More

    ಆರು ವರ್ಷ ಕರ್ನಾಟಕದಲ್ಲಿ ಸದ್ದುಮಾಡಿದ್ದ ‘ಅಗ್ನಿಸಾಕ್ಷಿ’ಯೀಗ ಮಹಾರಾಷ್ಟ್ರದಲ್ಲಿ ‘ಸೋನಾಚಿ ಪಾವಲೆ’

    ಬೆಂಗಳೂರು: ಅಗ್ನಿಸಾಕ್ಷಿ… ಎಂದರೆ ಸಾಕು, ಚಿಕ್ಕಮಕ್ಕಳಿಂದ ಹಿಡಿದು ಧಾರಾವಾಹಿ ಪ್ರಿಯರೆಲ್ಲರೂ ರಾಗವಾಗಿ ಹೇಳುತ್ತಾರೆ. ಆರು ವರ್ಷಗಳಿಂದ ಕರ್ನಾಟಕದಲ್ಲಿ ಹೆಚ್ಚಿನ ಮಂದಿಯ ಅದರಲ್ಲಿಯೂ ಗೃಹಿಣಿಯರು ಅತಿಪ್ರೀತಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ಅಗ್ನಿಸಾಕ್ಷಿ ಇದೀಗ ಮರಾಠಿಯಲ್ಲಿ ರೀಮೇಕ್‌ ಆಗಿದ್ದು, ಪ್ರಸಾರಕ್ಕೆ ಸಿದ್ಧವಾಗಿದೆ.

    ಸೋನಾಚಿ ಪಾವಲೆ ಹೆಸರಿನಲ್ಲಿ ಇದು ರೀಮೇಕ್‌ ಆಗಿದ್ದು, ನಾಯಕ, ನಾಯಕಿಯರಾಗಿ ಹೊಸಮುಖಗಳನ್ನು ಕಿರುತೆರೆಗೆ ಪರಿಚಯ ಮಾಡಲಾಗುತ್ತದೆ ಎನ್ನಲಾಗಿದೆ. ಟಿಆರ್‌ಪಿಯಲ್ಲಿಯೂ ಮುಂದಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ-ನಾಯಕಿಯಾಗಿದ್ದ ವಿಜಯ ಸೂರ್ಯ ಹಾಗೂ ವೈಷ್ಣವಿ ಗೌಡ ಕೂಡ ಇದೇ ಧಾರಾವಾಹಿಯಿಂದ ಬಹು ಜನಪ್ರಿಯತೆ ಗಳಿಸಿದವರು. ಸಿದ್ದಾರ್ಥ್, ಸನ್ನಿಧಿಯೆಂದೇ ಫೇಮಸ್‌ ಆಗಿದ್ದ ಇವರ ನೈಜ ಹೆಸರು ಕೂಡ ಇದೇ ಎಂದುಕೊಂಡವರು ಕೆಲವರು. ಆರು ವರ್ಷಗಳ ಸುದೀರ್ಘ ಪ್ರಯಾಣದ ನಂತರ ಕಳೆದ ವರ್ಷ ಧಾರಾವಾಹಿ ಮುಕ್ತಾಯಗೊಂಡಿದೆ.

    ಅಂದಹಾಗೆ, ಸೋನಾಚಿ ಪಾವಲೆ ಜುಲೈ 5ರಿಂದ ಪ್ರಸಾರವಾಗಲಿದೆ. ಇದರಲ್ಲಿ ಆದಿತ್ಯಾ ಧ್ರುವಾ ಹಾಗೂ ಜ್ಯೋತಿ ನಿಮ್ಶೆ ನಾಯಕ-ನಾಯಕಿಯಾಗಿ ನಟಿಸಲಾಗಿದ್ದಾರೆ. ಈ ಹಿಂದೆ ಅಗ್ನಿಸಾಕ್ಷಿ ತಮಿಳಿನಲ್ಲಿಯೂ ತಯಾರಾಗಿತ್ತು. ಕನ್ನಡದಲ್ಲಿ ಅನೇಕ ಧಾರಾವಾಹಿಗಳನ್ನು ತೆಲುಗು, ತಮಿಳು, ಹಿಂದಿಯಿಂದ ಪಡೆದು ರಿಮೇಕ್ ಮಾಡಲಾಗುತ್ತಿದೆ. ಇದೀಗ ಕನ್ನಡದ ಧಾರಾವಾಹಿ ಬೇರೆ ಭಾಷೆಗೆ ರೀಮೇಕ್‌ ಆಗುತ್ತಿರುವುದಕ್ಕೆ ಕಿರುತೆರೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ.

    ಮತ್ತೊಂದು ಮಗುವನ್ನು ಪರಿಚಯಸುತ್ತಿರುವೆ ಎಂದು ಅಭಿಮಾನಿಗಳಿಗೆ ಶಾಕ್‌ ನೀಡಿದ ನಟಿ ರಾಧಿಕಾ

    ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts