More

    ಲಿಖಿತ ಪರೀಕ್ಷೆಯಲ್ಲಿ ಆಂತರಿಕ ಅಂಕ ಕಡಿಮೆ! ಸಿಎಂ ಭೇಟಿ‌‌‌ ಬಳಿಕ ಶಾಸಕ ರಾಮದಾಸ್ ಒಗಟಿನ ಹೇಳಿಕೆ

    ಬೆಂಗಳೂರು: ನಾನು ಯಾವಾಗಲೂ ಮೆರಿಟ್‌ ನಲ್ಲಿ ಪಾಸಾಗುವ ವಿದ್ಯಾರ್ಥಿ. ಮ್ಯಾನೇಜ್ಮೆಂಟ್ ಕೋಟಾಗಿಂತ ಪ್ರತಿಭೆಯನ್ನು ನೆಚ್ಚಿಕೊಂಡಿರುವೆ‌. ಲಿಖಿತ ಪರೀಕ್ಷೆ ಚೆನ್ನಾಗಿ ಬರೆದಿದ್ದರೂ ಆಂತರಿಕ ಅಂಕಗಳು ಕಡಿಮೆಯಾಗಿದ್ದೇಕೆ ? ಎಂದು ಗೊತ್ತಾಗುತ್ತಿಲ್ಲ ಎಂದು ಮೈಸೂರು ಜಿಲ್ಲೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಒಗಟಿನ ಮಾತು.

    ಸಚಿವ ಸ್ಥಾನ ಸಿಗದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಆರ್ ಟಿ ನಗರದ ಸಿಎಂ ಬಸವರಾಜ ಬೊಮ್ಮಾಯಿ‌ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನವಿಲ್ಲ. ಆದರೆ ಸಂಘ- ಪರಿವಾರದ ನೆಲೆಯಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ ಕಾರ್ಯಕರ್ತರನ್ನು ಪರಿಗಣಿಸಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯವಷ್ಟೇ ಎಂದರು.

    ಸಿಎಂ ಬೊಮ್ಮಾಯಿ‌ ಅವರಿಗೆ ನಾಲ್ಕು ಪುಟಗಳ ಲಿಖಿತ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿರುವೆ. ಮಂತ್ರಿ ಸ್ಥಾನ ವಂಚಿತನಾಗಿದ್ದಕ್ಕೆ ಅಸಮಾಧಾನ ತೋಡಿಕೊಂಡಿಲ್ಲ. ಮೈಸೂರು ಭಾಗದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆ ವಿಚಾರಗಳನ್ನು ಪ್ರಸ್ತಾಪಿಸಿರುವೆ. ಅಂತಹ ವಿಶೇಷತೆ ಏನಿಲ್ಲವೆಂದು ರಾಮದಾಸ್ ಸ್ಪಷ್ಟಪಡಿಸಿದರು.

    ಸಿಪಿವೈ ಭೇಟಿ
    ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಅತೃಪ್ತರಾಗಿರುವ‌ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಬೊಮ್ಮಾಯಿ‌ಗೆ ಭೇಟಿಯಾದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಇದೇ ಮೊದಲ ಬಾರಿಯಲ್ಲ. ಹಿಂದೆಯೂ 2-3 ಬಾರಿ‌ ಭೇಟಿ ಮಾಡಿರುವೆ. ಸಚಿವ ಸ್ಥಾನದಿಂದ ಕೈಬಿಟ್ಟಿದ್ದರೂ‌ ಬೇಸರವಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಗಾಗಿ ದುಡಿಯುವೆ,‌ ಪಕ್ಷದ ನಾಯಕರ ಸೂಚನೆ ಪಾಲಿಸುವೆ ಎಂದು ಸಿಪಿವೈ ಹೇಳಿದರು.

    ಯಾವುದು ಭಾರತೀಯ ಮಹಿಳೆಯರನ್ನು ಸ್ವತಂತ್ರವಾಗಿಸುತ್ತದೆ? ಹರ್​ ಸರ್ಕಲ್​ನಿಂದ ವಿಶೇಷ ವಿಡಿಯೋ ಬಿಡುಗಡೆ

    ಆಗಸ್ಟ್​ 14 ಇನ್ಮುಂದೆ ವಿಭಜನಾ ವಿಭಿಶಿಕಾ ಸ್ಮೃತಿ ದಿವಸ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

    ಕಿಡಿಗೇಡಿಗಳು ಮಾಡಿದ ಆ ಒಂದು ಕೃತ್ಯಕ್ಕೆ ನೋವಿನಲ್ಲಿ ದಿನ ದೂಡುತ್ತಿರುವ ಮಹಿಳೆಯ ಕಣ್ಣೀರ ಕತೆಯಿದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts