More

    ಹುಟ್ಟುಹಬ್ಬದ ಪಾರ್ಟಿಗೆ ಸಿಂಹ ತಂದ ಬರ್ತ್‌ಡೇ ಗರ್ಲ್‌: ವಿಡಿಯೋ ವೈರಲ್‌- ನೆಟ್ಟಿಗರು ಗರಂ

    ಲಾಹೋರ್: ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಬೇಕು ಎನ್ನುವುದು ಕೆಲವರು ಕನಸು. ಆದರೆ ಇಲ್ಲೊಬ್ಬ ಯುವತಿ ತನ್ನ ಹುಟ್ಟುಹಬ್ಬಕ್ಕೆ ಸಿಂಹವನ್ನು ಕರೆತಂದಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
    ಪಾಕಿಸ್ತಾನದ ಯುವತಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದು, ಇದಕ್ಕೆ ಮೆಚ್ಚುಗೆ ಬದಲಾಗಿ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಹೀಗೆ ವನ್ಯಮೃಗವನ್ನು ಕಟ್ಟಿಹಾಕಿ ಹಿಂಸೆ ನೀಡುತ್ತಿರುವುದು ತಪ್ಪು ಎಂದು ಹೇಳಲಾಗುತ್ತಿದೆ.

    ಲಾಹೋರ್‌ನ ಸುಸಾನ್ ಖಾನ್‌ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದಳು. ಈ ವೇಳೆ ಸಿಂಹವೊಂದನ್ನು ಕಬ್ಬಿಣ ಚೈನ್ ಮೂಲಕ ಬಂಧಿಸಿಟ್ಟಿದ್ದಾಳೆ. ಅದರ ಸುತ್ತಲೂ ಜನ ಸಾಂಗ್ ಪ್ಲೇ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾರೆ. ಇದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಈ ವೀಡಿಯೋವನ್ನು ಪ್ರಾಜೆಕ್ಟ್ ಸೇವ್ ಅನಿಮಲ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸಿಂಹವನ್ನು ಸುಸಾನ್ ಖಾನ್ ತಮ್ಮ ಮನೆಯಲ್ಲಿಯೇ ಸಾಕಿದ್ದಾಳೆ ಎಂದು ವರದಿಯಾಗಿದೆ. ನಿಮ್ಮ ಪ್ರತಿಷ್ಠೆಗಾಗಿ ಪ್ರಾಣಿಗಳನ್ನು ಸಾಕಿ. ಜನಸಂದಣಿಯ ಗದ್ದಲದ ನಡುವೆ ಅವುಗಳಿಗೆ ಹಿಂಸೆಯಾಗುತ್ತದೆ ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿದೆ ನೋಡಿ ವಿಡಿಯೋ:

    ಹೆಚ್ಚು ಮದುವೆಯಾಗಲು ಮಹಿಳೆಗೂ ನೀಡಲಾಗ್ತಿದೆ ಸ್ವಾತಂತ್ರ್ಯ! ಹಿರಿಹಿರಿ ಹಿಗ್ಗಿದ್ದ ಗಂಡಂದಿರ ಸ್ಥಿತಿಯೀಗ ಚಿಂತಾಜನಕ!

    ಬಾಣಂತನದ ವೇಳೆಯ ಬಟ್ಟೆ ಹರಾಜಿಗಿಟ್ಟ ಅನುಷ್ಕಾ ಶರ್ಮಾ: ಎರಡೂವರೆ ಲಕ್ಷ ಲೀ. ನೀರು ಉಳಿತಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts