More

    ಬಣ್ಣಬಣ್ಣಗಳಿಂದ ಕಣ್ಮನ ಸೆಳೆಯುತಿದೆ ತುಂಗಭದ್ರಾ ಜಲಾಶಯ- ವಿಡಿಯೋ ನೋಡಿ…

    ಬಳ್ಳಾರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ.

    ಈ ಹಿನ್ನೆಲೆಯಲ್ಲಿ. 17,272 ಕ್ಯೂಸೆಕ್ಸ್ ನೀರನ್ನು ತುಂಗಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ. 10 ಗೇಟುಗಳ ಮೂಲಕ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಗೇಟುಗಳನ್ನು ಒಂದು ಅಡಿ ಎತ್ತುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಲಾಗಿದೆ.

    ಬಣ್ಣಬಣ್ಣಗಳಿಂದ ಕಣ್ಮನ ಸೆಳೆಯುತಿದೆ ತುಂಗಭದ್ರಾ ಜಲಾಶಯ

    17,272 ಕ್ಯೂಸೆಕ್ಸ್ ನೀರನ್ನು ತುಂಗಭದ್ರಾ ನದಿಗೆ ಜಲಾಶಯದೊ.ದ ಬಿಡುಗಡೆ ಮಾಡಲಾಗಿದೆ. 10 ಗೇಟುಗಳ ಮೂಲಕ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗೇಟುಗಳಿಗೆ ಬಣ್ಣಬಣ್ಣದ ದೀಪಗಳಿಂದ ಸಿಂಗಾರ ಮಾಡಲಾಗಿದ್ದು, ಇಡೀ ಜಲಾಶಯ ಕಲರ್‌ಫುಲ್‌ ಆಗಿ ಕಂಗೊಳಿಸುತ್ತಿದೆ.

    Posted by Vijayavani on Sunday, August 16, 2020

    ಈ ಬೆನ್ನಲ್ಲೇ ಜಲಾಶಯದ ನೀರು ಗೇಟಿನ ಮೂಲಕ ನದಿಯನ್ನು ತಲುಪುವುದು ನೋಡುವುದೇ ಅಂದ. ಏಕೆಂದರೆ ಗೇಟುಗಳಿಗೆ ಬಣ್ಣಬಣ್ಣದ ದೀಪಗಳಿಂದ ಸಿಂಗಾರ ಮಾಡಲಾಗಿದ್ದು, ಇಡೀ ಜಲಾಶಯ ಕಲರ್‌ಫುಲ್‌ ಆಗಿ ಕಂಗೊಳಿಸುತ್ತಿದೆ.

    ಒಂದೊಂದು ಗೇಟ್‌ಗಳಿಗೆ ಒಂದೊಂದು ಬಣ್ಣದ ದೀಪದ ಅಲಂಕಾರ ಮಾಡಲಾಗಿದ್ದು, ಎಲ್ಲಾ ಗೇಟುಗಳಿಂದ ಬೇರೆ ಬೇರೆ ಬಣ್ಣಗಳ ದೀಪಗಳು ಕಂಗೊಳಿಸುತ್ತಿವೆ. ಜತೆಗೆ, ಬಣ್ಣ ಬಣ್ಣದ ಹಾಲಿನ ನೊರೆ ಹಾಗೆ ಗೇಟ್‌ಗಳ ಮೂಲಕ ಹೊರಬರುವಂತೆ ಭಾಸವಾಗುತ್ತಿದೆ.

    80 ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಬಿಟ್ಟರೆ ಮಾತ್ರ ಪ್ರವಾಹ ಎದುರಾಗಲಿದೆ. ಆದರೆ ಸದ್ಯ ಪ್ರವಾಹದ ಭೀತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹಂದಿಗಾಗಿ ಜಗಳ: ಕಲ್ಲು ಹಾಕಿ ಮೂವರ ಭೀಕರ ಕೊಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts