ಸೆಲ್ಫಿ ಹುಚ್ಚಿಗೆ ಬೈಕ್‌ ಸ್ಟಂಟ್‌- ಸಾವು ಬದುಕಿನ ನಡುವೆ ವಿದ್ಯಾರ್ಥಿ: ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

blank

ಕೊಲ್ಲಂ: ಬೈಕ್​​ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರದಲ್ಲಿ ನಡೆದಿದೆ.

ವಿದ್ಯಾರ್ಥಿಗಳ ಗುಂಪೊಂದು ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಬೈಕ್​​ ಸ್ಟಂಟ್​ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಬಿಎ ವಿದ್ಯಾರ್ಥಿ ಆಶ್ವಂತ್​ ಕೃಷ್ಣ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದೇ ವೇಳೆ ಎದುರುಗಡೆಯಿಂದ ಬುಲೆಟ್‌ ಬರುತ್ತಿತ್ತು. ಅದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆಯಿಂದ ಬೈಕ್​ ಸಂಪೂರ್ಣ ಜಖಂಗೊಂಡಿದೆ. ಆಶ್ವಂತ್​ ಹಿಂದಿನಿಂದ ಬರುತ್ತಿದ್ದ ಕೆಲ ವಿದ್ಯಾರ್ಥಿಗಳ ಬೈಕ್ ಸಹ ಘಟನೆಯಲ್ಲಿ ಜಖಂಗೊಂಡಿವೆ. ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕ್​ ಸ್ಟಂಟ್​ ವೇಳೆ 100 ಕಿಲೋಮೀಟರ್​ಗೂ ವೇಗವಾಗಿ ಬೈಕ್​ ಚಲಿಸುತ್ತಿತ್ತು ಎನ್ನಲಾಗಿದೆ.

ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಲು ಕಾರಣನಾಗಿದ್ದ ರಾಜಕೀಯ ಮುಖಂಡ ಅರೆಸ್ಟ್‌!

ಪ್ರಿಯಕರನ ಮೇಲೆ ಕೋಪಗೊಂಡು ಆತನಿಗೆ ಕಳುಹಿಸಿದಳೊಂದು ಮೆಸೇಜ್‌- ಮರಣದಂಡನೆ ವಿಧಿಸಿದ ಕೋರ್ಟ್‌!

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…