More

    ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿ ಶುರು- ಸರ್ಕಾರದ ಆದೇಶ

    ಬೆಂಗಳೂರು : ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಕಚೇರಿ, ಸಂಘ-ಸಂಸ್ಥೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಕರೊನಾ ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿ ಇರುವ ಕಾರಣದಿಂದ ವಿನಾಯಿತಿ ನೀಡಲಾಗಿದೆ.

    ಆದರೆ ಇದೀಗ ಕೆಲವು ಕಡೆಗಳಲ್ಲಿ ಈ ವಿನಾಯಿತಿಯನ್ನು ಹಿಂದಕ್ಕೆ ಪಡೆಯಲಾಗಿದ್ದು, ಬಯೋಮೆಟ್ರಿಕ್ ಹಾಜರಾತಿ ಪುನಃ ಜಾರಿಗೆ ಬಂದಿದೆ. ಇದೀಗ ರಾಜ್ಯದ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಪುನರಾರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ.

    ಈ ಕುರಿತಂತೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಡಳಿತ ಸುಧಾರಣೆ-ತಪಾಸಣೆ) ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಸಿ.ಹರ್ಷರಾಣಿ ಸುತ್ತೋಲೆ ಹೊರಡಿಸಿದ್ದಾರೆ.

    ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿ ಶುರು- ಸರ್ಕಾರದ ಆದೇಶ

    ಸುತ್ತೋಲೆಯಲ್ಲಿ ಹೀಗಿದೆ:
    ರಾಜ್ಯದ ಕೆಲವೊಂದು ಕಡೆ ಕರೊನಾ ವೈರಾಣು ಕಂಡು ಬಂದ ಹಿನ್ನಲೆಯಲ್ಲಿ ಕಳೆದ ಏಪ್ರಿಲ್​ 27ರಂದು ಹೊರಡಿಸಿದ್ದ ಆದೇಶದಲ್ಲಿ ಸಚಿವಾಲಯ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಬಯೋಮೆಟ್ರಿಕ್ ಹಾಜರಾತಿ ನಮೂದಿಸುವಲ್ಲಿ ವಿನಾಯಿತಿ ನೀಡಲಾಗಿತ್ತು.

    ಪ್ರಸ್ತುತ ಕೋವಿಡ್-19 ಪ್ರಕರಣಗಳು ಮತ್ತು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬೆಂಗಳೂರು ಮತ್ತು ಬೆಂಗಳೂರಿನ ಹೊರಗೆ ಕಡಿಮೆಯಾಗಿರುವುದರಿಂದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನರಾಂಭಿಸಲಾಗಿದೆ.

    ಬಯೋಮೆಟ್ರಿಕ್​ ಎಲ್ಲಾ ಯಂತ್ರಗಳ ಪಕ್ಕದಲ್ಲಿ ಸೂಕ್ತ ಸ್ಯಾನಿಟೈಸರ್​ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಇಂದಿನಿಂದ ಮತ್ತೆ ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿಯನ್ನು ಪುನರಾರಂಭಿಸಲಾಗಿದೆ.

    ರಾಜ್ಯಕ್ಕೆ ಶೀಘ್ರವೇ ಇನ್ನೊಂದು ಜಿಲ್ಲೆ- ಸಂಪುಟದಲ್ಲಿ ಸಿಕ್ತು ತಾತ್ವಿಕ ಅನುಮೋದನೆ

    ಸೋನಿಯಾ- ಮನ್​ಮೋಹನ್​ ಸಿಂಗ್​ ಸಿಕ್ರೇಟ್​ ಬಿಚ್ಚಿಟ್ಟ ಒಬಾಮಾ: ಭಾರತದಲ್ಲಿ ಸಂಚಲನ!

    ತಡವಾಗಿ ಬಂದದ್ದೂ ಅಲ್ಲದೇ ವಿಮಾನಯಾನ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಸಬ್​ ಇನ್ಸ್​ಪೆಕ್ಟರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts