More

    ಬಾಲಿವುಡ್​ ಮುಂಬೈನಿಂದ ಯುಪಿಗೆ ಶಿಫ್ಟ್​ ಆಗಲಿದೆ ಎಂದ ಕಾಂಗ್ರೆಸ್​ ವಕ್ತಾರ

    ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈಗೆ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸಚಿನ್ ಸಾವಂತ್, ಈ ಭೇಟಿಯು ಬಾಲಿವುಡ್ ಅನ್ನು ಮುಂಬೈಯಿಂದ ಉತ್ತರಪ್ರದೇಶಕ್ಕೆ ಶಿಫ್ಟ್​ ಆಗೋ ಛಾನ್ಸ್​ ಇದೆ ಎಂದು ಆರೋಪಿಸಿದ್ದಾರೆ.

    ಈ ಭೇಟಿಯನ್ನು ನೋಡಿದರೆ ಬಾಲಿವುಡ್​ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಬಿಜೆಪಿ ಪಿತೂರಿ ನಡೆಸಿದಂತಿದೆ. ಒಂದು ವೇಳೆ ಹೀಗಾದರೆ ಕೈಗಾರಿಕೋದ್ಯಮಿಗಳು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಲಿದ್ದು, ಅವರು ತಮ್ಮ ನೆಲೆಯನ್ನು ಉತ್ತರ ಪ್ರದೇಶದಲ್ಲಿ ಕಂಡುಕೊಳ್ಳಬೇಕಾಗಿ ಬರಬಹುದು ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಯಿಂದ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು ಗುಜರಾತ್‌ಗೆ ಸ್ಥಳಾಂತರಿಸಿದ್ದಾರೆ. ಈಗ ಯೋಗಿ ಆದಿತ್ಯನಾಥ ಅವರು ಮುಂಬೈಗೆ ಭೇಟಿ ಕೊಟ್ಟು ಬಾಲಿವುಡ್ ಅನ್ನು ಮುಂಬೈಯಿಂದ ದೂರವಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿನ್​ ಹೇಳಿದ್ದಾರೆ.

    ಇದನ್ನೂ ಓದಿ: ಸಿಪಿವೈ ಸಚಿವರಾಗೋದು ಗ್ಯಾರೆಂಟಿ- ಸುಳಿವು ನೀಡಿದ್ರು ಬಿಎಸ್​ವೈ

    ಉತ್ತರ ಪ್ರದೇಶದಲ್ಲಿ ಹೂಡಿಕೆಗಾಗಿ ಯೋಗಿಜಿ ಮುಂಬೈನಲ್ಲಿ ಕೈಗಾರಿಕೋದ್ಯಮಿಗಳು ಮತ್ತು ನಿರ್ಮಾಪಕರನ್ನು ಭೇಟಿಯಾಗುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಯಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಬಾಲಿವುಡ್‌ನಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ ಸಹಾಯದಿಂದ ಮಹಾರಾಷ್ಟ್ರವನ್ನು ಕೆಣಕಲು ಮುಖ್ಯಮಂತ್ರಿ ಯೋಗಿಯವರು ಮುಂಚೂಣಿಯಲ್ಲಿದ್ದಾರೆ.

    ಇದು ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನ ಮಹತ್ವವನ್ನು ಕಡಿಮೆ ಮಾಡುವ ವ್ಯವಸ್ಥಿತ ಪ್ರಯತ್ನವಾಗಿದೆ. ಈ ಪಿತೂರಿಯಿಂದ ಬಾಲಿವುಡ್ ರಕ್ಷಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಚಿನ್​ ಹೇಳಿದ್ದಾರೆ.

    ಇತರ ರಾಜ್ಯಗಳನ್ನು ಅಸ್ಥಿರಗೊಳಿಸುವ ಸಂಚು ರೂಪಿಸುವ ಬದಲು ಉತ್ತರಪ್ರದೇಶದ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಪರಿಸರ ಸಂರಕ್ಷಣೆಗಾಗಿ ಹೂಡಿಕೆ ಮಾಡಲು ಪ್ರಯತ್ನಿಸಬೇಕು ಎಂದು ಸಾವಂತ್ ಹೇಳಿದ್ದಾರೆ.

    ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

    ಬಿಜೆಪಿ ನಾಯಕರಿಗೆ ವಂಚಿಸಲು ಯತ್ನಿಸಿ ಸಿಕ್ಕಿಬಿದ್ದ ಅಮಿತ್​ ಷಾ ‘ಸೋದರಳಿಯ’

    ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ- ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts