್ವಾ ಕೊಟ್ವಾಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಎಮ್ಮೆ ಮಾರಿದ್ದಂತೂ ನಿಜ. ಆದರೆ ಎಮ್ಮೆ ಯಾರದ್ದು ಎಂದು ತಿಳಿಯುವುದೇ ಎಸ್‍ಎಸ್‍ಐ ವಿಜಯಕಾಂತ್ ಮಿಶ್ರಾ ಅವರಿಗೆ ತಲೆನೋವಾಯಿತು.

    ಅಂತೂ ಕೊನೆಗೊಂದು ಉಪಾಯ ಹೊಳೆಯಿತು. ಕೂಡಲೇ ಅವರು ಎಮ್ಮೆಯನ್ನೇ ಪೊಲೀಸ್ ಠಾಣೆಗೆ ಕರೆತರುವಂತೆ ಸೂಚಿಸಿದರು. ಅಂತೆಯೇ ಎಮ್ಮೆಯನ್ನು ಠಾಣೆಗೆ ಕರೆತರಲಾಯಿತು.

    ನಂತರ ಎಮ್ಮೆಯನ್ನು ಅದರ ಹೆಸರಿನಿಂದ ಕೂಗುವಂತೆ ಇಬ್ಬರಿಗೂ ಹೇಳಲಾಯಿತು. ಇಬ್ಬರೂ ಎಮ್ಮೆಯನ್ನು ಕರೆದಾಗ, ತನ್ನೊಡೆಯ ಧರ್ಮೇಂದ್ರನ ಬಳಿ ಎಮ್ಮೆ ಹೋಯಿತು. ವೀರೇಂದ್ರನತ್ತ ಗಮನವನ್ನೂ ಅದು ಹರಿಸಿಲ್ಲ. ಹೀಗಾಗಿ ಎಮ್ಮೆ ಧರ್ಮೇಂದ್ರನಿಗೆ ಸೇರಿದ್ದು ಎಂದು ತೀರ್ಮಾನವಿತ್ತರು ಪೊಲೀಸರು. ವೀರೇಂದ್ರ ಪೆಚ್ಚುಮೋರೆ ಹಾಕಿ ಹೋದ.

    ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್‌ಐಆರ್

    ಎಸ್​ಬಿಐ ಆನ್​ಲೈನ್​ ಸೇರಿದಂತೆ ಕೆಲ ಸೇವೆ ಸ್ಥಗಿತ- ಬ್ಯಾಂಕ್​ನಿಂದ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts