More

    ಸಚಿವ ಅಮಿತ್​ ಷಾ ಹುಟ್ಟುಹಬ್ಬಕ್ಕೆ ಪ್ರಧಾನಿಯಿಂದ ಹೀಗೊಂದು ಟ್ವೀಟ್​​..

    ನವದೆಹಲಿ: ಇಂದು ಕೇಂದ್ರ ಸಚಿವ ಅಮಿತ್​ ಷಾ ಅವರಿಗೆ 56ನೇ ಹುಟ್ಟುಹಬ್ಬದ ಸಂಭ್ರಮ. ಬಿಜೆಪಿ ಸಂಘಟನೆಯಲ್ಲಿ ಹಾಗೂ ಪಕ್ಷದ ಹಲವಾರು ಮಹತ್ವದ ಕಾರ್ಯಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಷಾ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

    ಭಾರತಕ್ಕೆ ನೀವು ನೀಡಿದ ಸಮರ್ಪಣೆ ಹಾಗೂ ಉತ್ಕೃಷ್ಟತೆಗೆ ನಮ್ಮ ದೇಶ ಸಾಕ್ಷಿಯಾಗಿದೆ. ನಿಮ್ಮ ಪ್ರಯತ್ನದಿಂದ ಪಕ್ಷವು ಸಾಕಷ್ಟು ಬಲಿಷ್ಠವಾಗಿದೆ, ಮಾತ್ರವಲ್ಲದೇ ಪಕ್ಷದ ಏಳಿಗೆಗಾಗಿ ನೀವು ಸಾಕಷ್ಟು ದುಡಿದಿದ್ದು, ನಮ್ಮ ಪಕ್ಷ ಗುರುತಿಸಿಕೊಳ್ಳುವಂತಾಗಲು ನಿಮ್ಮ ಕೊಡುಗೆ ಅಪಾರ. ಭಾರತಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ದೇವರು ನಿಮಗೆ ಸುದೀರ್ಘ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    1964ರಲ್ಲಿ ಮುಂಬೈನಲ್ಲಿ ಜನಿಸಿರುವ ಅಮಿಷ್​​ ಷಾ ಅವರು, ಬಾಲ್ಯದಿಂದಲೇ ಆರ್‍ಎಸ್‍ಎಸ್‍ ಒಡನಾಟಕ್ಕೆ ಬಂದವರು. ಅವರ ಮತ್ತು ನರೇಂದ್ರ ಮೋದಿ ಅವರ ಸಂಬಂಧ ಬಹಳ ಹಿಂದಿನದ್ದು. ಗುಜರಾತ್‍ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಮಿತ್ ಷಾ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಅಮಿತ್ ಷಾ ಅವರು ಗಾಂಧಿ ನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನರೇಂದ್ರ ಮೋದಿ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ನಂತರ ಗೃಹ ಸಚಿವರನ್ನಾಗಿ ಮಾಡಲಾಯಿತು.

    2014ರಲ್ಲಿ ಮೋದಿಯವರು ಪ್ರಧಾನಿಯಾದಾಗ ಷಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅಂದಿನಿಂದಲೂ ಪಕ್ಷದ ಬಲವರ್ಧನೆಗಾಗಿ ಅಮಿತ್​ ಷಾ ಅವರು ಸಾಕಷ್ಟು ದುಡಿಯುತ್ತಲೇ ಬಂದಿದ್ದಾರೆ. ಮಾತ್ರವಲ್ಲದೇ ಆನಂತರವೂ ಬಿಜೆಪಿ ಅನೇಕ ಕಡೆಗಳಲ್ಲಿ ಗೆಲ್ಲುವಲ್ಲಿ ಇವರ ಪಾತ್ರವೂ ಬಹುಮುಖ್ಯವಾಗಿದೆ.
    ಉತ್ತರ, ಪೂರ್ವ ಭಾಗದಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಅಮಿತ್​ ಷಾ ಕೊಡುಗೆ ಇದೆ. 80 ಲೋಕಸಭಾ ಸ್ಥಾನಗಳ ಪೈಕಿ ಎನ್‍ಡಿಎ ಮೈತ್ರಿ ಕೂಟ ಬರೋಬ್ಬರಿ 73 ಸ್ಥಾನಗಳಲ್ಲಿ ಜಯಗಳಿಸುವಲ್ಲಿಯೂ ಇವರ ಪಾತ್ರ ಬಹುಮುಖ್ಯದ್ದು ಎಂದು ಪಕ್ಷದ ಮೂಲಗಳು ಹೇಳುತ್ತವೆ.

    2019ರ ಲೋಕಸಭಾ ಚುನಾವಣೆಯಲ್ಲಿ ಕೂಡ ಖುದ್ದು ಆಸ್ಥೆಯಿಂದ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಬಿಜೆಪಿ 303 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಮೂಲಕ 1971ರ ಬಳಿಕ ಪೂರ್ಣ ಬಹುಮತದೊಂದಿಗೆ ಮೇಲೆದ್ದು ಬಂದ ಪಕ್ಷ ಬಿಜೆಪಿ ಎಂದು ಎನಿಸಿಕೊಂಡಿತು.

    ಮೂರನೆಯ ಪತಿ ಜತೆಯೂ ಬಿರುಕು? ಗಂಡ ಸರಿಯಿಲ್ಲ ಎಂದು ಕಣ್ಣೀರಿಟ್ಟ ಬಿಗ್​ಬಾಸ್​ ಸ್ಪರ್ಧಿ, ನಟಿ

    ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು

    ಅನಂತಪದ್ಮನಾಭನ ಗರ್ಭಗುಡಿಗೆ ಬಂದ ಮೊಸಳೆ: ಇದೊಂದು ಪವಾಡ ಎಂದ ಭಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts