More

    ಆ.5ರಂದು ನ್ಯೂಯಾರ್ಕ್‌ನಲ್ಲಿಯೂ ಅಯೋಧ್ಯೆಯ ರಾಮ- ಐತಿಹಾಸಿಕ ಕ್ಷಣಕ್ಕೆ ಅಮೆರಿಕ ಸಾಕ್ಷಿ

    ನ್ಯೂಯಾರ್ಕ್: ಇನ್ನೇನು ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ದಿನಗಣನೆ ಆರಂಭವಾಗಿದೆ. ಇದೀ ದೇಶದ ಜನರು ಈ ದಿನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರೆ, ಅತ್ತ ನ್ಯೂಯಾರ್ಕ್‌ನ ಜನತೆ ಕೂಡ ಈ ದಿನಕ್ಕಾಗಿ ಕಾಯುತ್ತಿದ್ದಾರೆ!

    ಹೌದು. ಭಾರತದ ಅಯೋಧ್ಯೆಯ ರಾಮಮಂದಿರಕ್ಕೂ ನ್ಯೂಯಾರ್ಕ್‌ಕೂ ಏನು ಸಂಬಂಧ ಎನ್ನುತ್ತೀರಾ? ಅಂದು ಅಂದರೆ
    ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಮ ಮಂದಿರ ದೇವಾಲಯದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಟೈಮ್ಸ್ ಸ್ಕ್ವಾರ್ ಸಾಕ್ಷಿಯಾಗಲಿದೆ. ಅಂದು ಅಲ್ಲಿ ಅಯೋಧ್ಯೆಯಲ್ಲಿ ತಲೆಯೆತ್ತಲಿರುವ ರಾಮ ಮಂದಿರದ 3ಡಿ ಚಿತ್ರಗಳು ಅನಾವರಣಗೊಳ್ಳಲಿದೆ. ಜತೆಗೆ, ರಾಮನ ಭಾವಚಿತ್ರಗಳನ್ನು ಅಮೆರಿಕದ ಅಪ್ರತಿಮ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಫಲಕಗಳ ಮೂಲಕ ನೇತುಹಾಕಲು ತಯಾರಿ ನಡೆಸಲಾಗುತ್ತಿದೆ.

    ಆಗಸ್ಟ್ 5ರ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀಮರಾಮ ಚಿತ್ರ ಹಾಗೂ ರಾಮ ಮಂದಿರದ 3D ಮಾದರಿಯನ್ನು ಬೃಹತ್ ಎಲ್‌ಇಡಿ ಪರದೆ ಮೇಲೆ ಬಿತ್ತರಿಸಲಾಗುವುದು ಎಂದು ಅಮೆರಿಕನ್ ಇಂಡಿಯಾ ಸಾವರ್ಜನಿಕ ವ್ಯವಹಾರಗಳ ಸಮಿತಿ ಅಧ್ಯಕ್ಷ ಜಗದೀಶ್ ಸೆವ್ಹಾನಿ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಅಮೆರಿಕದಲ್ಲಿರುವ ಭಾರತೀಯರು ಟೈಮ್ಸ್ ಸ್ಕ್ವಾರ್ ನಲ್ಲಿ ವೀಕ್ಷಿಸಬಹುದು.

    ಇದನ್ನೂ ಓದಿ: 29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!

    ಅಂದು ‘ಜೈ ಶ್ರೀರಾಮ್’ ಎಂಬ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆದ ಪದ, ಶ್ರೀರಾಮನ ಚಿತ್ರ ಮತ್ತು ವಿಡಿಯೊಗಳು, ದೇವಾಲಯದ ವಿನ್ಯಾಸದ ಮತ್ತು ವಾಸ್ತುಶಿಲ್ಪದ 3ಡಿ ಭಾವಚಿತ್ರಗಳು ಮತ್ತು ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಇತರ ಭಾಗಗಳಲ್ಲಿರುವ ಅನಿವಾಸಿ ಭಾರತೀಯರು ಆಗಸ್ಟ್ 5ರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ ಸೆವ್ಹಾನಿ.

    ಅಂದು ಭಾರತೀಯರು ಸೇರಿ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣದ ಅಡಿಪಾಯದ ಸಂಭ್ರಮವನ್ನು ಸಿಹಿತಿಂಡಿ ಹಂಚಿಕೊಂಡು ತಿನ್ನುವ ಮೂಲಕ ಆಚರಿಸಿಕೊಳ್ಳಲಿದ್ದಾರೆ.

    ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts