More

    ಐದನೆಯ ವಯಸ್ಸಿಗೆ ನೌಕಾಧಿಕಾರಿ ಪ್ರಮಾಣವಚನ ಸ್ವೀಕರಿಸಿದ ಬಾಲಕ… ಇದು ಖುಷಿಯಲ್ಲ… ಕಣ್ಣೀರ ಕಥೆ…

    ಮಿಯಾಮಿ (ಫ್ಲೊರಿಡಾ): ಈ ಪುಟಾಣಿಗೆ ಇನ್ನೇನು ಕೆಲವೇ ದಿನಗಳಲ್ಲಿ ಐದು ವರ್ಷ ಆಗಲಿದೆ. ಇದಾಗಲೇ ಈ ಪೋರ ನೌಕಾದಳದ ಅಧಿಕಾರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾನೆ.

    ಇಷ್ಟು ಚಿಕ್ಕವಯಸ್ಸಿಗೆ ಇಂಥ ಹುದ್ದೆಯೆ? ಅಬ್ಬಾ.. ಎಷ್ಟು ಅದೃಷ್ಟಶಾಲಿ ಈ ಬಾಲಕ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಇದು ನೋವಿನ ಕಥೆ. ಇದಕ್ಕೆ ಕಾರಣ, ಈ ಬಾಲಕ ತನ್ನ ಐದನೇ ಹುಟ್ಟುಹಬ್ಬವನ್ನು ನೋಡಲಿದ್ದಾನೋ ಇಲ್ಲವೋ ಗೊತ್ತಿಲ್ಲ!

    ಫ್ಲೋರಿಡಾದ ಮಿಯಾಮಿ ನಗರದ ಜೆರೇಮಿಯಾ ಎಂಬ ಈ ಬಾಲಕನಿಗೆ ಕ್ಯಾನ್ಸರ್‌ ಇದೆ. ಇವನು ಇನ್ನು ಕೆಲವೇ ದಿನಗಳ ಅತಿಥಿ. ಕೊನೆಯ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಈ ಪುಟಾಣಿ ತನ್ನ ಐದನೇ ವಯಸ್ಸಿನ ಹುಟ್ಟುಹಬ್ಬದ ವೇಳೆಯೂ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಈ ಬಾಲಕನಿಗೆ ತಾನು ದೊಡ್ಡವನಾದ ಮೇಲೆ ಬಹುದೊಡ್ಡ ನೌಕಾದಳದ ದೊಡ್ಡ ಅಧಿಕಾರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದಾನೆ. ಆದರೆ ಸಾವು ಈತನಿಗಾಗಿ ಹೊಂಚುಹಾಕಿ ಕುಳಿತುಕೊಂಡಿದೆ.

    ಆದರೆ ಇವನ ಆಸೆಯನ್ನು ಸಾಯುವ ಮೊದಲು ಈಡೇರಿಸುವ ಆಸೆ ಈತನ ಪಾಲಕರದ್ದು. ಆದ್ದರಿಂದ ನೌಕಾದಳದ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದರು. ಬಾಲಕನನ್ನು ಕಂಡು ಮರುಗಿದ ಅಧಿಕಾರಿಗಳು ಆತನ ಆಸೆಯನ್ನು ಈಡೇರಿಸಿದ್ದಾರೆ.

    ನೌಕಾದಳದ ನೀಲಿ ಬಣ್ಣದ ಸಮವಸ್ತ್ರವನ್ನು ಬಾಲಕನಿಗೆ ನೀಡಿ, ಪೊಲೀಸ್‌ ಅಧಿಕಾರಿಯಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ತನ್ನ ಸಾವಿನ ಅರಿವಿಲ್ಲದ ಈ ಬಾಲಕ ಹಾಗೂ ಕೆಲವೇ ದಿನಗಳ ಅತಿಥಿಯಾಗಿರುವ ತಮ್ಮ ಮುಂದು ಕಂದನ ನೋಡಿ ಕುಟುಂಬಸ್ಥರಿಗೆ ಆಗಿರುವ ಖುಷಿ ಅಷ್ಟಿಷ್ಟಲ್ಲ.

    ಈ ಫೋಟೋವನ್ನು ಅಧಿಕಾರಿಗಳು ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು ಪೋಸ್ಟ್ ಸಖತ್​ ವೈರಲ್​ ಆಗಿದೆ.

    ಆಡುವ ಕೈಯಲ್ಲಿ ಪ್ಯಾಡು! ಚಿಕ್ಕ ವಯಸ್ಸಿನಲ್ಲೇ ದೊಡ್ಡವರಾಗ್ತಿರೋ ಮಕ್ಕಳ ಪಾಡು…

    ನೀವೂ ಈ ಏಳು ಬ್ಯಾಂಕ್‌ಗಳ ಗ್ರಾಹಕರೆ? ಏಪ್ರಿಲ್‌ 1ರಿಂದ ನಿಮ್ಮ ಚೆಕ್‌ಬುಕ್‌, ಪಾಸ್‌ಬುಕ್‌ ಆಗಿಲಿವೆ ಅಮಾನ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts