More

    ‘ರಾಜ್ಯಪಾಲರ ಆಡಳಿತ ಎಲ್ಲಾ ಕಡೆ ಬರುತ್ತಾ? ಮೊದ್ಲು ಮೊಸರಲ್ಲಿ ಕಲ್ಲು ಹುಡುಕೋದನ್ನು ಬಿಡಿ’

    ಬೆಂಗಳೂರು: ತಪ್ಪುಗಳನ್ನು ಕಂಡು ಹಿಡಿಯುವುದಷ್ಟೇ ಪ್ರತಿಪಕ್ಷಗಳ ಕೆಲಸವಾಗಬಾರದು. ಕರೊನಾ ಸಂಕಷ್ಟ ಕಾಲದಲ್ಲಿ ಇಡೀ ವ್ಯವಸ್ಥೆ ಒಂದಾಗಿ ಕೆಲಸ ಮಾಡುವ ಅಗತ್ಯವಿದೆ. ಹಾಗಾದಾಗ ಮಾತ್ರ ಸೋಂಕು ಮಾರಿ ವಿರುದ್ಧ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಕಿವಿಹಿಂಡಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ‌.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸರ್ವಪಕ್ಷಗಳ ಸಭೆ ಕರೆದಿದ್ದಕ್ಕೆ ರಾಜ್ಯಪಾಲರ ಆಡಳಿತ ಬಂದಿದೆ ಎಂದು ಭಾಸವಾಗುತ್ತಿದೆ. ಕರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗಳಿಗೆ ಪ್ರತ್ಯುತ್ತರಿಸಿದರು.

    ಕರೊನಾ 2ನೇ ಅಲೆ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಸರ್ವಪಕ್ಷಗಳ ಜತೆಗೆ ಚರ್ಚಿಸಿ, ಸಂಯೋಜನೆ ಮಾಡಬೇಕು ಎಂದು ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ.

    ಅದರಂತೆಯೇ ರಾಜ್ಯಪಾಲ ವಜುಭಾಯಿ ವಾಲಾ ಸಭೆ ಏರ್ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಪಾಲರು ಸಭೆ ಆಯೋಜಿಸುವರು. ಹಾಗಂತ ಆ ರಾಜ್ಯಗಳಲ್ಲೂ ರಾಜ್ಯಪಾಲರ ಆಡಳಿತ ಬಂದಿದೆ ಎಂದು ಹೇಳಲಾಗುತ್ತಾ ಎಂದು ಪ್ರಶ್ನಿಸಿದ್ರು.

    ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹೀಗೆ ಚುನಾಯಿತ ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡಬಾರದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಸರಿಯಲ್ಲವೆಂದು ಬೊಮ್ಮಾಯಿ‌ ತಿವಿದರು.

    ಕರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಬೆಂಗಳೂರಿನಲ್ಲಿ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿರುವುದು ನಿಜ. ಇದನ್ನೇ ವೈಫಲ್ಯವೆಂದು ಸಿದ್ದರಾಮಯ್ಯ ಟೀಕಿಸುವುದರಲ್ಲಿ ಅರ್ಥವಿಲ್ಲ. ಹಾಸಿಗೆಗಳು ಆಕ್ಸಿಜನ್ ಕೊರತೆ ನೀಗಿಸಲು ಅಗತ್ಯಕ್ರಮವಹಿಸಲಾಗಿದೆ. ರಾಜ್ಯದ ಇತರ ಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸರ್ಕಾರ‌ ಶ್ರಮಿಸುತ್ತಿದೆ ಎಂದರು.

    ಕಷ್ಟ ಕಾಲದಲ್ಲಿ ತಪ್ಪು ಹುಡುಕುವುದಷ್ಟೇ ಪ್ರತಿಪಕ್ಷಗಳ ಜವಾಬ್ದಾರಿಯಲ್ಲ. ಒಂದಾಗಿ‌ ಕೆಲಸ ಮಾಡಬೇಕಾದ ಅಗತ್ಯವಿದೆ. ರಾಜ್ಯಪಾಲರ ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ ಮುಂದೇನು ಮಾಡಬೇಕೆಂದು ಚರ್ಚಿಸಿ ಸರ್ಕಾರ ತೀರ್ಮಾನಿಸಲಿದೆ ಎಂದು ಬೊಮ್ಮಾಯಿ‌ ಹೇಳಿದರು.

    ತಪ್ಪನ್ನು ಮುಚ್ಚಿಹಾಕಲು ಬದುಕಿದ್ದ ಸೋಂಕಿತೆಯನ್ನು ಸಾಯಿಸಿದರು? ಬೆಂಗಳೂರು ಆಸ್ಪತ್ರೆ ವಿರುದ್ಧ ಭಾರಿ ಆರೋಪ!

    ಚಾಲಕನಿಲ್ಲದ ಕಾರಿನಲ್ಲಿ ಕೂತು ಪ್ರಯಾಣಿಸಿದ ಇಬ್ಬರು ಸಜೀವ ದಹನ!

    ರಾಕ್ಷಸರಾದ ಗಂಡ- ಅತ್ತೆಯ ಚಿತ್ರಹಿಂಸೆ ಎಳೆಎಳೆಯಾಗಿ ಬಿಚ್ಚಿಟ್ಟು ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ…!

    ಅಯ್ಯೋ ಶಿವನೆ.. ಲಾಕ್‌ಡೌನ್‌ ಅಂತೆ… ಮುಗೀತು ನಮ್‌ ಕಥೆ ಎಂದು ಎದ್ದು ಬಿದ್ದು ಓಡೋಡಿ ಬಂದರು ಇಲ್ಲಿಗೆ…. !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts