More

    ಕನಸಿನ ವಧುವಿಗೆ ವಕೀಲ ಹಾಕಿದ್ದಾನೊಂದು ಕಂಡೀಷನ್:​ ಸಿಗಲು ಸಾಧ್ಯನಾ? ಏನಂತೀರಿ ನೀವು?

    ಕೋಲ್ಕತಾ: ತಾವು ಮದುವೆಯಾಗುವವರು ಹೀಗೆ ಇರಬೇಕು, ತಮ್ಮ ಬಾಳಸಂಗಾತಿಯಾಗುವವರು ಹೀಗೇ ಇರಬೇಕು ಎಂದು ಬಹುತೇಕ ಎಲ್ಲರೂ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಕೆಲವರಿಗೆ ಅವರು ಅಂದುಕೊಂಡಂಥವರೇ ಸಿಕ್ಕರೆ, ಇನ್ನು ಹಲವರಿಗೆ ಏನೋ ನಿರಾಸೆ. ತಾವು ಅಂದುಕೊಂಡ ಪರಿಪೂರ್ಣ ಹುಡುಗ- ಹುಡುಗಿ ಸಿಗಲಿಲ್ಲ ಎಂಬ ಬೇಸರ.

    ಅದೇನೇ ಇರಲಿ. ಆದರೆ ಮದುವೆಗೆ ವಧು ಬೇಕಾಗಿದ್ದಾಳೆ, ವರ ಬೇಕಾಗಿದ್ದಾನೆ ಎಂದು ಜಾಹೀರಾತು ಕೊಡುವಾಗ ಕೆಲವೊಂದು ವಿಷಯಗಳು ಕಾಮನ್​ ಇರುತ್ತವೆ. ಇಂಥ ಜಾತಿಯ, ಇಂಥ ಗೋತ್ರದ, ಇಷ್ಟು ಹೈಟ್​ ಇರುವ, ಇಂಥ ಕೆಲಸದಲ್ಲಿ ಇರುವ, ಇಷ್ಟು ಓದಿರುವ… ಹೀಗೆ ಕೆಲವೊಂದು ಕಾಮನ್​ ವಿಷಯಗಳ ಉಲ್ಲೇಖ ಮಾಡುವುದು ಮಾಮೂಲು.

    ಅದರಂತೆಯೇ, ವಧುವನ್ನು ಹುಡುಕುವ ಬಹುತೇಕ ಯುವಕರು ತಮ್ಮನ್ನು ವರಿಸುವಾಕೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಅಂದುಕೊಳ್ಳುವುದು ಸಹಜ, ಹೆಚ್ಚಿನ ವೇಳೆ ಅದನ್ನು ವಧು ಬೇಕಾಗಿದ್ದಾಳೆ ಕಾಲಂನಲ್ಲಿಯೂ ಉಲ್ಲೇಖ ಮಾಡಿರುತ್ತಾರೆ.

    ಇಲ್ಲೊಬ್ಬ ವಕೀಲ, ಅಂಥದ್ದೇ ಒಂದು ಜಾಹೀರಾತು ನೀಡಿದ್ದಾರೆ. ಆದರೆ ಈ ಜಾಹೀರಾತು ಮಾತ್ರ ಸಕತ್​ ವೈರಲ್​ ಆಗಿದೆ. ಅದಕ್ಕೆ ಕಾರಣ ಏನು ಗೊತ್ತಾ? ತಾವು ಸುಂದರವಾಗಿದ್ದು, ಉತ್ತಮ ಸ್ಥಿತಿವಂತರಾಗಿದ್ದು, ಯಾವುದೇ ಚಟಕ್ಕೆ ದಾಸನಾಗಿಲ್ಲ ಎಂದು ತಮ್ಮ ಬಗ್ಗೆ ಬರೆದುಕೊಂಡಿರುವ ಈ ವಕೀಲ, ವಧು, ಎತ್ತರವಾಗಿ, ತೆಳ್ಳಗೆ, ಬೆಳ್ಳಗೆ, ಸುಂದರವಾಗಿರಬೇಕು ಎಂದೆಲ್ಲಾ ಮಾಮೂಲಾಗಿ ಬರೆದಿದ್ದಾರೆ. ಆದರೆ ಕೊನೆಯಲ್ಲಿ “ವಧು ಸೋಶಿಯಲ್ ಮೀಡಿಯಾಗೆ ಎಡಿಕ್ಟ್ ಆಗಿರಬಾರದು” ಎಂಬ ಕಂಡೀಷನ್​ ಹಾಕಿದ್ದಾರೆ!

    ಪತ್ರಿಕೆಯೊಂದರಲ್ಲಿ ಬಂದಿರುವ ಈ ಜಾಹೀರಾತನ್ನು ಐಎಎಸ್ ಅಧಿಕಾರಿ ನಿತಿನ್ ಸಂಘ್ವಾನ್ ಎಂಬುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ಉಲ್ಲೇಖ ಮಾಡಿದ್ದು, ‘ವಧು/ವರರೇ ಇತ್ತ ಗಮನ ಕೊಡಿ ಮದುವೆ ಹೊಂದಾಣಿಕೆಯ ಮಾನದಂಡಗಳು ಬದಲಾಗಿವೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿಯೇ ಮುಳುಗಿರುವ ಬಹುತೇಕ ಲಲನೆಯರು ಇರುವ ಈ ದಿನಗಳಲ್ಲಿ, ವಕೀಲನ ಮನದನ್ನೆ ಸಿಗಲು ಸಾಧ್ಯವೆ? ನಿಮ್ಮ ಅನಿಸಿಕೆ ಏನು?

    ₹500 ದಂಡ ಹಾಕಿದ್ದಕ್ಕೆ ₹10 ಲಕ್ಷ ಪರಿಹಾರ! ವಕೀಲನ ವಿರುದ್ಧ ಹೋಗಿ ಪೇಚಿಗೆ ಸಿಲುಕಿದ ಪೊಲೀಸ್

    ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!

    ಡಿಕೆಶಿಗೆ ಡಬಲ್​ ಶಾಕ್​! ಆದಾಯ ಮೀರಿ ಆಸ್ತಿ ಗಳಿಕೆ ಆರೋಪ- ದಾಖಲಾಯ್ತು ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts