More

    ಪರಿಸರ ಮಾಲಿನ್ಯ ಮಾಡಿದ್ರೆ 5 ವರ್ಷ ಶಿಕ್ಷೆ, ₹ 1 ಕೋಟಿ ದಂಡ! ಸುಗ್ರೀವಾಜ್ಞೆ

    ನವದೆಹಲಿ: ಕರೊನಾದ ಸಮಯದಲ್ಲಿ ಉಂಟಾಗಿದ್ದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ವಿಪರೀತ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಶುರುವಾಗಿದೆ. ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ಮಾಲಿನ್ಯದಿಂದಾಗಿ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ…

    ಇದನ್ನೀಗ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆ ಹೊರಡಿಸಿದ್ದು, ಮಾಲಿನ್ಯ ಉಂಟು ಮಾಡುವವರಿಗೆ ಒಂದು ಕೋಟಿ ರೂಪಾಯಿಗಳ ಬೃಹತ್​ ದಂಡ ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ!

    ಯಾವುದೇ ಸಂಘಸಂಸ್ಥೆ, ಕಾರ್ಖಾನೆಗಳು ಸೇರಿದಂತೆ ಮಾಲಿನ್ಯ ಉಂಟು ಮಾಡುವವರಿಗೆ ಈ ಶಿಕ್ಷೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ನಿನ್ನೆ ತಡರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಾಲಿನ್ಯ ಉಂಟು ಮಾಡುವವರಿಗೆ ಈ ಶಿಕ್ಷೆ ಶತಃಸಿದ್ಧವಾಗಿದೆ.

    ದೆಹಲಿ, ಹರಿಯಾಣ, ಪಂಜಾಬ್, ಉತ್ತರಪ್ರದೇಶ ರಾಜಸ್ಥಾನ ಸೇರಿದಂತೆ ಹಲವೆಡೆಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಇತ್ತೀಚೆಗೆ ಪರಿಸರ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 18 ಮಂದಿ ತಜ್ಞರ ಆಯೋಗವೊಂದನ್ನು ರಚಿಸಿದೆ.

    ಇದನ್ನೂ ಓದಿ: 65ನೇ ವಯಸ್ಸಲ್ಲಿ ಮದುಮಗನಾದ ಹಿರಿಯ ವಕೀಲ ಸಾಳ್ವೆ- ಸೆಕೆಂಡ್​ ಇನ್ನಿಂಗ್ಸ್​ ಶುರು

    ಆಯಾ ರಾಜ್ಯಗಳಲ್ಲಿ ಮುಖ್ಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರಾಗಿರುತ್ತಾರೆ. 18 ಮಂದಿ ನೇತೃತ್ವದ ಆಯೋಗದಲ್ಲಿ ಅಧಿಕಾರಿಗಳು, ಪರಿಸರ ತಜ್ಞರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಮತ್ತಿತರು ಒಳಗೊಂಡಿರುತ್ತಾರೆ. ಯಾವುದೇ ಸಂಸ್ಥೆಗಳು, ಕಾರ್ಖಾನೆಗಳು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿದರೆ ವಿದ್ಯುತ್, ನೀರು ಕಡಿತ ಹಾಗೂ ಬೀಗ ಮುದ್ರೆ ಹಾಕುವ ಅಧಿಕಾರ ಈ ಆಯೋಗಕ್ಕೆ ಇರುತ್ತದೆ.

    ಪರಿಸರ ಖಾತೆ ಸಚಿವರು ಹಾಗೂ ಇತರ ಮೂವರು ಸಚಿವರು ಆಯೋಗಕ್ಕೆ ಪ್ರತಿ ಮೂರು ವರ್ಷಕ್ಕೊಮ್ಮೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ. ಅರಣ್ಯ ಸಚಿವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದು, ಇವರಿಗೆ ಇತರ ಮೂವರು ಸಚಿವರ ಸದಸ್ಯರನ್ನು ನೇಮಕ ಮಾಡಬೇಕು.

    ಈಗಾಗಲೇ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚನೆ ಮಾಡಿದ್ದರೂ ಇದಕ್ಕೆ ಪರ್ಯಾಯವಾಗಿ ಈ ಆಯೋಗವನ್ನು ರಚಿಸಲಾಗಿದೆ.

    65ನೇ ವಯಸ್ಸಲ್ಲಿ ಮದುಮಗನಾದ ಹಿರಿಯ ವಕೀಲ ಸಾಳ್ವೆ- ಸೆಕೆಂಡ್​ ಇನ್ನಿಂಗ್ಸ್​ ಶುರು

    ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

    ಗಂಡ ವಿಚಾರಣೆಗೆ ಬರದೇ ಡಿವೋರ್ಸ್​ ಅರ್ಜಿ ವಜಾ ಆದ್ರೆ ಮತ್ತೆ ಹಾಕ್ಬೋದಾ?

    ಬಡ್ತಿಯಲ್ಲಿನ ಅಸಮಾಧಾನ? ಐಪಿಎಸ್​ ಅಧಿಕಾರಿ ದಿಢೀರ್​ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts