More

    ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ

    ಬೆಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂದರ್ಯ ಸ್ಕೂಲ್​ನಲ್ಲಿ ಓದುತ್ತಿದ್ದ 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕೊನೆಗೂ ಪತ್ತೆಯಾಗಿದ್ದಾರೆ.

    ಕಿರಣ್​, ಪರೀಕ್ಷಿತ್, ನಂದನ್ ಎಂಬ 15 ವರ್ಷದ ವಿದ್ಯಾರ್ಥಿಗಳು ಪತ್ರ ಬರೆದಿಟ್ಟು ಮನೆ ತೊರೆದಿದ್ದರು. ಓದಿನಲ್ಲಿ ಆಸಕ್ತಿ ಇಲ್ಲ. ಹಾಗಾಗಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತೇವೆ ಎಂದು ಪತ್ರದಲ್ಲಿ ಬರೆದು ಗುರಿ ಸಾಧನೆ ಮಾಡುತ್ತೇವೆ ಎಂದು ಹೊರಟಿದ್ದರು. ಇವರ ಹುಡುಕಾಟ ನಡೆಸಿದ್ದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ.

    ಸಿಕ್ಕಿದ್ದೇ ರೋಚಕ!
    ಈ ಮೂವರು ಮಕ್ಕಳ ಅದೃಷ್ಟವೋ ಅಥವಾ ಹೆತ್ತವರ ಪುಣ್ಯವೋ ತಿಳಿಯದು. ಒಟ್ಟಿನಲ್ಲಿ ಈ ಮೂವರು ಮಕ್ಕಳು ಚಿಂದಿ ಆಯುವವನ ಕಣ್ಣಿಗೆ ಬಿದ್ದಿದ್ದರಿಂದ ಮುಂದೆ ಆಗಬಹುದಾದ ಅನಾಹುತ ತಪ್ಪಿದ್ದು, ಪಾಲಕರ ಮಡಿಲನ್ನು ಈ ಮಕ್ಕಳು ಸೇರಿದ್ದಾರೆ.

    ಆಗಿದ್ದೇನೆಂದರೆ, ಓದಲು ಇಷ್ಟವಿಲ್ಲ, ಕಬಡ್ಡಿಯಲ್ಲಿ ಸಾಧನೆ ಮಾಡುವುದಾಗಿ ಪತ್ರ ಬರೆದಿಟ್ಟು ಈ ಮೂವರೂ ಮಕ್ಕಳು ಶನಿವಾರ ಬೆಳಗ್ಗೆ 5.30ರ ಸುಮಾರಿಗೆ ಮನೆಯಿಂದ ಹೋಗಿದ್ದರು. ಪ್ರತಿಯೊಬ್ಬರೂ ಒಂದೂವರೆ ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದರು. ಮಂಗಳೂರಿನಲ್ಲಿ ‘ಭವಿಷ್ಯ’ ಕಂಡುಕೊಳ್ಳೋಣ ಎಂದು ಮಾತನಾಡಿಕೊಂಡಿದ್ದ ಈ ಮಕ್ಕಳು ಕೊನೆಗೆ ಮೈಸೂರಿಗೆ ಹೋಗಿದ್ದ ದಸರಾ ನೋಡಿಕೊಂಡು ಬೆಂಗಳೂರಿಗೆ ವಾಪಸಾಗಿದ್ದಾರೆ. ಮೈಸೂರಿನಲ್ಲಿ ಬಸ್‌ ಸ್ಟಾಪ್‌ನಲ್ಲಿ ರಾತ್ರಿ ಕಳೆದಿದ್ದಾರೆ.

    ಬೆಂಗಳೂರಿಗೆ ಬಂದಾಗ ಕೈಯಲ್ಲಿನ ದುಡ್ಡು ಖಾಲಿಯಾಗಿದೆ. ಕೆಲಸ ಹುಡುಕುವ ಸಲುವಾಗಿ ಅಲ್ಲಿಯೇ ಇರುವ ಚಿಂದಿ ಆಯುವವನ ಬಳಿ ಕೆಲಸ ಕೇಳಿದ್ದಾರೆ. ಈ ಮಕ್ಕಳ ವೇಷ ಭೂಷಣ ಹಾಗೂ ಇವರ ಮಾತನ್ನು ಕೇಳಿದ ಆತ, ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಭಾವಿಸಿ ತಕ್ಷಣವೇ ಸಮಯಪ್ರಜ್ಞೆ ಮೆರೆದು ಸಮೀಪದ ಪೊಲೀಸ್‌ ಠಾಣೆಗೆ ಹೋಗಿ ವಿಷಯ ಮುಟ್ಟಿಸಿದ್ದಾನೆ.

    ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅವರಿಂದ ಅಪ್ಪ ಅಮ್ಮನ ಮೊಬೈಲ್‌ ಸಂಖ್ಯೆ ಪಡೆದು ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದಾರೆ. ಯಾರದ್ದೋ ಕಣ್ಣಿಗೆ ಬಿದ್ದು ಇನ್ನೇನೋ ಅನಾಹುತವಾಗುವುದನ್ನು ಚಿಂದಿ ಆಯುವವ ತಪ್ಪಿಸಿದ್ದಾನೆ. ಇದರಿಂದಾಗಿ ಮಕ್ಕಳಿಗೆ ಮತ್ತು ಪಾಲಕರಿಗೆ ಪುನರ್ಜನ್ಮ ಸಿಕ್ಕಂತಾಗಿದೆ.

    ಆದರೆ ಈ ನಡುವೆಯೇ ಮತ್ತೆ ಐವರು ಮಕ್ಕಳು ನಾಪತ್ತೆಯಾಗಿದ್ದು, ಅವರ ಪತ್ತೆಯಿನ್ನೂ ಆಗಿಲ್ಲ. ಸೋಲದೇವನಹಳ್ಳಿ ನಿವಾಸಿಗಳಾದ ರಾಯನ್, ವರ್ಷಿಣಿ, ಭೂಮಿ ಮತ್ತು ಚಿಂತನ್​ ಮನೆಯಿಂದ ಹೋಗಿದ್ದು, ಬೆಂಗಳೂರಿನ ಚಿಕ್ಕಬಾಣವರದ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಆ ನಾಲ್ವರೂ ರೈಲಿನಲ್ಲಿ ಮಂಗಳೂರು ಕಡೆ ಪ್ರಯಾಣಿಸಿರುವುದಾಗಿ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.

    ಹೀಗೆ ಮಕ್ಕಳು ಮನೆಬಿಟ್ಟು ಹೋಗುತ್ತಿರುವುದು ಪಾಲಕರಲ್ಲಿ ಭಾರಿ ಆತಂಕ ಮೂಡಿಸುತ್ತಿದೆ.

    ಏಳನೇ ದಿನವೂ ಪೆಟ್ರೋಲ್‌-ಡೀಸೆಲ್ ಜಿಗಿತ: ಎಲ್ಲೆಲ್ಲಿ ಎಷ್ಟೆಷ್ಟಿವೆ ರೇಟ್‌?

    ನಾನೂ ಗಾಂಜಾ ಸೇವಿಸಿದ್ದೆ, ತಪ್ಪೇನಿದೆ? ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲ ಎಂದ ಸಲ್ಲು ಮಾಜಿ ಲವರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts