More

    ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌- ಶೇ.20-25ರಷ್ಟು ಹೆಚ್ಚಾಯ್ತು ಕಾಲಿಂಗ್‌, ಡೇಟಾ ದರಗಳು!

    ನವದೆಹಲಿ: ಬಹುದೊಡ್ಡ ಟೆಲಿಕಾಂ ಕಂಪೆನಿಯಾಗಿರುವ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ. ಕಾಲಿಂಗ್‌ ಮತ್ತು ಡೇಟಾ ಟಾಪ್‌ಅಪ್‌ಗಳ ದರಗಳನ್ನು ಶೇ.20ರಿಂದ 25ರಷ್ಟು ಹೆಚ್ಚಿಸಿವೆ. ಇತ್ತೀಚೆಗಷ್ಟೇ ದರವನ್ನು ಹೆಚ್ಚು ಮಾಡಿದ್ದ ಏರ್‌ಟೆಲ್‌ ಈಗ ಮತ್ತಷ್ಟು ದರ ಹೆಚ್ಚಿಸಿದೆ. ಈ ಯೋಜನೆ ಇದೇ 26ರಿಂದ ಜಾರಿಗೆ ಬರಲಿದೆ.

    ಆರಂಭಿಕ ಕರೆಗಳ ಟಾರಿಫ್​ ಯೋಜನೆಯ ದರವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಯೋಜನೆಯು ಶೇ 20 ರಷ್ಟು ಹೆಚ್ಚಾಗಿದೆ.

    ಬೇಸ್ ಪ್ರಿಪೇಯ್ಡ್ ಏರ್‌ಟೆಲ್ ಯೋಜನೆಯು 99 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಸುಂಕ ಹೆಚ್ಚಳ ಮತ್ತು ಅದೇ ಪ್ರಯೋಜನಗಳನ್ನು ಹೊಂದಿರುವ ಮೂಲ ಯೋಜನೆಯು ಪ್ರಸ್ತುತ ರೂ 75 ನಲ್ಲಿ ಲಭ್ಯವಿದೆ. ಕೆಲ ತಿಂಗಳ ಹಿಂದೆ ಈ ದರವು 45 ರೂಪಾಯಿಗಳಷ್ಟಿತ್ತು.

    ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕಂಪೆನಿ, ಭಾರತದಲ್ಲಿ 5ಜಿ ಅನ್ನು ಹೊರತರಲು ಏರ್‌ಟೆಲ್‌ ಬಲ ನೀಡುತ್ತದೆ. ಆದ್ದರಿಂದ ದರ ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಪ್ರಸ್ತುತ 28 ದಿನಗಳ ಬಳಕೆಯ 79 ಯೋಜನೆಯ ಹೊಸ ದರವು ರೂ 99 ಆಗಲಿದೆ ಎಂದಿದೆ.

    ಏರ್‌ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಆದರೆ ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ಮತ್ತು 455 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಡೇಟಾ ಟಾಪ್-ಅಪ್ ಯೋಜನೆಗಳ ದರ ಕೂಡ ಹೆಚ್ಚಾಗಿದೆ. ಈಗಿರುವ ರೂ.48 ದರವನ್ನು ರೂ.58ಕ್ಕೆ ಹೆಚ್ಚಿಸಲಾಗಿದ್ದು, ರೂ.98 ಮತ್ತು ರೂ.251 ರೀಪ್‌ಅಪ್‌ಗಳನ್ನು ಕ್ರಮವಾಗಿ ರೂ.118 ಮತ್ತು ರೂ.301ಕ್ಕೆ ಹೆಚ್ಚಿಸಲಾಗಿದೆ.

    149 ರೂ ದರವೀಗ 179 ರೂ. ಆಗಲಿದೆ. 219 ರೂ. 265 ರೂ. ಆಗಲಿದೆ. 249 ರೂ. ಮತ್ತು ರೂ 298 ಪ್ರಿಪೇಯ್ಡ್ ಯೋಜನೆಗಳು ಈಗ ಕ್ರಮವಾಗಿ 299 ಮತ್ತು 359 ರೂ.ಗೆ ಸಿಗಲಿದೆ.
    56 ದಿನಗಳ ಮಾನ್ಯತೆಯೊಂದಿಗೆ ಈಗಿರುವ 399 ರೂ. ಪ್ಲಾನ್ 479 ರೂ. ಆಗಲಿದ್ದು, 449 ರೂ ಯೋಜನೆ 549 ರೂ. ಕ್ಕೆ ಹೆಚ್ಚಿಸಲಾಗಿದೆ.

    ಪ್ರಧಾನಿಗೆ ಬಹಿರಂಗ ಪತ್ರ: ರೈತರ ಸ್ಮಾರಕ, ಸಚಿವರ ವಜಾ ಸೇರಿದಂತೆ ಆರು ಬೇಡಿಕೆ ಇಟ್ಟ ಮೋರ್ಚಾ: ಏನೇನಿವೆ ಇದರಲ್ಲಿ?

    ನ.26ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆತಂಕ! ಯಾವ್ಯಾವ ಭಾಗಗಳಲ್ಲಿ ಏನೇನು? ಹವಾಮಾನ ಇಲಾಖೆ ಮಾಹಿತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts