More

    ಮತ್ತೆ ಹಕ್ಕಿ ಜ್ವರದ ಭೀತಿ! ಏಕಾಏಕಿ ನೂರಾರು ಕೋಳಿಗಳ ಸಾವು: 25 ಸಾವಿರ ಪಕ್ಷಿಗಳನ್ನು ಕೊಲ್ಲಲು ಆದೇಶ

    ಥಾಣೆ (ಮಹಾರಾಷ್ಟ್ರ): ಕಳೆದ ವರ್ಷ ಹಕ್ಕಿ ಜ್ವರ ಭಾರಿ ಸುದ್ದಿ ಮಾಡಿತ್ತು. ಕೋಳಿ ಫಾರ್ಮ್‌ಗಳಲ್ಲಿ ಏಕಾಏಕಿಯಾಗಿ ಸಹಸ್ರಾರು ಕೋಳಿಗಳು ಮೃತಪಟ್ಟ ಬೆನ್ನಲ್ಲೇ ಹಕ್ಕಿ ಜ್ವರದ ಭೀತಿ ಶುರುವಾಗಿ ಇರುವ ಕೋಳಿಗಳನ್ನು ಸುಟ್ಟುಹಾಕಲಾಗಿತ್ತು. ಇದೀಗ ಮತ್ತದೇ ಭೀತಿ ಎದುರಾಗಿದೆ.

    ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೋಳಿಗಳು ಫಾರ್ಮ್‌ನಲ್ಲಿ ಮೃತಪಟ್ಟಿವೆ. ಅವುಗಳ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ 25 ಸಾವಿರಕ್ಕೂ ಅಧಿಕ ಕೋಳಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್ ಜೆ.ನಾರ್ವೆಕರ್ ಹೇಳಿದ್ದಾರೆ.

    ಥಾಣೆಯ ಶಹಾಪುರ ತಾಲೂಕಿನ ವೆಹ್ಲೊಲಿ ಗ್ರಾಮ ಪೌಲ್ಟ್ರಿ ಫಾರ್ಮ್​ನಲ್ಲಿ ಕೋಳಿಗಳು ಏಕಾಏಕಿ ಮೃತಪಟ್ಟಿವೆ. ಆದ್ದರಿಂದ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್​ ಸುತ್ತಲಿನ ಪ್ರದೇಶಗಳ ಪೌಲ್ಟ್ರಿಫಾರ್ಮ್​​ಗಳಲ್ಲಿರುವ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಶುಸಂಗೋಪನಾ ಇಲಾಖೆಗೆ ಸೂಚಿಸಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಏವಿಯನ್ಸ್ ಇನ್​ಫ್ಲುಯೆಂಜಾ ಅಥವಾ ಬರ್ಡ್​ಫ್ಲೂ ಎಂದು ಕರೆಯಲ್ಪಡುವ ಹಕ್ಕಿಜ್ವರ ಹರಡದಂತೆ ತಡೆಯಲು ಪುಣೆ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.

    ‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts