More

    ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ವಿಡಿಯೋ ವೈರಲ್​: 26 ಮಂದಿ ಬಂಧನ

    ಕರಾಚಿ: ವಾಯುವ್ಯ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಆರೋಪದಡಿ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದುಷ್ಕರ್ವಿುಗಳ ಗುಂಪೊಂದು ದೇವಾಲಯದ ಮೇಲೆ ದಾಳಿ ನಡೆಸಿ, ಪೂಜಾ ಸ್ಥಳವನ್ನು ಸಂಪೂರ್ಣ ಧ್ವಂಸಗೊಳಿಸಿ, ಬೆಂಕಿ ಹಚ್ಚಿರುವ ಪ್ರಕರಣ ಇದಾಗಿದ್ದು, ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗಲಭೆಕೋರರ ಗುಂಪು ದೇವಾಲಯದ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ನಾಶಪಡಿಸಿದೆ.

    ದೇವಾಲಯವನ್ನು ಇತ್ತೀಚೆಗೆ ಜೀಣೋದ್ಧಾರ ಮಾಡಲಾಗಿತ್ತು. ದುಷ್ಕರ್ವಿುಗಳ ಗುಂಪು ಹಳೆಯ ರಚನೆ ಜತೆಗೆ ಇತ್ತೀಚೆಗೆ ನಡೆಸಲಾದ ಎಲ್ಲ ಕಾಮಗಾರಿಯನ್ನು ಧ್ವಂಸಗೊಳಿಸಿದೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿಶ್ವ ವ್ಯಾಪಿ ಖಂಡನೆ ವ್ಯಕ್ತವಾಗಿದೆ.

    ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ನಾಯಕ ರೆಹಮತ್ ಸಲಾಮ್ ಖಟ್ಟಕ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರೆಹಮನ್ತುಲ್ಲಾ ಖಾನ್‌ ಹೇಳಿದ್ದಾರೆ. ಹಿಂದೂ ದೇವಾಲಯದ ನವೀಕರಣವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಬೆಂಬಲಿಗರು ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ಅವರು ತಿಳಿಸಿದರು.

    ಆರಂಭದಲ್ಲಿ ವಿಷಯ ತಿಳಿದಿದ್ದರೂ ಪೊಲೀಸರು ದೂರು ದಾಖಲು ಮಾಡಿಕೊಂಡಿರಲಿಲ್ಲ. ನಂತರ ಪಾಕಿಸ್ತಾನದ ಸಂಸದೀಯ ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್ ಚಂದ್ ಮಾಲ್ಹಿ, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಮಾಜ ವಿರೋಧಿ ಕೃತ್ಯ ಎಂದು ಘಟನೆ ಸಂಬಂಧ ದೂರು ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈಗ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ವಿಡಿಯೋ ವೈರಲ್​: 26 ಮಂದಿ ಬಂಧನ

    ಇದಕ್ಕೆ ದೇಶವ್ಯಾಪಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಅಥವಾ ಸ್ಥಳೀಯ ಪಡೆಗಳು ಜನಸಮೂಹವನ್ನು ತಡೆಯಲಿಲ್ಲ ಏಕೆಂದರೆ, ಅವರು ಅಲ್ಲಾಹ್-ಒ-ಅಕ್ಬರ್ ಎಂದು ಜಪಿಸುತ್ತಿದ್ದರು. ಇದೊಂದು ನಾಚಿಕೆಗೇಡಿನ ದಿನ, ಖಂಡನೆಗೂ ಮೀರಿದ್ದೂ ಎಂದು ಲಂಡನ್​ನ ಮಾನವ ಹಕ್ಕುಗಳ ಕಾರ್ಯಕರ್ತ ಟ್ವೀಟ್ ಮಾಡಿದ್ದಾರೆ.

    ದುಷ್ಕರ್ವಿುಗಳು ಧ್ವಂಸಗೊಳಿಸಿದ ದೇವಸ್ಥಾನದಲ್ಲಿ ಹಿಂದು ಧಾರ್ವಿುಕ ಮುಖಂಡರೊಬ್ಬರ ಸಮಾಧಿ ಇದೆ. ದೇಶಾದ್ಯಂತದ ಭಕ್ತರು ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ ಎಂದು ಪಾಕ್​ನ ಹಿಂದು ಸಮುದಾಯದ ಮುಖಂಡ ಹರುನ್ ಸಾರಬ್ ದಿಯಾಲ್ ಹೇಳಿದ್ದಾರೆ.

    ಜನವರಿಯಲ್ಲಿ ಬ್ಯಾಂಕ್​ಗಳಿಗೆ ಇರುವ ರಜೆ ಎಷ್ಟು? 1ರಂದು ರಜೆ ಇದ್ಯಾ? ಇಲ್ಲಿದೆ ನೋಡಿ ವಿವರ…

    ಜಿಯೋ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್​: ದೇಶಾದ್ಯಂತ ಉಚಿತ ಕರೆ ಸೇವೆ

    ನೀನು ಬೇಡ, ಗರ್ಭದಲ್ಲಿರುವ ಮಗು ಬೇಕು ಅಂತಿದ್ದಾರೆ- ಡಿವೋರ್ಸ್​ ಆದ್ರೆ ಮುಂದೇನು?

    ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts