More

    ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!

    ಶ್ರೀನಗರ: ಜಮ್ಮುವಿನ ಗಡಿಯಲ್ಲಿ ನಿರಂತರ ಗುಂಡಿನ ಸದ್ದು ಕೇಳುತ್ತಲೇ ಇದೆ. ಉಗ್ರರ ಗುಂಪು ಸದಾ ಭಾರತೀಯ ಯೋಧರ ಮೇಲೆ ಗುಂಡಿನ ಕಾಳಗ ನಡೆಸುವಲ್ಲಿ ನಿರತವಾಗಿದೆ. ಆದರೆ ಭಾರತೀಯ ಯೋಧರು ಸಾಧ್ಯವಾದಷ್ಟು ಮಟ್ಟಿಗೆ ಈ ಉಗ್ರರ ಮನವೊಲಿಸಿ ಶರಣಾಗುವಂತೆ ಮಾಡುತ್ತಿದ್ದಾರೆ. ಅವು ಯಾವುವೂ ಪ್ರಯೋಜನಕ್ಕೆ ಬಾರದಾಗ ಎನ್​ಕೌಂಟರ್​ ಮಾಡಿ ಹೊಡೆದುರುಳಿಸುತ್ತಿದ್ದಾರೆ.

    ಸಾಮಾನ್ಯವಾಗಿ ಉಗ್ರರು ಅಡಗಿರುವ ತಾಣವನ್ನು ಪತ್ತೆ ಹಚ್ಚುವ ಭಾರತೀಯ ಯೋಧರು ಅವರಿಗೆ ಶರಣಾಗಲು ಅವಕಾಶ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಅಲ್ಲಿರುವ ಉಗ್ರರ ಜಾತಕವನ್ನು ಜಾಲಾಡುವ ಯೋಧರು ಅವರ ಮನೆಯವರಿಗೆ ಮೊದಲು ವಿಷಯ ಮುಟ್ಟಿಸುತ್ತಾರೆ.
    ಉಗ್ರನ ಪತ್ನಿ, ತಾಯಿ, ಮಕ್ಕಳು… ಹೀಗೆ ಅವರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆತಂದು ಅವರಿಂದಲೇ ಶರಣಾಗುವಂತೆ ಹೇಳಿಸಲಾಗುತ್ತದೆ. ಕೆಲವೇ ಕೆಲವು ಘಟನೆಗಳಲ್ಲಿ ಉಗ್ರರು ತಮ್ಮವರ ಮಾತು ಕೇಳಿ ಶರಣಾದರೆ, ಹಲವು ಉಗ್ರರು ಮಾತು ಕೇಳದೇ ಗುಂಡಿನ ಚಕಮಕಿ ಮುಂದುವರೆಸುತ್ತಾರೆ.

    ಇಂಥ ಘಟನೆ ಸಾಮಾನ್ಯವಾಗಿದ್ದರೂ, ಇದೊಂದು ಮಾತ್ರ ತುಂಬಾ ನೋವು ತಂದ ಘಟನೆಯಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಅಡಗಿ ಕುಳಿತಿದ್ದ ಉಗ್ರರ ವಿರುದ್ಧ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ವೇಳೆ ಒಬ್ಬ ಉಗ್ರನ ಶರಣಾಗತಿಗೆ ಮನವೊಲಿಸಲು ಆತನ ಕುಟುಂಬ ಸದಸ್ಯರನ್ನು ಕರೆ ತಂದಿದ್ದರು. ಆ ವೇಳೆ ಉಗ್ರನ ನಾಲ್ಕು ವರ್ಷದ ಮಗ ಬಂದಿದ್ದನು. 25 ವರ್ಷದ ಉಗ್ರ ಅಕ್ವಿಬ್ ಅಹ್ಮದ್ ಮಲಿಕ್ ಮೂರು ತಿಂಗಳ ಹಿಂದಷ್ಟೆ ಕಾಶ್ಮೀರದಲ್ಲಿ ಉಗ್ರರ ಗುಂಪು ಸೇರಿಕೊಂಡಿದ್ದನು. ಅವನ ನಾಲ್ಕು ವರ್ಷದ ಮಗ ಅಲ್ಲಿಗೆ ಬಂದು ಅಪ್ಪನನ್ನು ಅಂಗಲಾಚಿದ್ದಾನೆ.

    ಕಾರ್ಯಾಚರಣೆಯ ಮಧ್ಯದಲ್ಲಿ ಲೌಡ್ ಸ್ಪೀಕರ್‌ಗಳನ್ನು ತಂದಿದ್ದ ಸೇನಾ ಸಿಬ್ಬಂದಿ, ಉಗ್ರನ ಕುಟುಂಬದ ಮೂಲಕ ಆತನ ಶರಣಾಗತಿಗೆ ಮನವಿ ಮಾಡಿಸಿದೆ. ಅಬ್ಬಾಜಾನ್​… ದಯವಿಟ್ಟು ಹೊರಕ್ಕೆ ಬನ್ನಿ. ಶರಣಾಗಿ… ಯೋಧರು ನಿಮಗೆ ಏನೂ ಮಾಡುವುದಿಲ್ಲ. ರಕ್ಷಣೆ ಕೊಡುತ್ತಾರೆ…. ಇಲ್ಲದಿದ್ದರೆ ಗುಂಡು ಹಾರಿಸುತ್ತಾರೆ… ದಯವಿಟ್ಟು ಬನ್ನಿ… ಎಂದು ನಾಲ್ಕು ವರ್ಷದ ಮಗು ಗೋಗರೆದಿದ್ದಾನೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.

    ‘ದಯವಿಟ್ಟು ಹೊರಗೆ ಬಂದು ಶರಣಾಗಿ. ನಮ್ಮ ಮಕ್ಕಳೂ ನನ್ನೊಂದಿಗೆ ಬಂದಿದ್ದಾರೆ. ಹೊರಗೆ ಬಂದು ಶರಣಾಗಿ. ಇಲ್ಲದಿದ್ದರೆ ನಮ್ಮನ್ನೂ ನೀವೇ ಶೂಟ್ ಮಾಡಿ ಸಾಯಿಸಿ ಎಂದು ಉಗ್ರ ಅಕ್ವಿಬ್‌ನ ಪತ್ನಿ ಧ್ವನಿವರ್ಧಕದಲ್ಲಿ ಗೋಗರೆದಿದ್ದಾರೆ. ಒಂದು ಹಂತದಲ್ಲಿ ಈ ಉಗ್ರ ಶರಣಾಗಲು ರೆಡಿಯಾದರೂ ಸಹಚರರು ಅವನನ್ನು ತಡೆದ ಕಾರಣ, ಗುಂಡಿನ ದಾಳಿ ಮುಂದುವರೆಸಿದ್ದಾನೆ ಅಕ್ವಿಬ್​. ಬೇರೆ ದಾರಿ ಕಾಣದೇ ಯೋಧರು ಎನ್​ಕೌಂಟರ್​ ಮಾಡಿ ಅಕ್ವಿಬ್​ ಸೇರಿದಂತೆ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

    ಉಗ್ರನ ಹೆಂಡತಿ ಮತ್ತು ಮಗು ಆತನಿಗೆ ಶರಣಾಗುವಂತೆ ಮನವಿ ಮಾಡಿದರು. ಅಕ್ವಿಬ್ ಶರಣಾಗತಿಗೆ ಇಚ್ಛಿಸಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವನ ಸಹಚರರು ಅವನನ್ನು ತಡೆದರು’ ಎಂದು ಭಾರತೀಯ ಸೇನೆಯ ಮೇಜರ್ ಜನರಲ್ ರಶೀಮ್ ಬಾಲಿ ಹೇಳಿದ್ದಾರೆ. (ಏಜೆನ್ಸೀಸ್​)

    ಪೊಲೀಸರಿಗೆ ₹200 ದಂಡ ಕೊಡದೇ ವಕೀಲರಿಗೆ ₹10 ಸಾವಿರ ಫೀಸ್‌ ಕೊಟ್ಟು ಕೇಸ್‌ ಗೆದ್ದ ಉದ್ಯಮಿ!

    ಲಾಕ್‌ಡೌನ್‌ ಅವಧಿಯಲ್ಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ವಿವಾದ: ಸುಪ್ರೀಂ‌ಕೋರ್ಟ್‌ ಏನು ಹೇಳಿದೆ ನೋಡಿ…

    ಹೆಂಡ್ತಿ ಕಳ್ಳತನ ಮಾಡ್ತಾಳೆ, ಗಲ್ಲಿಗಲ್ಲಿ ತಿರಗ್ತಾಳೆ, ಒಬ್ಬಳೇ ನಗ್ತಾಳೆ- ಭಯವಾಗ್ತಿದೆ, ಇದೇನಿದು ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts