More

    ಫ್ರಿಜ್‌ನಲ್ಲಿ ಆಹಾರದ ಪಕ್ಕ ಲಸಿಕೆ! ಕಂದಮ್ಮಗಳ ಜೀವದ ಜತೆ ಆಟವಾಡಿದ್ರಾ ಬೆಳಗಾವಿ ಆಸ್ಪತ್ರೆ ಸಿಬ್ಬಂದಿ?

    ಬೆಳಗಾವಿ: ಮೈಲಿಬೇನೆ ನಿಯಂತ್ರಣಕ್ಕಾಗಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡು ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿರುವ ಘಟನೆಗೆ ನರ್ಸ್‌ನ ಬೇಜವಾಬ್ದಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

    ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಉಮೇಶ ಕುರಗುಂದಿ (14 ತಿಂಗಳು) ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ (15 ತಿಂಗಳು) ಜೀವ ಕಳೆದುಕೊಂಡಿದ್ದಾರೆ. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಒಟ್ಟು 17 ಮಕ್ಕಳಿಗೆ ಜ. 13ರಂದು ಮೈಲಿಬೇನೆ ನಿಯಂತ್ರಣದ ರುಬೆಲ್ಲಾ ಚುಚ್ಚುಮದ್ದು ನೀಡಿದ್ದರು. ಆ ಬಳಿಕ ನಾಲ್ಕು ಮಕ್ಕಳು ಅಸ್ವಸ್ಥಗೊಂಡಿದ್ದವು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಒಂದು ಮಗು ಮೃತಪಟ್ಟಿತ್ತು. ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಭಾನುವಾರ 2 ಮಕ್ಕಳು ಮೃತಪಟ್ಟಿದ್ದು, ಇನ್ನೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

    ಈ ಬಗ್ಗೆ ‍ಪ್ರಾಥಮಿಕ ತನಿಖೆ ಮಾಡಿದಾಗ ನರ್ಸ್‌, ಆರೋಗ್ಯ ಕಾರ್ಯಕರ್ತೆ ಸಲ್ಮಾ ಮಹಾತ್, ಔಷಧಿ ತಂತ್ರಜ್ಞ ಅಧಿಕಾರಿ ಜಯರಾಜ್ ಕುಂಬಾರ್ ಬೇಜಬ್ದಾರಿಯೇ ಇದಕ್ಕೆ ಕಾರಣ ಎನ್ನುವುದು ತಿಳಿದುಬಂದಿದೆ. ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿಯ ಕುರಿತು ತನಿಖಾಧಿಕಾರಿ ಈಶ್ವರ್ ಗಡಾದ್ ಹೇಳಿಕೆ ನೀಡಿದ್ದು, ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಮೃತಪಟ್ಟಿರುವುದಾಗಿ ವಿವರಿಸಿದ್ದಾರೆ. ನರ್ಸ್, ಫಾರ್ಮಸಿಸ್ಟ್ ಬೇಜವಾಬ್ದಾರಿಯಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.


    ಲಸಿಕೆ ಪಡೆಯಲು ನರ್ಸ್‌ ಆರೋಗ್ಯ ಕಾರ್ಯಕರ್ತೆಯನ್ನು ಕಳುಹಿಸಿದ್ದಳು. ಆರೋಗ್ಯ ಕಾರ್ಯಕರ್ತೆ ಫ್ರಿಡ್ಜ್​ನಲ್ಲಿ ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ವ್ಯಾಕ್ಸಿನ್ ಇಟ್ಟಿದ್ದಳು. ನಂತರ ಎರಡು ದಿನಗಳಲ್ಲಿ 23 ಜನ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಅದೃಷ್ಟವಶಾತ್ 20 ಮಕ್ಕಳು ಯಾವುದೇ ಗಂಭೀರ ಸಮಸ್ಯೆ ಎದುರಿಸಿಲ್ಲ. ಆದರೆ, ಸಿಬ್ಬಂದಿ ಬೇಜವಾಬ್ದಾರಿಗೆ ಮೂರು ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

    ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದೇನೆ. ಎಎನ್‌ಎಂ, ಫಾರ್ಮಸಿಸ್ಟ್‌ ಅಮಾನತು ಮಾಡಲು ಸೂಚಿಸಿದ್ದೇನೆ. ತನಿಖೆಗಾಗಿ ನೋಡಲ್ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

    ಭಾರತಕ್ಕಿಂತ ನಾವೇ ಮೇಲು ಎಂದಿದ್ದ ಪಾಕ್‌ ಪ್ರಧಾನಿಗೆ ಭಾರಿ ಮುಖಭಂಗ! ‘ಅಂತಾರಾಷ್ಟ್ರೀಯ ಭಿಕ್ಷುಕ’ ಪಟ್ಟಿಗೆ ಸೇರಿದ ಇಮ್ರಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts