More

    VIDEO: ಅಪ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ನಾವೆಲ್ಲಾ ಒಗ್ಗಟ್ಟಾಗಬೇಕಿದೆ: ಶೃಂಗಸಭೆಯಲ್ಲಿ ಮೋದಿ ಮಾತು

    ನವದೆಹಲಿ: ಇಂದು ವಿಶ್ವದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಶಾಂತಿ ಮತ್ತು ಸುರಕ್ಷೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಸದ್ಯ ನಮ್ಮ ಕಣ್ಣಮುಂದೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆ ಇದೆ. ಅಲ್ಲಿ ಶಾಂತಿ, ನೆಮ್ಮದಿಯನ್ನು ಪುನರ್‌ಸ್ಥಾಪಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಶಾಂಘೈ ಸಹಕಾರ ಸಂಘಟನೆಯ (SCO) 21ನೇ ಶೃಂಗಸಭೆ ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ ಪ್ರಧಾನಿ ಮಾತನಾಡಿದರು. ಈ ಬಾರಿ ಎಸ್‌ಇಒ ಸಂಘಟನೆಗೆ ಹೊಸದಾಗಿ ಇರಾನ್‌ ಬಂದಿರುವುದು ಸ್ವಾಗತಾರ್ಹ ವಿಷಯವಾಗಿದೆ. ಇದರ ಪಾರ್ಟನ್‌ ಆಗಿ ಸೌದಿ ಅರೇಬಿಯಾ, ಈಜಿಪ್ಟ್‌ ಮತ್ತು ಕತಾರ್‌ ಕೂಡ ಸೇರಿಕೊಂಡಿದೆ. ಈ ಎಲ್ಲಾ ಹೊಸ ಸದಸ್ಯರಿಗೆ ನಾನು ಸ್ವಾಗತಿಸುತ್ತೇನೆ ಎಂದ ಮೋದಿ ವಿಶ್ವದಲ್ಲಿ ಶಾಂತಿ ಕಾಪಾಡುವ ಬಗ್ಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

    ನಿಮ್ಮ ಇತಿಹಾಸ ಕೆದಕಿದಾಗ ಮಧ್ಯ ಏಷ್ಯಾದಲ್ಲಿ ನಡೆದಿರುವ ಘಟನೆಗಳನ್ನು ನಾವು ಮೆಲುಕು ಹಾಕಬಹುದಾಗಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಈ ಹೊಸ ಸದಸ್ಯರು ಸೇರಿದಂತೆ ಎಲ್ಲರೂ ವಿಶ್ವ ಶಾಂತಿ ಕಾಪಾಡಲು ಸಹಕರಿಸುವ ಅಗತ್ಯವಿದೆ ಎಂದರು.

    ಇದೇ ವೇಳೆ ವಿಶ್ವದ ಶಕ್ತಿಯಾಗಿರುವ ಯುವ ಸಮುದಾಯವನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೇಗೆಲ್ಲಾ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಬಹುದು ಎಂದು ವಿವರಿಸಿದ ಪ್ರಧಾನಿ ಮೋದಿ, ವಿಜ್ಞಾನ ಸಮ್ಮೇಳನದ ಮೂಲಕ ಭಾರತದಲ್ಲಿ ನಡೆಸಿರುವ ಹಲವಾರು ಉಪಯುಕ್ತ ಯೋಜನೆಗಳ ಬಗ್ಗೆ ವಿವರಿಸಿದರು.

    ಶಾಂಘೈ ಸಹಕಾರ ಸಂಘಟನೆ ಸ್ಥಾಪನೆಗೊಂಡು 20 ವರ್ಷ ಕಳೆದಿದೆ. ಈ ಬಾರಿ 20ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಶೃಂಗಸಭೆ ಇನ್ನಷ್ಟು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಭಾರತ ಶಾಂಘೈ ಸಹಕಾರ ಸಂಘಟನೆಯ ಪೂರ್ಣ ಪ್ರಮಾಣದ ಸದಸ್ಯತ್ವ ವಹಿಸಿಕೊಂಡ ಬಳಿಕ ಭಾಗವಹಿಸುತ್ತಿರುವ ನಾಲ್ಕನೇ ಶೃಂಗಸಭೆ ಇದಾಗಿದೆ. ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನವಾಗಿದ್ದು, ಇದೇ ದಿನ ಶೃಂಗಸಭೆಯಲ್ಲಿ ಪಾಲ್ಗೊಂಡಿರುವುದು ಇನ್ನೊಂದು ವಿಶೇಷ ಸಂಗತಿ.

    ಭಾರತದ ವಿದೇಶಾಂಗ ಸಚಿವ ಜೈಶಂಕರ್​ ಅವರು ಇರಾನ್​, ಅರ್ಮೇನಿಯಾ, ಉಜಬೇಕಿಸ್ತಾನ್​​ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಇಂದು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತನಾಡಲಿದ್ದಾರೆ.

    ಪ್ರಧಾನಿ ಮೋದಿ ಅವರ ಭಾಷಣದ ವಿಡಿಯೋ ಇಲ್ಲಿದೆ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts