More

    ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!

    ನವದೆಹಲಿ: ಭಾರತ-ಚೀನಾ ಮಧ್ಯೆ ಲಡಾಖ್ ಗಡಿ ಸಂಘರ್ಷ ತಾರಕ್ಕೇರಿರುವ ಈ ಹೊತ್ತಿನಲ್ಲಿಯೇ, ಉಭಯ ದೇಶಗಳು ಒಂದರ ಮೇಲೊಂದು ಕತ್ತಿ ಮಸೆಯುತ್ತಿರುವ ನಡುವೆಯೇ 12ನೇ ಬ್ರಿಕ್ಸ್‌ ಶೃಂಗಸಭೆ ಶುರುವಾಗಲಿದೆ.

    ಇಂದು ನಡೆಯಲಿರುವ ಬ್ರಿಕ್ಸ್​ (ಬ್ರೆಜಿಲ್‌, ಭಾರತ, ರಷ್ಯಾ, ಚೀನಾ ಹಾಗೂ ಸೌತ್ ಆಫ್ರಿಕಾ) ಶೃಂಗಸಭೆ ಅತ್ಯಂತ ಕುತೂಹಲದ ಕೇಂದ್ರವಾಗಲಿದೆ. ಇದಕ್ಕೆ ಕಾರಣ, ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ. ಜಿಂಗ್​ಪಿಂಗ್​ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

    ಇಂದು ಸಂಜೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಲಿದೆ. ರಷ್ಯಾ ಆಯೋಜಿಸುತ್ತಿರುವ ಈ ಸಭೆಯಲ್ಲಿ “ಬ್ರಿಕ್ಸ್​”ನ ಐದು ಸದಸ್ಯ ರಾಷ್ಟ್ರಗಳ ಪ್ರಮುಖರು ಭಾಗಿಯಾಗಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ವರ್ಚುವಲ್ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಕರೊನಾ ಕಣಗಳು ಪತ್ತೆ – ಚೀನಾದಲ್ಲಿ ಮಾಂಸಗಳ ಆಮದು ಬ್ಯಾನ್​!

    ಇಂದು ಸಂಜೆ 4.30ಕ್ಕೆ ಬ್ರಿಕ್ಸ್ ರಾಷ್ಟ್ರಗಳ 12ನೇ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್​-19 ಬಿಕ್ಕಟ್ಟಿನ ನಡುವೆ ಆರ್ಥಿಕ ಚೇತರಿಕೆಯ ಬಗ್ಗೆ ಗಮನ ಹರಿಸಲಿದ್ದಾರೆ.

    ಈ ವರ್ಚುವಲ್ ಸಭೆಯಲ್ಲಿ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಬಹುಪಕ್ಷೀಯ ವ್ಯವಸ್ಥೆ, ಕರೊನಾ ವೈರಸ್ ಪಿಡುಗು, ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ ಮತ್ತು ಇಂಧನ ಸೇರಿದಂತೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಿವೆ.

    ಇತ್ತೀಚೆಗಷ್ಟೇ (ನವೆಂಬರ್ 10) ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಶಾಂಘೈ ಕೋ-ಅಪರೇಷನ್ ಆರ್ಗನೈಸೇಷನ್‌ ಆಯೋಜಿಸಿದ್ದ ವರ್ಚ್ಯುವಲ್​ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಉಭಯ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಶಮನದ ಕುರಿತಂತೆ ಮಾತುಕತೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷರನ್ನು ಮೇಲಿಂದ ಮೇಲೆ ಭೇಟಿಯಾಗುತ್ತಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

    ​ಫೋನ್​ಗೆ ಅಡಿಕ್ಟ್​ ಆಗಿರೋ ಮಕ್ಕಳಿಗೆ ಬೈತೀರಾ? ನಾಲ್ವರು ಕಾಣೆಯಾದ​ ಬಾಲಕಿಯರ ಸ್ಟೋರಿ ಓದಿ…

    ಕೊನೇ ಕ್ಷಣದಲ್ಲಿ ಮೋದಿಗೆ ತಪ್ಪಿಹೋಯ್ತು ಡಿಸಿಎಂ ಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts